Advertisement

ಭಾರತದಲ್ಲಿ ಫೇಸ್‌ಬುಕ್‌ ತಟಸ್ಥ, ಪಕ್ಷಪಾತ‌ ರಹಿತ: ಅಜಿತ್‌ ಮೋಹನ್‌

06:19 PM Sep 22, 2020 | Nagendra Trasi |

ನವದೆಹಲಿ: ಭಾರತದಲ್ಲಿ ಫೇಸ್‌ಬುಕ್‌, ಬಿಜೆಪಿ ನಾಯಕರ ಪರವಾಗಿ ಕೆಲಸ ಮಾಡುತ್ತಿದೆ ಎಂಬ ಆರೋಪವನ್ನು ಫೇಸ್‌ಬುಕ್‌ ಇಂಡಿಯಾ ಮುಖ್ಯಸ್ಥ ಅಜಿತ್‌ ಮೋಹನ್‌ ತಳ್ಳಿಹಾಕಿದ್ದಾರೆ. “ನಿರ್ದಿಷ್ಟ ಪಕ್ಷದ ದ್ವೇಷಪೂರಿತ ಭಾಷಣವನ್ನು ಫೇಸ್‌ಬುಕ್‌ ಯಾವುದೇ ಕಾರಣಕ್ಕೂ ಬೆಂಬಲಿಸುತ್ತಿಲ್ಲ. ಫೇಸ್‌ ಬುಕ್ ‌ಇಂಡಿಯಾ ತಂಡವು ರಾಜಕೀಯ ವಿಚಾರದಲ್ಲಿ ತಟಸ್ಥವಾಗಿದ್ದು, ಪಕ್ಷ ಪಾತರಹಿತವಾಗಿದೆ.

Advertisement

ಯಾವುದೇ ಪಕ್ಷದ ಬಗ್ಗೆ ಒಲವು ಹೊಂದದೆ, ತಂಡದ ನಿರ್ಧಾರಗಳು ಸ್ವತಂತ್ರ್ಯ ವಿನ್ಯಾಸ ಹೊಂದಿವೆ’ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಸಮರ್ಥಿಸಿಕೊಂಡಿದ್ದಾರೆ. ಫೇಸ್‌ಬುಕ್‌ ಇಂಡಿಯಾದಲ್ಲಿ “ವಿಷಯ ನೀತಿ ತಂಡ’ ಹಾಗೂ “ಸಾರ್ವಜನಿಕ ನೀತಿ ತಂಡ’ಗಳಿದ್ದು, ಇವೆರಡೂ ಪ್ರತ್ಯೇಕ ರಚನೆಗಳನ್ನು ಹೊಂದಿವೆ.

ಸಾರ್ವಜನಿಕ ನೀತಿ ತಂಡವು ಕೇಂದ್ರ, ರಾಜ್ಯ ಸರ್ಕಾರಗಳ ಜತೆಗಿನ ಸಂಬಂಧವನ್ನು ನಿರ್ವಹಿಸುವ ಕೆಲಸ ಮಾಡುತ್ತದೆ. ಆದರೆ, ಸಮುದಾಯದ ಮಾನದಂಡಗಳನ್ನು ನಿರ್ವಹಿಸುವ ವಿಷಯ ನೀತಿ ತಂಡದ ಪಾತ್ರವೇ ಬೇರೆ. ಇದು ಸಂಪೂರ್ಣ ಸ್ವತಂತ್ರವಾಗಿದ್ದು, ಜಾಗತಿಕ ತಂಡದ ಭಾಗವಾಗಿರುತ್ತದೆ. ಆರಂಭದ ದಿನಗಳಿಂದಲೂ ಇದು ವಸ್ತುನಿಷ್ಠವಾಗಿ, ತಟಸ್ಥವಾಗಿಯೇ ಕೆಲಸ ಮಾಡುತ್ತಿದೆ’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next