Advertisement

ಕಾಶ್ಮೀರಕ್ಕೆ ಹೆಚ್ಚುವರಿ ಸೇನೆ ಸರಕಾರದ ಸಮರ್ಥನೆ

01:48 AM Jul 29, 2019 | sudhir |

ಹೊಸದಿಲ್ಲಿ: ಜಮ್ಮು ಕಾಶ್ಮೀರದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಉಗ್ರರು ಸಂಚು ರೂಪಿಸುವ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಕಣಿವೆ ರಾಜ್ಯಕ್ಕೆ 10,000 ಸೇನಾ ತುಕಡಿಗಳನ್ನು ರವಾನಿಸಲಾಗಿದೆ ಎಂದು ಕೇಂದ್ರ ಸರಕಾರ ಸ್ಪಷ್ಟನೆ ನೀಡಿದೆ.

Advertisement

“”ಇತ್ತೀಚೆಗೆ ಜಮ್ಮು ಕಾಶ್ಮೀರದಲ್ಲಿ ಪಂಚಾಯತ್‌ ಚುನಾವಣೆಗಳು ಶಾಂತವಾಗಿ ನಡೆದಿವೆ. ಹೆಚ್ಚಿನ ಯಾತ್ರಾರ್ಥಿಗಳು ಪಾಲ್ಗೊಂಡಿರುವ ಅಮರ್‌ನಾಥ ಯಾತ್ರೆಯೂ ಶಾಂತಿಯುತವಾಗಿ ನಡೆಯುತ್ತಿದೆ. ಇದು ಪಾಕಿಸ್ಥಾನ ಸರಕಾರ, ಐಎಸ್‌ಐ ಕಸಿವಿಸಿಗೆ ಕಾರಣವಾಗಿದೆ. ಹಾಗಾಗಿ, ಭಯೋತ್ಪಾದಕ ಸಂಘಟನೆಗಳಿಗೆ ಕಣಿವೆ ರಾಜ್ಯದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸೂಚಿಸಿವೆ. ಇತ್ತೀಚೆಗೆ, ಗಡಿಯಲ್ಲಿ ಭಾರತ ದೊಳಕ್ಕೆ ನುಸುಳಲು ಯತ್ನಿಸಿದ್ದ ಉಗ್ರರ ತಂಡವೊಂದನ್ನು ಸೇನೆಯು ಹೊಡೆದು ರುಳಿಸಿದ ಪ್ರಕರಣವೇ ಇದಕ್ಕೆ ಸಾಕ್ಷಿ. ಹಾಗಾಗಿ, ಮುನ್ನೆಚ್ಚರಿಕೆ ಕ್ರಮವಾಗಿ ಸೇನಾ ತುಕಡಿಗಳನ್ನು ರವಾನಿಸಲಾಗಿದೆ ಎಂದು ಕೇಂದ್ರ ಸರಕಾರ ಹೇಳಿದೆ.

ಕಣಿವೆ ರಾಜ್ಯದಲ್ಲಿನ 35ಎ ಕಲಂ ರದ್ದು ಮಾಡುವ ಉದ್ದೇಶದಿಂದಲೇ ಕೇಂದ್ರ ಸರಕಾರ ಹೆಚ್ಚುವರಿ ಸೇನೆಯನ್ನು ರವಾನಿಸಿದೆ ಎಂಬ ಸುದ್ದಿಗಳು ಕೇಳಿಬಂದ ಹಿನ್ನೆಲೆಯಲ್ಲಿ ಸರಕಾರದ ಮೂಲಗಳು ಈ ಸ್ಪಷ್ಟನೆ ನೀಡಿವೆ.

