ಸರ್ಕಾರ ನಿಯಂತ್ರಿಸುವ ಉದ್ದೇಶದ ಮತ್ತೂಂದು ಸುತ್ತೋಲೆ ಹೊರಡಿಸಿ ವಿವಾದ ಮೈಮೇಲೆ ಎಳೆದುಕೊಂಡಿದೆ.
Advertisement
ಧಾರ್ಮಿಕ ದತ್ತಿ ಕಾಯ್ದೆಯ ವ್ಯಾಪ್ತಿಗೆ ಮಠಗಳು, ಮಠಗಳಿಗೆ ಸೇರಿದ ದೇವಸ್ಥಾನಗಳು ಹಾಗೂ ಮಠಗಳ ನಿಯಂತ್ರಣಕ್ಕೆ ಒಳಪಟ್ಟ ಧಾರ್ಮಿಕ ಸಂಸ್ಥೆಗಳು ಮತ್ತು ಜೈನ್, ಬೌದಟಛಿ, ಸಿಖ್ ಜನಾಂಗಗಳಿಗೆ ಒಳಪಟ್ಟ ಧಾರ್ಮಿಕ ಸಂಸ್ಥೆಗಳನ್ನು ಒಳಪಡಿಸಬೇಕೇ? ಬೇಡವೇ? ಒಳಪಡಿಸುವುದಾದರೆ ಯಾವ ರೀತಿ, ಎಷ್ಟರ ಮಟ್ಟಿಗೆ ಎಂದು ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ.
ಸರ್ಕಾರದ ನಿಯಂತ್ರಣಕ್ಕೆ ತರುವ ಹುನ್ನಾರದಿಂದ ಈ ಸುತ್ತೋಲೆ ಹೊರಡಿಸಲಾಗಿದೆ. ಇದಕ್ಕೆ ಬಿಜೆಪಿ ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದು ಹೇಳಿದರು.
Related Articles
Advertisement
ಸರ್ಕಾರದ ಈ ಸುತ್ತೋಲೆ ವಾಪಸ್ ಪಡೆಯ ಬೇಕು. ಈಗಿರುವಂತೆ ಯಥಾಸ್ಥಿತಿ ಮುಂದುವರಿ ಸಬೇಕು. ಕಾಂಗ್ರೆಸ್ ಸರ್ಕಾರ ಅನಗತ್ಯ ಸುತ್ತೋಲೆ ಹೊರಡಿಸಿ ಸಂಘರ್ಷದ ವಾತಾವರಣ ಮೂಡಿಸುತ್ತಿದೆ. ಬಿಜೆಪಿ ಇದರ ವಿರುದಟಛಿ ಹೋರಾಟ ನಡೆಸಲಿದೆ ಎಂದು ಹೇಳಿದರು. ಬುಧವಾರ ವಿಧಾನಸಭೆಯಲ್ಲೂ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ಸಂದರ್ಭದಲ್ಲಿ ಬಿಜೆಪಿಯ ಜೀವರಾಜ್, ವಿಷಯ ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ವಾಗಾಟಛಿಳಿ ನಡೆಸಿದರು.
