Advertisement
ಫೇಸ್‌ಬುಕ್ ಬಳಕೆದಾರರು ಇನ್ನು ಮುಂದೆ ಯಾವುದೇ ರೀತಿಯ ಹಿಂಸಾತ್ಮಕ ವೀಡಿಯೋಗಳನ್ನು ಲೈವ್ ಮಾಡು ವುದು, ಶೇರ್ ಮಾಡುವಂತಿಲ್ಲ. ಇಂತಹ ಘಟನೆಗಳು ಕಂಡುಬಂದರೆ ಅಂತಹ ಖಾತೆಗಳು ಬ್ಲಾಕ್ ಆಗಲಿದೆ ಎಂದು ಫೇಸ್‌ಬುಕ್ ಹೇಳಿದೆ.
- ಬಳಕೆದಾರರು ಭಯೋತ್ಪಾದಕ ಸಂಘಟನೆಗಳಿಗೆ ಸಂಬಂಧಿಸಿದ ಹೇಳಿಕೆ ಅಥವಾ ವೀಡಿಯೋಗಳ ಲಿಂಕ್ ಹಂಚಿಕೊಳ್ಳುವುದೂ ಈ ನಿಯಮದ ಸುಪರ್ದಿಗೆ ಬರುತ್ತದೆ. ನಿಯಮದನ್ವಯ ಅಂಥ ಖಾತೆಯೂ ನಿಷೇಧ.
- ಫೇಸ್‌ಬುಕ್‌ನ ಈ ಕ್ರಮದಿಂದ ಸಮಾಜದ ಸ್ವಾಸ್ಥ್ಯ ಹಾಳಾಗುವುದು ತಪ್ಪುತ್ತದೆ. ಸಮಾಜದಲ್ಲಿ ಶಾಂತಿ ನೆಲೆಸಲು ಇದು ಸಹಕಾರಿಯಾಗಲಿದೆ.
- ಈ ನಿಯಮಗಳನ್ನು ಉಲ್ಲಂಘಿಸಿದರೆ ಬಳಕೆದಾರರ ಖಾತೆಯನ್ನು ಬ್ಲಾಕ್ ಮಾಡಲಾಗುತ್ತದೆ ಅಥವಾ ನಿಮಗೆ ನೀಡಲಾದ ಕೆಲವು ಆಯ್ಕೆಗಳನ್ನು ನಿಷೇಧಿಸಲಾಗುತ್ತದೆ.
- ನ್ಯೂಜಿಲೆಂಡ್ ಚರ್ಚ್ ದಾಳಿ ವೀಡಿಯೋವನ್ನು ಈಗಾಗಲೇ ಅನೇಕ ಖಾತೆಗಳಿಂದ ಅಳಿಸಿ ಹಾಕಲಾಗಿದೆ. ಕೆಲವರು ಈ ವೀಡಿಯೋವನ್ನು ಸೇವ್ ಮಾಡಿಕೊಂಡಿದ್ದು, ಅಂತಹ ಖಾತೆಗಳೂ ನಿಷೇಧಕ್ಕೊಳಗಾಗಲಿವೆ.
Related Articles
ಇತ್ತೀಚೆಗೆ ನ್ಯೂಜಿಲೆಂಡ್‌ನ ಕ್ರೈಸ್ಟ್ ಚರ್ಚ್ ಮಸೀದಿ ಮೇಲೆ ಭಯೋತ್ಪಾದಕ ದಾಳಿ ನಡೆದ ವೇಳೆ ಉಗ್ರ ತನ್ನ ಕೃತ್ಯವನ್ನು ಫೇಸ್‌ಬುಕ್ ಲೈವ್ ಸ್ಟ್ರೀಮಿಂಗ್ ಮಾಡಿದ್ದನು. ಈ ವೀಡಿಯೋ ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಚಲನವನ್ನು ಸೃಷ್ಟಿಸಿತು. ದಾಳಿಯ ಸಂದರ್ಭ ಈ ಆಯ್ಕೆಯ ಕುರಿತಂತೆ ವ್ಯಾಪಕ ಟೀಕೆಗಳು ಕೇಳಿಬಂದಿದ್ದವು. ಇಂತಹ ಸಂದರ್ಭಗಳ ಬಗ್ಗೆ ಕಠಿನ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿತ್ತು. ಇದರನ್ವಯ ನಿಯಮದಲ್ಲಿ ಬದಲಾವಣೆ ತರಲಿದೆ.
Advertisement