Advertisement

Facebook Page: ಹಿಂದೂ ದೇವರಿಗೆ ಅವಮಾನ: ಎಫ್ಐಆರ್‌ ದಾಖಲು

01:10 AM Sep 12, 2024 | Team Udayavani |

ಮಂಗಳೂರು: ಫೇಸ್‌ಬುಕ್‌ ಪೇಜ್‌ನಲ್ಲಿ ಹಿಂದೂ ದೇವರು, ದೇವತೆಗಳನ್ನು ಅಶ್ಲೀಲವಾಗಿ ಚಿತ್ರಿಸಿ ಅವಮಾನ ಮಾಡಿರುವ ಬಗ್ಗೆ ನಗರದ ಉರ್ವ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದೆ.

Advertisement

Fact Vid  ಹೆಸರಿನ ಫೇಸ್‌ಬುಕ್‌ ಪೇಜ್‌ನಲ್ಲಿ ಎಐ ತಂತ್ರಜ್ಞಾನದ ಸಹಾಯದಿಂದ ಹಿಂದೂ ದೇವರನ್ನು ಅಶ್ಲೀಲವಾಗಿ ಚಿತ್ರಿಸಿ ಅಶ್ಲೀಲ ಕಾಮೆಂಟ್ಸ್‌ ಬರೆಯಲಾಗಿದೆ. ಹಿಂದೂ ಭಾವನೆಗಳಿಗೆ ನೋವನ್ನುಂಟು ಮಾಡಲಾಗಿದೆ.

ಈ ರೀತಿ ದೇವರನ್ನು ವಿಡಂಬನೆ ಮಾಡಿ ಧಾರ್ಮಿಕ ಭಾವನೆಗೆ ಧಕ್ಕೆ ತಂದು ಕೋಮು ಸಾಮರಸ್ಯ ಕದಡಿ ಗಲಭೆ ಸೃಷ್ಟಿಸಲು ಪ್ರಯತ್ನ ನಡೆಸುತ್ತಿರುವ ಫೇಸ್‌ಬುಕ್‌ನ ಅಡ್ಮಿನ್‌ ಹಾಗೂ ಅವಹೇಳನಕಾರಿಯಾಗಿ ಕಾಮೆಂಟ್ಸ್‌ ಹಾಕುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಹಿಂದೂ ಜನಜಾಗೃತಿ ಸಮಿತಿ ನೀಡಿರುವ ದೂರಿನಂತೆ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next