Advertisement

Online ಮೂಲಕ ಸಲ್ಲಿಸುವ ಜೀವನ ಪ್ರಮಾಣಪತ್ರಕ್ಕೆ ಫೇಸ್‌ ರೆಕಗ್ನಿಷನ್‌ ಇನ್ನು ಅಧಿಕೃತ ಪುರಾವೆ

11:15 AM May 22, 2022 | Team Udayavani |

ಹೊಸದಿಲ್ಲಿ: “ಪಿಂಚಣಿದಾರರು ಆನ್‌ಲೈನ್‌ ಮೂಲಕ ಪ್ರತೀ ವರ್ಷ ಸಲ್ಲಿಸಬೇಕಿರುವ ಜೀವನ ಪ್ರಮಾಣಪತ್ರಕ್ಕೆ (ಲೈಫ್ ಸರ್ಟಿಫಿಕೆಟ್‌) ಮುಖ ಗುರುತು ಪತ್ತೆ ಹಚ್ಚುವ (ಫೇಸ್‌ ರೆಕಗ್ನಿಷನ್‌) ವಿಧಾನವನ್ನೇ ಅಧಿಕೃತ ಪುರಾವೆಯ ಮಾರ್ಗವಾಗಿ ಪರಿಗಣಿಸಲಾಗುತ್ತದೆ ಎಂದು ಕೇಂದ್ರ ಸಿಬಂದಿ, ಸಾರ್ವಜನಿಕ ಕುಂದು ಕೊರತೆಗಳು ಹಾಗೂ ಪಿಂಚಣಿ ಇಲಾಖೆ ತಿಳಿಸಿದೆ.

Advertisement

ಸಾಮಾನ್ಯವಾಗಿ, ಪಿಂಚಣಿದಾ­ರರು ಪ್ರತೀ ವರ್ಷ ನವೆಂಬರ್‌ನಲ್ಲಿ ಬ್ಯಾಂಕ್‌ಗಳಿಗೆ ಹೋಗಿ ಜೀವನ ಪ್ರಮಾಣಪತ್ರ ಸಲ್ಲಿಸಬೇಕು. ಬ್ಯಾಂಕ್‌ಗಳಿಗೆ ಹೋಗಲಾಗದ ಪಿಂಚಣಿದಾರರು, ಡೋರ್‌ಸ್ಟೆಪ್‌ ಬ್ಯಾಂಕಿಂಗ್‌ ಸೇರಿದಂತೆ ಕೆಲವು ಸೌಲಭ್ಯಗಳ ಮೂಲಕ ಪ್ರತೀ ವರ್ಷ ಲೈಫ್ ಸರ್ಟಿ ಫಿಕೆಟ್‌ ಸಲ್ಲಿಸಬಹುದಾಗಿದೆ.

ಆದರೆ ಇತ್ತೀಚೆಗೆ ಕೇಂದ್ರ ಸರಕಾರ, ಡಿಜಿಟಲ್‌ ಮಾದರಿಯಲ್ಲಿ ಲೈಫ್ ಸರ್ಟಿಫಿಕೆಟ್‌ ಸಲ್ಲಿಸುವ ವಿಧಾನವನ್ನು ಜಾರಿಗೆ ತಂದಿದ್ದು ಅದನ್ನು ಬಳಸಿಕೊಂಡು, ಮನೆಗಳಲ್ಲಿರುವ ಲ್ಯಾಪ್‌ಟಾಪ್‌ಗ್ಳು, ಸ್ಮಾರ್ಟ್‌ ಫೋನ್‌ಗಳಿಂದ ಪ್ರಮಾಣಪತ್ರ ಸಲ್ಲಿಸಬಹುದಾಗಿದೆ. ಈ ಪ್ರಕ್ರಿಯೆಯ ಭಾಗವಾದ ಫೇಸ್‌ ರೆಕಗ್ನಿಷನ್‌ ಮೂಲಕ ದಾಖಲಾಗುವ ಮುಖದ ಗುರುತನ್ನೇ ಪಿಂಚಣಿದಾರರ ಅಧಿಕೃತ ಪುರಾವೆ ಯನ್ನಾಗಿ ಪರಿಗಣಿಸಲಾಗುತ್ತದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next