Advertisement
ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತ ಟಿ. ಭೂಬಾಲನ್ ಅಭಿನಂದಿಸಿ, ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಕೀರ್ತಿ ತಂದಿರುವುದು ಕುಂದಾಪುರದ ಹೆಮ್ಮೆ ಎಂದವರು ತಿಳಿಸಿದರು. ಕುಂದಾಪುರ ಎಸ್.ಐ. ಹರೀಶ್ ಆರ್., ರಮೇಶ್ ಕಾಂಚನ್, ವಿಠಲ, ಉದ್ಯಮಿ ಶ್ರೀಶನ್, ಮಹಮ್ಮದ್ ಆರೀಫ್, ಗುರುರಾಜ್ ತಂದೆ ಮಹಾಬಲ ಪೂಜಾರಿ, ಮೊದಲ ದೈಹಿಕ ಶಿಕ್ಷಣ ಶಿಕ್ಷಕ ಸುಕೇಶ್ ಹೆಗ್ಡೆ, ಮತ್ತಿತರರು ಉಪಸ್ಥಿತರಿದ್ದರು. ಜಿಮ್‌ನ ಸತೀಶ್ ನಿರ್ವಹಿಸಿದರು.
ಕುಂದಾಪುರ: ಗುರುರಾಜ್ ಅವರಿಗೆ ಕುಂದಾಪುರ ತಾ| ಬಿಲ್ಲವ ಸಂಘದ ವತಿಯಿಂದ ಗುರುವಾರ ನಾರಾಯಣ ಗುರು ಮಂದಿರದಲ್ಲಿ ಗುರುವಾರ ಅಭಿನಂದನೆ ಸಲ್ಲಿಸಲಾಯಿತು. ಕುಂದಾಪುರದ ಶಾಸ್ತ್ರಿ ಸರ್ಕಲ್‌ನಿಂದ ಮೆರವಣಿಗೆಯಲ್ಲಿ ಅವರನ್ನು ಬಿಲ್ಲವ ಸಂಘದ ಮುಖಂಡರು ಸ್ವಾಗತಿಸಿದರು. ಬಿಲ್ಲವ ಸಂಘದ ಪ್ರ. ಕಾರ್ಯದರ್ಶಿ ಮಂಜು ಬಿಲ್ಲವ, ಮುಖಂಡರಾದ ನಾರಾಯಣ ಬಿಲ್ಲವ, ಕಲ್ಪನಾ ಭಾಸ್ಕರ್, ಯುವಕ ಮಂಡಲದ ಅಧ್ಯಕ್ಷ ಅಶೋಕ ಪೂಜಾರಿ, ಕಾರ್ಯದರ್ಶಿ ಅಜಿತ್ ಪೂಜಾರಿ, ದಿವಾಕರ್, ರಾಜೇಶ್, ಸುಮನಾ ಬಿದ್ಕಲ್‌ಕಟ್ಟೆ, ಟಿ.ಕೆ. ಕೋಟ್ಯಾನ್, ಮನೋಜ್ ನಾಯರ್, ಗುರುರಾಜ್ ತಂದೆ ಮಹಾಬಲ ಪೂಜಾರಿ ಉಪಸ್ಥಿತರಿದ್ದರು.