Advertisement
ಅಂಗನವಾಡಿ ಕೇಂದ್ರ ಹಳೆ ಕಟ್ಟಡವಾಗಿದ್ದು, ಈಗಾಗಲೇ ಕಟ್ಟಡದ ಮೇಲ್ಛಾವಣಿ ಸಿಮೆಂಟ್ ಪದರು ಉದರಿ ಬಿಳುತ್ತಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಾಗಿದೆ. ಮಕ್ಕಳ ಪಾಲಕರಲ್ಲಿ ಆತಂಕ ಮನೆ ಮಾಡಿದೆ.
Related Articles
Advertisement
ಅಂಗನವಾಡಿ ಕೇಂದ್ರದ ಮೇಲೆ ನೀರಿನ ಟ್ಯಾಂಕ್ ಇದ್ದರೂ ಅದಕ್ಕೆ ನೀರು ಸರಬರಾಜು ಆಗುತ್ತಿಲ್ಲ. ಹೀಗಾಗಿ ಅಂಗನವಾಡಿ ಸಹಾಯಕಿ ಪ್ರತಿನಿತ್ಯ ಅರ್ಧ ಕಿ.ಮೀ ದೂರದ ನಲ್ಲಿಗಳಿಂದ ನೀರು ತಂದು ಅಡುಗೆ ಮಾಡಿ ಮಕ್ಕಳಿಗೆ ನೀರು ಕುಡಿಯಲು ಕೊಡುವಂತಹ ಸ್ಥಿತಿ ಬಂದಿದೆ. ಮಕ್ಕಳು ಶುದ್ಧ ನೀರು ಸೌಲಭ್ಯದಿಂದ ವಂಚಿತರಾಗಿದ್ದಾರೆ.
ಅಂಗನವಾಡಿ ಶಿಕ್ಷಕಿಯೂ ನಾಪತ್ತೆ
ಅಂಗನವಾಡಿ ಶಿಕ್ಷಕಿ ಮಹೇಶ್ವರಿ ಚೆನ್ನಬಸಯ್ಯ ಸ್ವಾಮಿ ಅವರು ನೇಮಕವಾದ ಬಳಿಕ ಒಂದು ದಿನವೂ ಅಂಗನವಾಡಿ ಕೇಂದ್ರಕ್ಕೆ ಬಂದಿಲ್ಲ. ಅವರ ಬದಲಾಗಿ ಅವರ ಅಜ್ಜಿ ಶಂಕರೆಮ್ಮ ಎರಡು ತಿಂಗಳು ಶಿಕ್ಷಕಿಯಾಗಿ ಕೆಲಸ ಮಾಡಿದ್ದಾರೆ. ಗ್ರಾಮಸ್ಥರು ನೇಮಕವಾದ ಶಿಕ್ಷಕಿಯೇ ಅಂಗನವಾಡಿ ಕೇಂದ್ರಕ್ಕೆ ಬರಬೇಕೆಂದು ತಾಲೂಕು ಶಿಸು ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಈ ಹಿನ್ನೆಲೆ ಚಿಂತಾಕಿ ಗ್ರಾಮದ ಅಂಗನವಾಡಿ ಕೇಂದ್ರದ ಶಿಕ್ಷಕಿ ಶಿವಮಂಗಲಾ ಅವರು ಬೆಲ್ದಾಳ ಅಂಗನವಾಡಿ ಕೇಂದ್ರಕ್ಕೆ ವಾರದಲ್ಲಿ ಎರಡು ದಿನ ಮಾತ್ರ ಪ್ರಭಾರಿ ಜವಾಬ್ದಾರಿ ನೀಡಲಾಗಿದೆ. ಆದರೆ ನೇಮಕವಾದ ಅಂಗನವಾಡಿ ಶಿಕ್ಷಕಿಗೆ ಕರೆ ತರುವಂತಹ ಕೆಲಸ ಮಾತ್ರ ಇಲಾಖೆ ಮಟ್ಟದಲ್ಲಿ ನಡೆದಿಲ್ಲ.
ಬೆಲ್ದಾಳ ಗ್ರಾಮಕ್ಕೆ ವರ್ಷದ ಹಿಂದೆ ಆಯ್ಕೆಯಾದ ಅಂಗನವಾಡಿ ಶಿಕ್ಷಕಿ ಮಹೇಶ್ವರಿ ಸ್ವಾಮಿಗೆ ಇಲಾಖೆಯಿಂದ ಎರಡು ಬಾರಿ ನೋಟಿಸ್ ನೀಡಲಾಗಿದೆ. ಅದಕ್ಕೂ ಅವರು ಉತ್ತರ ನೀಡಿಲ್ಲ. ಹೀಗಾಗಿ ಚಿಂತಾಕಿ ಗ್ರಾಮದ ಶಿಕ್ಷಕಿಗೆ ಎರಡು ದಿನ ಬೆಲ್ದಾಳ ಗ್ರಾಮದ ಪ್ರಭಾರ ನೀಡಲಾಗಿದೆ. -ಶಂಭುಲಿಂಗ ಹಿರೇಮಠ, ಸಿಡಿಪಿಒ
ನಮ್ಮೂರಿನ ಅಂಗನವಾಡಿ ಬಗ್ಗೆ ಅಧಿಕಾರಿಗಳಿಗೆ ಹಲವು ಬಾರಿ ತಿಳಿಸಿದರೂ ಮೆಡಿಕಲ್ ಲೀವ್ ನೀಡಲಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ಬೆಲ್ದಾಳ ಗ್ರಾಮದ ಅಂಗನವಾಡಿ ಶಿಕ್ಷಕಿ ವಿದ್ಯಾಭ್ಯಾಸ ಮಾಡಲು ಬೇರೆ ಜಿಲ್ಲೆಯಲ್ಲಿ ಇದ್ದಾರೆ. ಕಾಲೇಜಿನ ಹಾಜರಾತಿ ಪ್ರತಿಗಳು ನಮ್ಮಲ್ಲಿವೆ. -ಹೆಸರು ಹೇಳಲು ಬಯಸದ ಗ್ರಾಮಸ್ಥ
ಡಿ.30ರಂದು ನಮ್ಮಗೆ ಇಲಾಖೆಯಿಂದ ಆದೇಶ ಬಂದಿದೆ. ಬೆಲ್ದಾಳ ಗ್ರಾಮದ ಅಂಗನವಾಡಿ ಕೇಂದ್ರದ ಪ್ರಭಾರವನ್ನು ವಹಿಸಿ ವಾರದಲ್ಲಿ ಎರಡು ದಿನ ಮಾತ್ರ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ. ಅದರಂತೆ ಕೆಲಸ ಮಾಡುತ್ತಿದ್ದೇನೆ. -ಶಿವಮಂಗಲಾ, ಅಂಗನವಾಡಿ ಪ್ರಭಾರಿ ಶಿಕ್ಷಕಿ