ತಂತ್ರಜ್ಞಾನವು ಅತೀ ವೇಗದಿಂದ ಬೆಳೆಯುತ್ತಿರುವುದರಿಂದ ಮತ್ತು ವಿವಿಧ ಶೈಕ್ಷಣಿಕ ಪ್ರಾರಂಭಗಳು ಕೂತಲ್ಲಿಯೇ ಸಿಗುತ್ತಿರುವುದರಿಂದ ತರಗತಿಯ ತರಬೇತಿ ಬದಲಾಗಿದೆ. ಆನ್‌ಲೈನ್‌ನಲ್ಲಿ ಲಭ್ಯವಿರುವ ಅನೇಕ ಕೋರ್ಸ್‌ಗಳು ವಿದ್ಯಾರ್ಥಿಗಳಿಗೆ ವರ್ಚುವಲ್ ಪಾಠಗಳನ್ನು ನೀಡುತ್ತವೆ. ನೀವು ಪ್ರಸ್ತುತ ಅಧ್ಯಯನ ನಡೆಸುತ್ತಿರುವವರಾದರೆ ನಿಮಗೆ ಸಹಾಯ ಮಾಡುವ ನಾಲ್ಕು ಅಪ್ಲಿಕೇಶನ್‌ಗಳು ಇಲ್ಲಿವೆ.
ಉಡೆಮಿ: ವ್ಯಾಪಾರ ಮತ್ತು ವಿನ್ಯಾಸದಿಂದ ಮಾರ್ಕೆಟಿಂಗ್ ಮತ್ತು ಮಾಹಿತಿ ತಂತ್ರಜ್ಞಾನದವರೆಗೆ ಆಕಾಂಕ್ಷೆಗಳನ್ನು ಹೊಂದಿರುವ ಮತ್ತು ಉತ್ತಮ ಪ್ರೇಕ್ಷಕರನ್ನು ಪೂರೈಸುವ ಶೈಕ್ಷಣಿಕ ತಂತ್ರಜ್ಞಾನ ಅಪ್ಲಿಕೇಶನ್ ಗಳಲ್ಲಿ ಉಡೆಮಿ ಒಂದಾಗಿದೆ. ಪ್ರಸ್ತುತ 57 ಸಾವಿರಕ್ಕೂ ಹೆಚ್ಚು ಬೋಧಕರು ಮತ್ತು 150ಕ್ಕೂ ಹೆಚ್ಚಿನ ಕೋರ್ಸ್‌ಗಳನ್ನು ವಿವಿಧ ಭಾಷೆಗಳಲ್ಲಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ಅನಾಕೆಡೆಮಿ: ಎಸ್‌ಎಸ್‌ಸಿ , ಬೋರ್ಡ್, ಐಸಿಎಸ್‌ಇ, ಯುಪಿಎಸ್‌ಸಿ, ಏರ್‌ಫೋರ್ಸ್ ಮತ್ತು ನೀಟ್ ರಾಜ್ಯ ಸಾರ್ವಜನಿಕ ಸೇವಾ ಆಯೋಗಗಳು , ನಿರ್ವಹಣೆ ಮತ್ತು ವಿದೇಶಿ ಅಧ್ಯಯನಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗಾಗಿ ಅನಾಕೆಡೆಮಿ ವಿನ್ಯಾಸಗೊಳಿಸಲಾಗಿದೆ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನಿಡಲು ವ್ಯಸ್ಥಿತವಾದ ಕೋರ್ಸ್, ಉತ್ತಮ ಬೋಧಕರು, ಪರೀಕ್ಷಾ ತಯಾರಿ ಸಾಮಗ್ರಿಗಳನ್ನು ಈ ಅಪ್ಲಿಕೇಶನ್ ನಲ್ಲಿ ಕಾಣಬಹುದಾಗಿದೆ.
ಬ್ರೇನ್ಲಿ: ಇದು ಅತಿದೊಡ್ಡ ಆನ್‌ಲೈನ್ ಕಲಿಕೆಯ ವೇದಿಕೆಗಳಲ್ಲಿ ಒಂದಾಗಿದೆ. ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರೊಂದಿಗೆ ಅವರ ಶೈಕ್ಷಣಿಕ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಜ್ಞಾನ ವಿನಿಮಯಕ್ಕೆ ಸಹಾಯ ಮಾಡುತ್ತದೆ. ಗಣಿತ, ವಿಜ್ಞಾನ, ಇತಿಹಾಸ ಕೌಶಲಗಳನ್ನು ಬಲಪಡಿಸಲು ಇದು ಉತ್ತಮ ಸ್ಥಳವಾಗಿದೆ.
ವೇದಾಂತು: ವೇದಾಂತ ಲರ್ನ್ ಲೈವ್ ಆನ್‌ಲೈನ್ , ಸಿಬಿಎಸಿ, ಎನ್‌ಟಿಎಇ ಮತ್ತು ಐಐಟಿ ಜೆಇ ವರೆಗಿನ ಪಠ್ಯಕ್ರಮವನ್ನು ಒಳಗೊಂಡಿದೆ. ಇದು ತನ್ನ ವೆಬ್‌ಸೈಟ್‌ನಲ್ಲಿ ಮತ್ತು ಅಪ್ಲಿಕೇಶನ್ ಮೂಲಕ ಉಚಿತ ಆನ್‌ಲೈನ್ ತರಗತಿಗಳನ್ನು ಸಹ ನೀಡುತ್ತದೆ. ಆನ್‌ಲೈನ್ ಕೋರ್ಸ್‌ಗಳನ್ನು ಹೊರತುಪಡಿಸಿ ಉಚಿತ ಅಧ್ಯಯನ ಸಾಮಗ್ರಿಗಳು ಇಲ್ಲಿ ಲಭ್ಯವಿದೆ.