ನವ ದೆಹಲಿ: ಸಾಮಾಜಿಕ ಜಾಲತಾಣಗಳ ದೈತ್ಯ ಎಂದು ಕರೆಸಿಕೊಳ್ಳುವ ಫೇಸ್ ಬುಕ್, ಹಾರ್ಮ್ ಫುಲ್ ಕಂಟೆಂಟ್ ಗಳನ್ನು ನಿಭಾಯಿಸಲು ಜಾಹೀರಾತುದಾರರಿಗೆ ‘ವಿಷಯ ಹೊರಗಿಡುವ ನಿಯಂತ್ರಣಗಳನ್ನು(ಟಾಪಿಕ್ ಎಕ್ಲೂಶನ್ ಕಂಟ್ರೋಲ್ಸ್)’ ಅಭಿವೃದ್ಧಿಪಡಿಸಲು ಮುಂದಾಗಿದೆ.
ಓದಿ : ಋತುವಿನ ಮೊದಲ ಕಂಬಳ ಯಶಸ್ವಿ: ಇಲ್ಲಿದೆ ಹೊಕ್ಕಾಡಿಗೋಳಿ ಕಂಬಳದ ಫಲಿತಾಂಶ ಪಟ್ಟಿ
ಫೇಸ್ ಬುಕ್ ಶುಕ್ರವಾರ(ಜ. 29) ತನ್ನ ಪ್ಲಾಟ್ ಫಾರ್ಮ್‌ನಲ್ಲಿ “ವಿಷಯ ಹೊರಗಿಡುವ ನಿಯಂತ್ರಣಗಳನ್ನು” ಅಭಿವೃದ್ಧಿಪಡಿಸಲು ಪ್ರಾರಂಭಿಸಲಿದೆ, ಜಾಹೀರಾತುದಾರರು ತಮ್ಮ ಜಾಹೀರಾತುಗಳ ಜೊತೆಗೆ ಹಾರ್ಮ್ ಫುಲ್ ಕಂಟೆಂಟ್ ಗಳು ಕಾಣಿಸಿಕೊಳ್ಳದಂತೆ ಅವುಗಳನ್ನು ತೆಗೆದು ಹಾಕುವ ಸಾಮರ್ಥ್ಯವನ್ನು ಇದು ಹೊಂದಿರಲಿದೆ.
ಫೇಸ್ ಬುಕ್ ನ್ಯೂಸ್ ಫೀಡ್ ನಲ್ಲಿ ತಮ್ಮ ಜಾಹೀರಾತುಗಳು ಹೇಗೆ ತೋರಿಸುತ್ತವೆ ಎಂಬುದನ್ನು ವ್ಯಾಖ್ಯಾನಿಸಲು ನಿಯಂತ್ರಣಗಳು ಸಹಾಯ ಮಾಡುತ್ತವೆ ಎಂದು ಶುಕ್ರವಾರ(ಜ.29) ಬ್ಲಾಗ್ ಪೋಸ್ಟ್ ನಲ್ಲಿ ತಿಳಿಸಿತ್ತು . ಇದು ಒಂದು ಸಣ್ಣ ಗುಂಪಿನ ಜಾಹೀರಾತುದಾರರೊಂದಿಗೆ ನಿಯಂತ್ರಣಗಳನ್ನು ಟೆಸ್ಟಿಂಗ್ ಪ್ರಾರಂಭಿಸುತ್ತದೆ, ಈ ಪ್ರಕ್ರಿಯೆಯು ಪೂರ್ಣಗೊಳ್ಳಲು ಸುಮಾರು ಒಂದು ವರ್ಷ ತೆಗೆದುಕೊಳ್ಳಬಹುದು ಎಂದು ಫೇಸ್ ಬುಕ್ ಹೇಳಿಕೊಂಡಿದೆ.
ಓದಿ : ಕೆಲವು ಅವಧಿಯ ನಂತರ ಸ್ಟ್ರೀಮಿಂಗ್ ಮಾಡುವುದನ್ನು ನಿಲ್ಲಿಸಲಿದೆ ನೆಟ್ ಪ್ಲಿಕ್ಸ್ ..!?