Advertisement
ಕೇಂದ್ರ ಸಶಸ್ತ್ರ ಮೀಸಲು ಪಡೆ (ಸಿಆರ್‌ಪಿಎಫ್), ಜಮ್ಮು- ಕಾಶ್ಮೀರ ಮತ್ತು ರೆಡ್ ಝೋನ್ ಪೋಸ್ಟ್‌ಗಳ ಯೋಧರಿಗೆ ಈ ಕುರಿತಾಗಿ ಪತ್ರ ಬರೆದಿದೆ. “ಸಾಮಾಜಿಕ ವಿರೋಧಿ ವಿಚಾರ ಬಿತ್ತಲು ದುಷ್ಕರ್ಮಿಗಳು ಸೈನಿಕರ ಹೆಸರಿನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸುತ್ತಿದ್ದಾರೆ. ಭದ್ರತಾಪಡೆಗಳ ಕುರಿತಾದ ವಿಶ್ವಾಸಾರ್ಹ ಮಾಹಿತಿಗಳನ್ನೂ ನಕಲಿ ಖಾತೆಗಳ ಮೂಲಕ ಕದಿಯಲು ಯತ್ನಿಸುತ್ತಿದ್ದಾರೆ’ ಎಂದು ಎಚ್ಚರಿಸಿದೆ. “ದುಷ್ಕರ್ಮಿಗಳು ನಕಲಿ ಖಾತೆ ಹೇಗೆ ಸೃಷ್ಟಿಸುತ್ತಾರೆ? ಇದನ್ನು ತಡೆಯಲು ಫೇಸ್‌ಬುಕ್‌ನಲ್ಲಿ ಯಾವ ಸೆಟ್ಟಿಂಗ್ ಅನುಸರಿಸಬೇಕು?’ ಎಂಬುದರ ಕುರಿತು ತಿಳಿವಳಿಕೆ ಮೂಡಿಸುವ ವೀಡಿಯೋವನ್ನೂ ಸಿಆರ್‌ಪಿಎಫ್ ಬಿಡುಗಡೆಗೊಳಿಸಿದೆ.
ಕಳೆದ ಕೆಲವು ತಿಂಗಳಿಂದ ಕುಟುಂಬದ ಸದಸ್ಯರಿಗೆ ಯೋಧರ ನಕಲಿ ಖಾತೆಯಿಂದ ಫ್ರೆಂಡ್ ರಿಕ್ವೆಸ್ಟ್‌ಗಳು ಹೋಗಿವೆ. ಯೋಧರ ಲೊಕೇಶನ್ ಕುರಿತಾದ ಮಾಹಿತಿ ಪಡೆಯಲೂ ಸೈಬರ್ ದುಷ್ಕರ್ಮಿಗಳು ಯತ್ನಿಸಿದ್ದಾರೆ. ಯೋಧರ ಕುಟುಂಬ ಸದಸ್ಯರು, ಸ್ನೇಹಿತರಿಂದ ಹಣಕ್ಕೆ ಬೇಡಿಕೆಯಿಟ್ಟ ಪ್ರಕರಣಗಳೂ ಬೆಳಕಿಗೆ ಬಂದಿದ್ದವು.