Advertisement

ಎದುರೆದುರಾದ ಪ್ರತಿಸ್ಪರ್ಧಿಗಳು…!

11:22 AM Apr 23, 2018 | Team Udayavani |

ಮಹಾನಗರ : ದಿನೇ ದಿನೇ ಚುನಾವಣೆಯ ಕಾವು ಏರುತ್ತಿದ್ದು, ಎಲ್ಲ ರಾಜಕೀಯ ಪಕ್ಷಗಳು ಕೂಡ ತಮ್ಮದೇ ಶೈಲಿಯಲ್ಲಿ ಪರಸ್ಪರ ಟೀಕೆಯ ಮೂಲಕ ಪ್ರಚಾರ ಕಾರ್ಯವನ್ನು ಆರಂಭಿಸಿದ್ದಾರೆ. ಆದರೆ ರಾಜಕೀಯವಾಗಿ ತಮ್ಮೊಳಗೆ ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ ಕರಾವಳಿಯ ಭಿನ್ನ ಪಕ್ಷಗಳ ರಾಜಕಾರಣಿಗಳು ಪರಸ್ಪರ ಎದುರು ಬದುರಾದಾಗ ಯೋಗಕ್ಷೇಮ ವಿಚಾರಿಸಿ ನಗುಮೊಗದಿಂದಲೇ ಮಾತನಾಡಿಕೊಳ್ಳುವ ಮೂಲಕ ಇತರ ಜಿಲ್ಲೆಗಳ ರಾಜಕಾರಣಿಗಳಿಗೆ ಮಾದರಿಯಾಗುತ್ತಿದ್ದಾರೆ.

Advertisement

ಇಲ್ಲಿನ ರಾಜಕಾರಣಿಗಳು ಹಿಂದಿನಿಂದಲೂ ಇಂತಹ ಅಭ್ಯಾಸ ಬೆಳೆಸಿಕೊಂಡಿದ್ದು, ರವಿವಾರ ನಗರದ ಮರೋಳಿ ದೇವಸ್ಥಾನದ ವಠಾರ ಇಂತಹ ಮತ್ತೂಂದು ಘಟನೆಗೆ ಸಾಕ್ಷಿಯಾಗಿದೆ. ಮಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಜೆ.ಆರ್‌. ಲೋಬೋ ಹಾಗೂ ಬಿಜೆಪಿ ಅಭ್ಯರ್ಥಿ ಡಿ. ವೇದವ್ಯಾಸ ಕಾಮತ್‌ ಅವರು ಪರಸ್ಪರ ಭೇಟಿಯಾಗಿ ಸೌಹಾರ್ದದ ಮಾತುಗಳನ್ನಾಡಿದ್ದಾರೆ.

ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್‌ ಅವರು ಕಾರಿನಲ್ಲಿ ಬಂದ ಸಂದರ್ಭದಲ್ಲಿ ಲೋಬೋ ಅವರು ಮರೋಳಿಯಲ್ಲಿರುತ್ತಾರೆ. ಈ ಸಂದರ್ಭದಲ್ಲಿ ಕಾಮತ್‌ ಅವರನ್ನು ಬರಮಾಡಿಕೊಂಡ ಲೋಬೋ ಅವರು ಪರಸ್ಪರ ತಬ್ಬಿಕೊಂಡು ತಮಾಷೆಯ ಮಾತುಗಳನ್ನಾಡಿದರು.

ಬಳಿಕ ವೇದವ್ಯಾಸ್‌ ಅವರು ಲೋಬೋ ಅವರ ಕೈ ಹಿಡಿದು, ನಾವು ಒಳ್ಳೆಯ ರೀತಿಯಲ್ಲಿ ಚುನಾವಣೆಯನ್ನು ಎದುರಿಸೋಣ. ನಮ್ಮ ನಡುವೆ ಸೈದ್ಧಾಂತಿಕವಾಗಿ ಭಿನ್ನಾಭಿಪ್ರಾಯಗಳಿದ್ದರೂ ಮಂಗಳೂರಿನವರಾಗಿ ಉತ್ತಮವಾಗಿ ಚುನಾವಣೆಯನ್ನೆದುರಿಸೋಣ ಎಂದು ಇಬ್ಬರೂ ಶುಹಾರೈಸಿಕೊಂಡರು. 

Advertisement

Udayavani is now on Telegram. Click here to join our channel and stay updated with the latest news.

Next