Advertisement

ಎಫ್-16 ಪ್ರಯೋಗ ಗಂಭೀರ ವಿಚಾರ: ಅಮೆರಿಕ ಅಭಿಮತ

12:30 AM Mar 02, 2019 | |

ಭಾರತದ ಸೇನಾ ನೆಲೆಗಳನ್ನು ಗುರಿಯಾಗಿರಿಸಿಕೊಂಡು ಪಾಕಿಸ್ತಾನ ಎಫ್-16 ಪ್ರಯೋಗ ಮಾಡಿರುವುದನ್ನು ಅಮೆರಿಕ ಗಂಭೀರವಾಗಿ ಪರಿಗಣಿಸಿದೆ. ಇದರ ಜತೆಗೆ ಅಡ್ವಾನ್ಸ್‌ ಮೀಡಿಯಂ ರೇಂಜ್‌ ಏರ್‌ ಟು ಏರ್‌ ಮಿಸೈಲ್ಸ್‌ (ಎಎಂಆರ್‌ಎಎಎಂ) ಅನ್ನೂ ಬಳಕೆ ಮಾಡಿದ್ದ ಬಗ್ಗೆ ಗುರುವಾರ ನವದೆಹಲಿಯಲ್ಲಿ ನಡೆದಿದ್ದ ಸುದ್ದಿಗೋಷ್ಠಿಯಲ್ಲಿ ಐಎಎಫ್ ಅಧಿಕಾರಿಗಳು ಪ್ರದರ್ಶಿಸಿದ್ದರು. ಈ ಅಂಶಗಳನ್ನು ನಾವು ಗಮನಿಸಿದ್ದೇವೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಭಾರತದ ವಿರುದ್ಧ ಎಫ್-16 ವಿಮಾನ ಮೂಲಕ ದಾಳಿ ನಡೆಸಲು ಮುಂದಾಗಿದ್ದು, ಮಾರಾಟದ ಒಪ್ಪಂದ ನಿಯಮಗಳ ಉಲ್ಲಂಘನೆ ಎಂದು ಹೇಳಲಾಗುತ್ತಿದೆ.  2016ರಲ್ಲಿ ಅಮೆರಿಕದ ಪ್ರಮುಖ ಸಂಸದರು ಎಫ್-16 ಯುದ್ಧ ವಿಮಾನದ ಸುಧಾರಿತ ಆವೃತ್ತಿಯನ್ನು ಮಾರಾಟ ಮಾಡದಂತೆ ತಡೆ ಹಿಡಿದಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next