Advertisement

ಆಸರೆ ಮನೆಗಳಿಗೆ ಸೌಲಭ್ಯ

12:10 PM Nov 12, 2019 | Team Udayavani |

ಅಮೀನಗಡ: ಚಿತ್ತರಗಿಯಲ್ಲಿರುವ ಆಸರೆ ಮನೆಗಳಿಗೆ ಮೂಲಭೂತ ಸೌಲಭ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

Advertisement

ಚಿತ್ತರಗಿಯಲ್ಲಿ ಲಿಂ| ವಿಜಯಮಹಾಂತ ಶಿವಯೋಗಿಗಳ ಜಾತ್ರಾ ಮಹೋತ್ಸವ ಪ್ರಯುಕ್ತ ಹಮ್ಮಿಕೊಂಡ ಧರ್ಮಚಿಂತನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 2009ರಲ್ಲಿ ಚಿತ್ತರಗಿಯಲ್ಲಿ ನಿರ್ಮಾಣ ಮಾಡಿರುವ ಆಸರೆ ಮನೆಗಳಲ್ಲಿ ಮೂಲಭೂತ ಸೌಲಭ್ಯ ಒದಗಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಶಾಸಕ ದೊಡ್ಡನಗೌಡ ಪಾಟೀಲ ಸಭೆಯಲ್ಲಿ ಗಮನಕ್ಕೆ ತಂದಿದ್ದಾರೆ. ಈಗಾಗಲೇ ಚಿತ್ತರಗಿ ಗ್ರಾಮದಲ್ಲಿರುವ ಆಸರೆ ಮನೆಗಳಿಗೆ ಮೂಲಭೂತ ಸೌಲಭ್ಯ ಒದಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಲಾಗಿದೆ.

ಗ್ರಾಮದಲ್ಲಿ ಆಸರೆ ಮನೆಗಳು ಲಭ್ಯವಾಗಿರುವ ಕುಟುಂಬದವರು ಆಸರೆ ಮನೆಗಳಿಗೆ ಹೋಗುವಂತ ಪ್ರಯತ್ನ ಮಾಡಬೇಕು. ಚಿತ್ತರಗಿ ಗ್ರಾಮವನ್ನು ಮುಳುಗಡೆ ಗ್ರಾಮವನ್ನಾಗಿ ಮಾಡಲು ಸಾಧ್ಯವಿಲ್ಲ. ಕಾನೂನಿನಲ್ಲಿ ಅದಕ್ಕೆ ಅವಕಾಶವಿಲ್ಲ. ಆದರೆ, ಆಸರೆ ಮನೆಗಳಿಗೆ ಮೂಲಭೂತ ಸೌಲಭ್ಯ ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ಚಿತ್ತರಗಿ ಗ್ರಾಮವನ್ನು ಮುಳುಗಡೆ ಗ್ರಾಮ ಎಂದು ಪರಿಗಣಿಸಲು ಕಾನೂನು ಅಡೆತಡೆಯಾಗಿದೆ. ಚಿತ್ತರಗಿ ಆಸರೆ ಮನೆಗಳಿಗೆ ಮೂಲಸೌಲಭ್ಯ ಒದಗಿಸಲಾಗುವುದು. ಈ ಭಾಗದ ಒಂಭತ್ತು ಗ್ರಾಮಗಳಲ್ಲಿ ಸುಮಾರು 4000ಕ್ಕೂ ಹೆಚ್ಚು ಆಸರೆ ಮನೆ ನಿರ್ಮಿಸಲಾಗಿದೆ ಆದರೆ ಹಕ್ಕು ಪತ್ರ ವಿತರಣೆ ಮಾಡಿದರೂ ಕೂಡಾ ಕೇವಲ ಶೇ. 20 ಜನ ಮಾತ್ರ ಆಸರೆ ಮನೆಗಳಿಗೆ ಹೋಗಿದ್ದಾರೆ. ಚಿತ್ತರಗಿ ಗ್ರಾಮದಲ್ಲಿ ನಿರ್ಮಾಣವಾಗಿರುವ ಆಸರೆ ಮನೆಗಳ ಹಕ್ಕು ಪತ್ರ ವಿತರಣೆ ಮಾಡಿಲ್ಲ. ಮುಂಬರುವ ದಿನಗಳಲ್ಲಿ ಆಸರೆ ಮನೆಗಳ ಹಕ್ಕು ಪತ್ರ ವಿತರಣೆ ಮಾಡಲಾಗುವುದು ಎಂದು ಮನವಿ ಮಾಡಿದರು.

ಶಾಸಕ ಡಾ| ವೀರಣ್ಣ ಚರಂತಿಮಠ, ಮಧರಖಂಡಿ ಬಸವಜ್ಞಾನ ಗುರುಕುಲದ ಶರಣ ಡಾ| ಈಶ್ವರ ಮಂಟೂರ ಮಾತನಾಡಿದರು. ದಿಂಗಾಲೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ, ಚಿತ್ತರಗಿ ಸಂಸ್ಥಾನಮಠದ ಗುರುಮಹಾಂತ ಸ್ವಾಮೀಜಿ, ಗಚ್ಚಿನಮಠದ ಶಂಕರರಾಜೇಂದ್ರ ಸ್ವಾಮೀಜಿ, ಮುದಗಲ್‌ ಮಹಾಂತ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.

Advertisement

ಇಳಕಲ್‌ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷ ಎಂ.ಜಿ. ಪಟ್ಟಣಶೆಟ್ಟರ, ಇಳಕಲ್ಲ ಚಿತ್ತರಗಿ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷ ತಿಮ್ಮಣ್ಣ ಭೋಗಾಪುರ, ಸಂಗಣ್ಣ ಕಂಪ್ಲಿ, ಶಿವಾನಂದ ಎಂ., ಉದಯ ಕುಲಕರ್ಣಿ, ಗುರುರಾಜ ಕಟ್ಟಿ, ತಾಪಂ ಮಾಜಿ ಸದಸ್ಯ ಎಚ್‌.ಡಿ. ವೈದ್ಯ, ಸಂಗಣ್ಣ ನಿಂಗನಗೌಡರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next