Advertisement

ಎಸ್‌.ನಾರಾಯಣ್‌ ಫೇಸ್‌ಬುಕ್‌ ಖಾತೆ ಹ್ಯಾಕ್‌

10:39 AM Oct 10, 2021 | Team Udayavani |

ಬೆಂಗಳೂರು: ನಟ, ನಿರ್ದೇಶಕ ಎಸ್‌.ನಾರಾಯಣ್‌ ಹೆಸರಲ್ಲಿ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಮೂಲಕ ವಂಚನೆ ಮಾಡುತ್ತಿರುವುದು ಬೆಳಕಿಗೆ ಬಂದಿದ್ದು, ಈ ಸಂಬಂಧ ಎಸ್‌.ನಾರಾಯಣ ಸೈಬರ್‌ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.

Advertisement

ಅಲ್ಲದೆ, ತಮ್ಮ ಫೇಸ್‌ಬುಕ್‌ ಖಾತೆ ಹ್ಯಾಕ್‌ ಆಗಿರುವ ಕುರಿತು ಖುದ್ದು ಎಸ್‌. ನಾರಾಯಣ್‌ ಸೆಲ್ಫಿ ವಿಡಿಯೊ ಹರಿಬಿಟ್ಟು ಪ್ರತಿಕ್ರಿಯೆ ನೀಡಿದ್ದಾರೆ. ಕೆಲವು ಕಿಡಿಗೇಡಿಗಳು ತಮ್ಮ ಫೇಸ್‌ಬುಕ್‌ ಖಾತೆ ಹ್ಯಾಕ್‌ ಮಾಡಿ ಸ್ನೇಹಿತರಿಗೆ ಸಂದೇಶ ರವಾನಿಸಿ ಹಣಕ್ಕೆ ಬೇಡಿಕೆ ಇಡುತ್ತಿರುವ ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ;- ಸರಗಳ್ಳನನ್ನು ಹಿಡಿದ ಆಟೋ ಚಾಲಕ

ಈಗಾಗಲೇ ಕೆಲವರು ಹಣ ಕಳುಹಿಸಿದ್ದಾರೆ. ದಯವಿಟ್ಟು ಯಾರು ಹಣ ಕಳುಹಿಸಬೇಡಿ. ಮುಖ್ಯವಾಗಿ ಪ್ರತಿಕ್ರಿಯಿಸಬೇಡಿ. ಒಂದು ವೇಳೆ ಮೋಸ ಹೋದರೆ ನಾನು ಹೊಣೆ ಅಲ್ಲ. ಈ ಸಂಬಂಧ ಸೈಬರ್‌ ಕ್ರೈಂ ಠಾಣೆಗೆ ದೂರು ನೀಡಿದ್ದೇನೆ ಎಂದು ವಿಡಿಯೋ ಮೂಲಕ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next