Advertisement

ಈಶಾನ್ಯದಲ್ಲಿ ಹೆಚ್ಚುವರಿ ಸೇನೆ? 

11:39 PM Nov 20, 2021 | Team Udayavani |

ಹೊಸದಿಲ್ಲಿ: ಈಶಾನ್ಯ ರಾಜ್ಯಗಳಲ್ಲಿ ನಕ್ಸಲರ ಉಪಟಳ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಆ ಎಲ್ಲ ರಾಜ್ಯಗಳಲ್ಲಿ ಈ ಹಿಂದೆ ಇದ್ದಂತೆ ಹೆಚ್ಚುವರಿ ಸೇನಾ ತುಕಡಿಗಳನ್ನು ಕಾವಲಿಗೆ ನಿಯೋಜಿ­ಸುವ ಕುರಿತಂತೆ ಕೇಂದ್ರ ಸರಕಾರ ಚಿಂತನೆ ನಡೆಸಿದೆ.

Advertisement

ಇತ್ತೀಚೆಗೆ ಅಸ್ಸಾಂ ರೈಫ‌ಲ್ಸ್‌ ಪಡೆಯ ಕರ್ನಲ್‌ ವಿಪ್ಲಬ್‌ ತ್ರಿಪಾಠಿ, ಅವರ ಪತ್ನಿ ಹಾಗೂ 6 ವರ್ಷದ ಪುತ್ರ ಹಾಗೂ ನಾಲ್ವರು ಯೋಧ­ರನ್ನು ಮಣಿಪುರದ ಚುರಾಚಂದ್‌ಪುರ್‌ ಅರಣ್ಯ ಪ್ರದೇಶದಲ್ಲಿ ಪೀಪಲ್ಸ್‌ ರೆವಲ್ಯೂಶನರಿ ಪಾರ್ಟಿ ಆಫ್ ಕಾಂಗ್ಲೆàಪಾಕ್‌ (ಪಿಆರ್‌ಇಪಿಎಕೆ) ಸಂಘಟನೆಗೆ ಸೇರಿದ ತೀವ್ರಗಾಮಿ­ಗಳು ಬಾಂಬ್‌ ಹಾಗೂ ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದರು. ಇದರ ಬೆನ್ನಲ್ಲೇ ಮತ್ತಷ್ಟು  ಅಪಹರಣ, ಹಿಂಸೆಯ ಘಟನೆಗಳು ನಡೆದಿವೆ. ಹಾಗಾಗಿ ತೀವ್ರವಾದಿಗಳ ದಾಳಿ­ಗಳನ್ನು ಹಿಮ್ಮೆ­ಟ್ಟಿ­ಸಲು ಹಾಗೂ ಆ ರಾಜ್ಯಗಳ ಅಧಿಕಾರಿಗಳಿಗೆ ಹಾಗೂ ನಾಗರಿಕರಿಗೆ ಸುರಕ್ಷತೆ ನೀಡಲು ಕೇಂದ್ರ ಸರಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಆ ರಾಜ್ಯಗಳಲ್ಲಿ ಹೆಚ್ಚುವರಿ ಸೇನಾ ಜಮಾವಣೆ ಮಾಡಲು ಕೇಂದ್ರ ಚಿಂತನೆ ನಡೆಸಿದೆ.

ಆರು ರಾಜ್ಯಗಳ ಬಂದ್‌ಗೆ ಮಾವೋವಾದಿಗಳ ಕರೆ:

ಇತ್ತೀಚೆಗೆ, ಮಹಾರಾಷ್ಟ್ರದ ಗಡಿcರೋಲಿಯಲ್ಲಿ ಮಹಾರಾಷ್ಟ್ರ ಪೊಲೀಸ್‌ನ ನಕ್ಸಲ್‌ ನಿಗ್ರಹ ಪಡೆ ಹಾಗೂ ನಕ್ಸಲರ ನಡುವೆ ನಡೆದಿದ್ದ ಗುಂಡಿನ ಚಕಮಕಿಯಲ್ಲಿ 27 ನಕ್ಸಲರು ಹತ್ಯೆಗೀಡಾದ ಹಿನ್ನೆಲೆಯಲ್ಲಿ ಆರು ರಾಜ್ಯಗಳಲ್ಲಿ ನ. 27ರಂದು ಬಂದ್‌ ಆಚರಿಸುವಂತೆ ನಿಷೇಧಿತ ಸಿಪಿಎಂ ಸಂಘಟನೆ ಕರೆಕೊಟ್ಟಿದೆ. ಮಡಿದ ನಕ್ಸಲರಿಗೆ ಶ್ರದ್ಧಾಂಜಲಿ ಸಲ್ಲಿಸಲು ಮಹಾರಾಷ್ಟ್ರ, ಛತ್ತೀಸ್‌ಗಢ‌, ಮಧ್ಯಪ್ರದೇಶ, ಆಂಧ್ರಪ್ರದೇಶ, ಒಡಿಶಾ ಹಾಗೂ ತೆಲಂಗಾಣ ರಾಜ್ಯಗಳಲ್ಲಿರುವ ಈ ಸಂಘಟನೆಯ ಘಟಕಗಳು ತಮ್ಮ ರಾಜ್ಯಗಳಲ್ಲಿ ಬಂದ್‌ ಆಚರಿಸಬೇಕೆಂದು ಕರೆ ನೀಡಿವೆ.

ಯಾವ್ಯಾವ ರಾಜ್ಯಗಳಲ್ಲಿ ಹೆಚ್ಚು ಭದ್ರತೆ?:

Advertisement

ಅಸ್ಸಾಂ, ಮಣಿಪುರ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್‌ ರಾಜ್ಯಗಳಲ್ಲಿ ತೀವ್ರಗಾಮಿ ಸಂಘಟನೆಗಳ ಹಾವಳಿ ಹೆಚ್ಚಾಗಿರುವುದ­ರಿಂದ ಆ ರಾಜ್ಯಗಳಲ್ಲೇ ಹೆಚ್ಚು ಸೇನೆಯನ್ನು ಜಮಾವಣೆ ಮಾಡಲು ತೀರ್ಮಾನಿಸಲಾಗಿದೆ.

ತೀವ್ರಗಾಮಿ ಸಂಘಟನೆಗಳ್ಯಾವುವು? :

ಸಂಘಟನೆ/     ರಾಜ್ಯ

ಉಲ್ಫಾ             /ಅಸ್ಸಾಂ

ಎನ್‌ಎಸ್‌ಸಿಎನ್‌-ಕೆ (ವೈಎ)        /ಅರುಣಾಚಲ ಪ್ರದೇಶ, ನಾಗಾಲ್ಯಾಂಡ್‌

ಪೀಪಲ್ಸ್‌ ಲಿಬರೇಶನ್‌ ಆರ್ಮಿ    /ಮಣಿಪುರ

ಪೀಪಲ್ಸ್‌ ರೆವಲ್ಯೂಶನರಿ ಪಾರ್ಟಿ ಆಫ್ ಕಾಂಗ್ಲೈ ಪಾಕ್‌ (ಪಿಆರ್‌ಇಪಿಎಕೆ) /ಮಣಿಪುರ

ಕಾಂಗ್ಲೈ ಯವೊಲ್‌ ಕನ್ನಾ ಲುಪ್‌ (ಕೆವೈಕೆಎಲ್‌) /ಮಣಿಪುರ

ಯುನೈಟೆಡ್‌ ನ್ಯಾಶನಲ್‌ ಲಿಬರೇಶನ್‌ ಫ್ರಂಟ್‌ /  ಮಣಿಪುರ

Advertisement

Udayavani is now on Telegram. Click here to join our channel and stay updated with the latest news.

Next