ಕಣಿವೆ ರಾಜ್ಯದ ಬಿಜೆಪಿ ನಾಯಕರ ಸಭೆ: ಜಮ್ಮು ಕಾಶ್ಮೀರದ ಸ್ಥಿತಿಗತಿಗಳ ಬಗ್ಗೆ ಚರ್ಚಿ ಸಲು ಕೇಂದ್ರ ಸರಕಾರ, ಅಲ್ಲಿನ ಬಿಜೆಪಿ ಸಂಸದರ ಹಾಗೂ ನಾಯಕರ ಸಭೆಯನ್ನು ಮಂಗಳವಾರ ಕರೆದಿದೆ. ಹೊಸದಿಲ್ಲಿಯಲ್ಲಿ ನಡೆಯಲಿರುವ ಈ ಸಭೆಯಲ್ಲಿ ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಹಾಗೂ ಕೇಂದ್ರದ ಗೃಹ ಸಚಿವ ಅಮಿತ್‌ ಶಾ ಭಾಗ ವಹಿಸುವ ನಿರೀಕ್ಷೆಯಿದೆ. ಜಮ್ಮು ಕಾಶ್ಮೀರಕ್ಕೆ ಯಾವುದೇ ಸಂದರ್ಭದಲ್ಲಿ ಚುನಾವಣೆ ಘೋಷಣೆಯಾಗುವ ಸಾಧ್ಯತೆಗಳಿದ್ದು, ಚುನಾವಣೆಗೆ ಬಿಜೆಪಿ ಮಾಡಿಕೊಳ್ಳಬೇಕಾದ ಸಿದ್ಧತೆಗಳ ಬಗ್ಗೆ ಚರ್ಚಿಸಲು ಈ ಸಭೆ ಕರೆದಿರುವುದಾಗಿ ಹೇಳಲಾಗಿದೆ.

ದೊಡ್ಡ ಮಟ್ಟದ ಹೋರಾಟಕ್ಕೆ ಸಿದ್ಧರಾಗಿ
ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 35ಎ ಕಲಂ ರದ್ದತಿಗೆ ಕೈ ಹಾಕಿದರೆ, ಇಡೀ ಕಣಿವೆ ರಾಜ್ಯ ಹೊತ್ತಿ ಉರಿಯಲಿದೆ ಎಂದು ಜಮ್ಮು ಕಾಶ್ಮೀರದ ಮಾಜಿ ಸಿಎಂ ಮೆಹಬೂಬ ಮುಫ್ತಿ, ಕೇಂದ್ರವನ್ನು ಎಚ್ಚರಿಸಿದ್ದಾರೆ. “35ಎ ಕಲಂ’ ಬೆಂಕಿಯಿದ್ದಂತೆ, ಅದನ್ನು ಮುಟ್ಟುವವರ ಕೈಗಳು ಮಾತ್ರ ವಲ್ಲ, ಇಡೀ ದೇಹವೇ ಸುಟ್ಟು ಹೋಗುತ್ತದೆ. ಇದರ ತಂಟೆಗೆ ಬಂದರೆ ಕೇಂದ್ರ ಸರಕಾರ ಬೂದಿಯಾಗುತ್ತದೆ ಎಂದಿ ರುವ ಅವರು, ಜಮ್ಮು ಕಾಶ್ಮೀರದ ಸ್ವಾಯತ್ತತೆಯನ್ನು ಕಾಪಾಡು ವಲ್ಲಿ ತಮ್ಮ ಪಿಡಿಪಿ ಪಕ್ಷವೊಂದೇ ದೈತ್ಯ ಗೋಡೆಯಂತೆ ಗಟ್ಟಿ ಯಾಗಿ ನಿಂತಿದೆ. ಕೇಂದ್ರವು ನನ್ನನ್ನು ಜೈಲಿಗೆ ಅಟ್ಟಬಹುದು. ಆದರೆ, ಕಣಿವೆ ರಾಜ್ಯದ ನೈತಿಕತೆಗಾಗಿ ಕೊನೇ ಕ್ಷಣದವರೆಗೆ ನಾನು, ನನ್ನೊಂದಿಗೆ ಪಿಡಿಪಿ ಹೋರಾ ಡುತ್ತದೆ. ನೀವೆಲ್ಲರೂ ಈಗ ದೊಡ್ಡ ಹೋರಾಟಕ್ಕೆ ಸಿದ್ಧವಾಗಬೇಕಿದೆ” ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next