ಬಿಜೆಪಿಯವರಿಗೆ ಕೆಲಸವಿಲ್ಲ: ಮತ್ತೂಂದೆಡೆ ಬಿಜೆಪಿ ಆರೋಪಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಜೆಡಿಎಸ್ ಬಂಡಾಯ ಶಾಸಕಜಮೀರ್, ಮಸೀದಿಗಳು ವಕ್ಫ್ ಮಂಡಳಿ ವ್ಯಾಪ್ತಿಗೆ ಬರುತ್ತವೆ. ಹೀಗಾಗಿ, ಅವುಗಳನ್ನು ಮುಜರಾಯಿ ಇಲಾಖೆ ವ್ಯಾಪ್ತಿಗೆ ತರುವ
ಪ್ರಶ್ನೆಯೇ ಉದ್ಭವಿಸುವುದಿಲ್ಲ. ಬಿಜೆಪಿಯವರಿಗೆ ಕೆಲಸ ಇಲ್ಲದೆ ಇಂತಹ ವಿಚಾರ ಪ್ರಸ್ತಾಪಿಸುತ್ತಿದ್ದಾರೆ ಎಂದು ಆಕ್ರೋಶ
ವ್ಯಕ್ತಪಡಿಸಿದರು. ರಾಜ್ಯದಲ್ಲಿ 40 ಸಾವಿರ ಮಸೀದಿಗಳಿದ್ದು ಅವೆಲ್ಲವೂ ವಕ್ಫ್ ಮಂಡಳಿ ವ್ಯಾಪ್ತಿಯಲ್ಲಿವೆ. ವಕ್ಫ್ ಸರ್ಕಾರದ
ವ್ಯಾಪ್ತಿಗೆ ಬರುತ್ತದೆ. ಹೀಗಾಗಿ, ಮೊದಲೇ ಸರ್ಕಾರದ ನಿಯಂತ್ರಣದಲ್ಲೇ ಇದೆ. ಮತ್ತೆ ತರುವ ಪ್ರಶ್ನೆ ಎಲ್ಲಿದೆ ಎಂದರು. ಉಜ್ಜಯಿನಿ ಶ್ರೀ ಖಂಡನೆ
ಹುಬ್ಬಳ್ಳಿ: ಮಠಗಳು, ದೇವಸ್ಥಾನಗಳು ಹಾಗೂ ಧಾರ್ಮಿಕ ಸಂಸ್ಥೆಗಳನ್ನು ಧಾರ್ಮಿಕ ದತ್ತಿ ಕಾಯ್ದೆಗೆ ಒಳಪಡಿಸುವ ವಿಷಯ ಖಂಡನೀಯ ಎಂದು ಉಜ್ಜಯಿನಿ ಜಗದ್ಗುರು ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದರು ತಿಳಿಸಿದ್ದಾರೆ. ಪೇಜಾವರ ಶ್ರೀಗಳಿಂದ ಮಠ ತ್ಯಜಿಸುವ ಎಚ್ಚರಿಕೆ
ಉಡುಪಿ: ಸರ್ಕಾರ ಮಠಗಳ ನಿಯಂತ್ರಣಕ್ಕೆ ಮುಂದಾದರೆ, ತಾವು ಮಠವನ್ನೇ ತ್ಯಜಿಸುವುದಾಗಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಎಚ್ಚರಿಕೆ ನೀಡಿದ್ದಾರೆ.ಮಠಗಳನ್ನು ಸರ್ಕಾರ ಸ್ವಾಧೀನಕ್ಕೆ ತೆಗೆದುಕೊಳ್ಳುತ್ತವೆ ಎಂಬ ಸುದ್ದಿಗೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಮಠವನ್ನು ಸರಕಾರ ವಶಕ್ಕೆ ತೆಗೆದುಕೊಂಡರೆ ನಾವು ನೌಕರರಾಗಿ ಇರಲು ಇಷ್ಟಪಡುವುದಿಲ್ಲ ಎಂದರು. ದೃಶ್ಯಮಾಧ್ಯಮಗಳಲ್ಲಿ ಚರ್ಚೆ ನಡೆಯುತ್ತಿದೆ ಎಂದು ಕೇಳಿಬಂದಿದೆ. ಹೀಗಾದರೆ ಸರ್ಕಾರವೇ ವಿರೋಧ ಪಕ್ಷಗಳ ಕೈಗೆ ಶಸ್ತ್ರ ಕೊಟ್ಟಂತೆ. ಹಿಂದು ವಿರೋಧಿ ಸರಕಾರ ಎಂಬುದು ಸ್ಪಷ್ಟವಾಗುತ್ತದೆ. ಜಾತ್ಯತೀತ ಸರ್ಕಾರ ಹೀಗೆ ಮಾಡಬಾರದು. ತಾವು ಇತ್ತೀಚೆಗೆ ಅಲ್ಪಸಂಖ್ಯಾತ-ಬಹುಸಂಖ್ಯಾತ ಎಂಬ ಬೇಧಭಾವ ಇರಬಾರದು ಎಂದು ಹೇಳಿದ್ದು ಇದೇ ದೃಷ್ಟಿಯಿಂದ ಎಂದರು. ಸರ್ವೋಚ್ಚ ನ್ಯಾಯಾಲಯದ ಸಲಹೆಯಂತೆ ದತ್ತಿ ಕಾಯಿದೆಗೆ ತಿದ್ದುಪಡಿ ತರುತ್ತಿದ್ದಾರಷ್ಟೆ ಎಂಬ ಸಚಿವರ ಹೇಳಿಕೆಯನ್ನು ಸ್ವಾಮೀಜಿಯವರ ಗಮನಕ್ಕೆ ತಂದಾಗ ಹಾಗಿದ್ದರೆ ತೊಂದರೆ ಇಲ್ಲ ಎಂದರು. ಬೆಂಕಿಗೆ ಕೈಹಾಕಿದಂತೆ ಎಂದ ಪಲಿಮಾರು ಶ್ರೀಗಳು: ಸರ್ಕಾರಕ್ಕೆ ತನ್ನದೇ ಆದ ಅನೇಕ ಕಾರ್ಯಗಳಿವೆ. ಅದನ್ನು ಬಿಟ್ಟು ಧಾರ್ಮಿಕ ಸಂಸ್ಥೆಗಳಿಗೆ ಕೈ ಹಾಕಬಾರದು. ಅದನ್ನು ಆಯಾ ಧರ್ಮಾಧಿಕಾರಿಗಳೇ ನೋಡಿಕೊಳ್ಳುತ್ತಾರೆ. ಸರ್ಕಾರ ನಡೆಸಲಾಗದೆ ಅನೇಕ ಸಂಸ್ಥೆಗಳನ್ನು ಖಾಸಗಿಯವರಿಗೆ ಒಪ್ಪಿಸಿದ ಉದಾಹರಣೆಗಳಿವೆ. ಧರ್ಮ ಸಂಸ್ಥೆಗಳು ಧರ್ಮ ಪ್ರಚಾರಕ್ಕೆ, ಭಕ್ತರಿಗೆ ಮಾರ್ಗದರ್ಶನ ನೀಡಲು ಹೊರತು ದುಡ್ಡು ಮಾಡುವು ದಕ್ಕಲ್ಲ. ಸರ್ಕಾರ ಮಠ, ಮಂದಿರ ವಿಷಯದಲ್ಲಿ ಹಸ್ತಕ್ಷೇಪ ಮಾಡಿದರೆ ಬೆಂಕಿಗೆ ಕೈ ಹಾಕಿದಂತೆ. ಸಾರ್ವಜನಿಕರು ಇದನ್ನು ಪ್ರಬಲವಾಗಿ ವಿರೋಧಿಸುತ್ತಾರೆ. ಹಿಂದೆ ಕೃಷ್ಣ ಮಠದ ವಿಷಯದಲ್ಲಿ ಕೈ ಹಾಕಿ ಸುಟ್ಟುಕೊಂ ಡಿ¨ªಾರೆ. ಕೋರ್ಟ್ ಕೂಡ ಮಠದ ಪರವಾಗಿ ತೀರ್ಪು ನೀಡಿದೆ ಎಂಬುದನ್ನು ಮರೆಯ ಬಾರದು. ಸರ್ಕಾರ ತಪ್ಪು ಹೆಜ್ಜೆ ಇಡಬಾರದು. ದ್ವೇಷದ ರಾಜಕಾರಣ ಮಾಡುವುದು ಸಲ್ಲದು ಎಂದು ಪರ್ಯಾಯ ಶ್ರೀಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದಾರೆ. ಹೆಗ್ಗಡೆಯವರ ಆಕ್ಷೇಪ
ಹಾಸನ: ಮಠಗಳ ನಿಯಂತ್ರಣಕ್ಕೆ ಮುಂದಾಗಿರುವ ರಾಜ್ಯ ಸರ್ಕಾರದ ಪ್ರಸ್ತಾಪಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ತೀವ್ರವಾಗಿ ವಿರೋಧಿಸಿದ್ದಾರೆ. ಶ್ರವಣಬೆಳಗೊಳದಲ್ಲಿಮಾತನಾಡಿದ ಅವರು, ರಾಜ್ಯ ಸರ್ಕಾರದ ಸುತ್ತೋಲೆ ಬಗ್ಗೆ ತಿಳಿದಿರಲಿಲ್ಲ. ಈಗಷ್ಟೆ ತಮ್ಮ ಗಮನಕ್ಕೆ ಬಂದಿದೆ. ಸರ್ಕಾರವು ಅಂತಹ ನಡೆ ಅನುಸರಿಸಲು ಮುಂದಾದರೆ ಖಂಡಿತಾ ವಿರೋಧಿಸುತ್ತೇವೆ. ಎಲ್ಲಾ ವ್ಯವಹಾರಗಳೂ ರಾಷ್ಟ್ರೀಕರಣದಿಂದ ಹೊರಬರುತ್ತಿರುವ ಈ ಹೊತ್ತಿನಲ್ಲಿ ಮಠ, ಮಾನ್ಯಗಳನ್ನೂ ರಾಷ್ಟ್ರೀಕರಣ ಮಾಡಲು ಮುಂದಾಗುವುದನ್ನು ಒಪ್ಪಲು ಸಾಧ್ಯವೇ ಇಲ್ಲ. ಧರ್ಮದಲ್ಲಿ ರಾಜಕೀಯ ಪ್ರವೇಶ ಮಾಡಬಾರದು. ಇದನ್ನು ಸರ್ಕಾರ ತಿಳಿದುಕೊಳ್ಳುವುದು ಒಳಿತು. ತನ್ನ ನಡೆಯನ್ನು ಬದಲಿಸಿ ಕಾಯ್ದೆಗೆ ತಿದ್ದುಪಡಿ ತರುವ ಪ್ರಯತ್ನವನ್ನು ಕೈಬಿಡದಿದ್ದರೆ ವಿರೋಧಿಸುವುದು ಖಚಿತ. ಯಾವ ಮಾರ್ಗದಲ್ಲಿ ಹೋರಾಟ ಮಾಡಬೇಕೆಂಬುದನ್ನೂ ಚಿಂತನೆ ಮಾಡಬೇಕಾದೀತು ಎಂದು ಪರೋಕ್ಷ ಎಚ್ಚರಿಕೆ ನೀಡಿದರು. ಎಲ್ಲ ಸರ್ಕಾರದ ವ್ಯಾಪ್ತಿಗೆ
ಒಂದೊಮ್ಮೆ ಕಾಯ್ದೆಗೆ ತಿದ್ದುಪಡಿ ತಂದು ಕಾನೂನು ರೂಪಿಸಿದರೆ ತುಮಕೂರಿನ ಸಿದಟಛಿಗಂಗಾ, ಮೈಸೂರಿನ ಸುತ್ತೂರು, ನಾಗಮಂಗಲದ ಆದಿಚುಂಚನಗಿರಿ, ಧರ್ಮಸ್ಥಳ, ಹುಬ್ಬಳ್ಳಿ ಮೂರು ಸಾವಿರ ಮಠ, ಸಿರಿಗೆರೆ, ಚಿತ್ರದುರ್ಗ ಮರುಘಾಮಠ, ಉಡುಪಿ ಮಠ, ಸುಬ್ರಹ್ಮಣ್ಯ ಮಠ, ರಾಮಚಂದ್ರಾಪುರ ಮಠಗಳ ಮೇಲೂ ನಿಯಂತ್ರಣ ಇರಲಿದೆ. ಮಠ ಮಾನ್ಯಗಳನ್ನು ಯಾವುದೇ ಕಾರಣಕ್ಕೆ ಸರ್ಕಾರದ ಸುಪರ್ದಿಗೆ ತರಲು ಬಿಡುವುದಿಲ್ಲ. ಈ ಸುತ್ತೋಲೆಯ ಹಿಂದಿನ ಮುಗªಉದ್ದೇಶ ಗೊತ್ತಿದೆ. ಹಿಂದೂಗಳ ಕೊಲೆಯ ಜತೆಗೆ ಹಿಂದೂಗಳನ್ನು ಬೆದರಿಸುವ ದುಷ್ಟ ಯತ್ನವೂ ಈ ನಡೆಯ ಹಿಂದೆ ಇರಬಹುದು. ರಾಜಕೀಯಕ್ಕಾಗಿ ಏನನ್ನೂ ಮಾಡಲು ಹೇಸದವರು.
– ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ ಅತ್ಯಂತ ಪವಿತ್ರವಾದ ಮಠ-ಮಂದಿರಗಳನ್ನು ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಹಿಂದೂಗಳ ಮೇಲೆ ಮಾಡುತ್ತಿರುವ ಘೋರ ಆಕ್ರಮಣ. ಹಿಂದೂ ನಂಬಿಕೆ ಮತ್ತು ಭಾವನೆಗಳಿಗೆ ಧಕ್ಕೆ ತರಲು ತುಘಲಕ್ ಆಳ್ವಿಕೆ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬಿಜೆಪಿ ಕರ್ನಾಟಕ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ.
– ಸಿ.ಟಿ.ರವಿ, ಬಿಜೆಪಿ ರಾಜ್ಯ
ಪ್ರಧಾನ ಕಾರ್ಯದರ್ಶಿ