Advertisement

ನಿವೇಶನ-ವಸತಿರಹಿತ ಕಡುಬಡವರಿಗೆ ಅನುಕೂಲ ಕಲ್ಪಿಸಿ

05:19 PM Apr 09, 2022 | Team Udayavani |

ಮಹಾಲಿಂಗಪುರ: ಪ್ರಧಾನಮಂತ್ರಿ ಆವಾಸ್‌ ಸರ್ವರಿಗೂ ಸೂರು ಯೋಜನೆಯಡಿಯಲ್ಲಿ ಪಟ್ಟಣದ ವಿವಿಧ ಕೊಳಗೇರಿ ಪ್ರದೇಶಗಳಲ್ಲಿ ಜಿ.ಎಫ್‌ ಹಾಗೂ ಜಿ+1 ಮಾದರಿಯಲ್ಲಿ 500 ಮನೆ ನಿರ್ಮಿಸಲಾಗುತ್ತಿದೆ. ಇದರಿಂದ ಪಟ್ಟಣದಲ್ಲಿನ ನಿವೇಶನ ರಹಿತ ಮತ್ತು ವಸತಿರಹಿತ ಕಡುಬಡವರಿಗೆ ಅನುಕೂಲವಾಗಲಿದೆ ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.

Advertisement

ಪಟ್ಟಣದ ವಿವಿಧ ಕೊಳಗೇರಿ ಪ್ರದೇಶಗಳಲ್ಲಿ ಮಂಜೂರಾದ 500 ಮನೆಗಳ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಈ ಯೋಜನೆಯ ಫಲಾನುಭವಿಯಾಗಲು ಪಟ್ಟಣದಲ್ಲಿನ ನಿವೇಶನ ಮತ್ತು ವಸತಿರಹಿತ ಅರ್ಹ ಫಲಾನುಭವಿಗಳು ಸ್ವಂತ 1.4 ಲಕ್ಷ ಹಣ ತುಂಬಬೇಕು. ರಾಜ್ಯ ಮತ್ತು ಕೇಂದ್ರ ಸೇರಿ 2.70ಲಕ್ಷ ರೂಗಳ ಸಬ್ಸಿಡಿ, ಉಳಿದ 3.5ಲಕ್ಷ ಹಣವನ್ನು ಫಲಾನುಭವಿಗಳ ಹೆಸರಿನಲ್ಲಿ ಅದೇ ನಿವೇಶನದ ಮೇಲೆ ಸಾಲ ಪಡೆದುಕೊಂಡು ಒಟ್ಟು 6 ಲಕ್ಷ 80 ಸಾವಿರ ವೆಚ್ಚದಲ್ಲಿ ಜಿ.ಎಫ್‌ ಮತ್ತು ಜಿ+ ಮಾದರಿಯಲ್ಲಿ 358 ಚ.ಅಡಿಯಲ್ಲಿ ಸುಸಚ್ಚಿತ ಮನೆಗಳನ್ನು ನಿರ್ಮಿಸಲಾಗುವುದು ಎಂದರು.

ವಿಜಯಪುರ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಎಇಇ ಬಿ.ಎ.ಸಸಾಲಟ್ಟಿ ಮಾತನಾಡಿ ಫಲಾನುಭವಿಗಳು ಎಸ್‌ಸಿ,ಎಸ್‌ ಟಿಯಾಗಿದ್ದರೆ ಶೇ. 10 ಅಂದರೆ ಸುಮಾರು 68 ಸಾವಿರ ಹಣ ತುಂಬಬೇಕು. ಇನ್ನುಳಿದ ಸಾಮಾನ್ಯ ಫಲಾನುಭವಿಗಳಾಗಿದ್ದರೆ 1 ಲಕ್ಷ 4 ಸಾವಿರ ಹಣ ತುಂಬಬೇಕಾಗುತ್ತದೆ. ಪಟ್ಟಣದ ಅ ಧಿಕೃತ ಕೊಳಗೇರಿ ಪ್ರದೇಶಗಳಲ್ಲಿನ ಪ್ರತ್ಯೇಕ ಫಲಾನುಭವಿಗಳ ಮನೆ ಹಾಗೂ ಕೊಳಗೇರಿ ಪ್ರದೇಶದಲ್ಲಿ ನಿರ್ಮಿಸುವ ಜಿ+1 ಮಾದರಿ 4 ಮನೆಗಳ ಒಂದು ಬ್ಲಾಕ್‌ನಂತೆ ಸುಸಜ್ಜಿತ ಗುಂಪು ಮನೆಗಳ ಕೊಳಗೇರಿ ಅಭಿವೃದ್ದಿ ಬಡಾವಣೆ ನಿರ್ಮಿಸಲಾಗುವುದು ಎಂದರು.

ವಿಜಯಪುರ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಎಇ ಶಿವಾನಂದ, ಗುತ್ತಿಗೆದಾರ ಶ್ರೀಕಾಂತ ಬಂಡಿ, ಬಿಡಿಸಿಸಿ ಬ್ಯಾಂಕಿನ ನಿರ್ದೇಶಕರಾದ ಬಸನಗೌಡ ಪಾಟೀಲ, ಜಿಪಂ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ, ಮುಖ್ಯಾಧಿ ಕಾರಿ ಎಚ್‌.ಎಸ್‌.ಚಿತ್ತರಗಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ಶ್ರೀಮಂತ ಹಳ್ಳಿ, ಮುಖಂಡರಾದ ಈರಪ್ಪ ದಿನ್ನಿಮನಿ, ಮಹಾಲಿಂಗ ಕುಳ್ಳೋಳ್ಳಿ, ಜಿ.ಎಸ್‌.ಗೊಂಬಿ, ಗುರುಪಾದ ಅಂಬಿ, ಚನ್ನಪ್ಪ ಪಟ್ಟಣಶೆಟ್ಟಿ, ಮಹಾಲಿಂಗ ಮುದ್ದಾಪುರ, ಚನ್ನಪ್ಪ ರಾಮೋಜಿ, ಬಸವರಾಜ ಚಮಕೇರಿ, ಪುರಸಭೆ ಸದಸ್ಯರಾದ ಬಸವರಾಜ ಹಿಟ್ಟಿನಮಠ, ರವಿ ಜವಳಗಿ, ಬಸವರಾಜ ಯರಗಟ್ಟಿ, ಬಿ.ಎಲ್‌. ಚಮಕೇರಿ, ನಾಮದೇವ ಇತರರು ಇದ್ದರು.

Advertisement

ಕೊಳಗೇರಿ ಅಭಿವೃದ್ಧಿ ಮಂಡಳಿಯ ಮನೆಗಳ ಕಾಮಗಾರಿಯ ಭೂಮಿಪೂಜಾ ಕಾರ್ಯಕ್ರಮದ ಸಿದ್ದತೆಗೆ ಸಂಬಂ ಧಿಸಿದಂತೆ ಶುಕ್ರವಾರ ಟೋಣಪಿನಾಥ ಕಲ್ಯಾಣಮಂಟಪದಲ್ಲಿ ಪುರಸಭೆ ಮಾಜಿ ಅಧ್ಯಕ್ಷೆ ಸ್ನೇಹಲ್‌ ಅಂಗಡಿ ಅವರ ಪತಿ ಶಿವಾನಂದ ಅಂಗಡಿ, ಪುರಸಭೆ ಮುಖ್ಯಾಧಿಕಾರಿ ಎಚ್‌.ಎಸ್‌.ಚಿತ್ತರಗಿ ಅವರ ಮಧ್ಯೆ ನಡೆದ ಮಾತಿನ ಚಕಮಕಿ ಚರ್ಚೆಗೆ ಗ್ರಾಸವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next