Advertisement

ಛೋಟಾ ಶಕೀಲ್‌ ಬಂಟ ಸಲೀಂ ಇಕ್ಬಾಲ್ ಮುಂಬಯಿ ಪೋಲೀಸರ ಕಸ್ಟಡಿಗೆ

09:20 PM Oct 01, 2022 | Team Udayavani |

ಮುಂಬಯಿ : ಸುಲಿಗೆ ಪ್ರಕರಣದ ತನಿಖೆಯ ಭಾಗವಾಗಿ ಮುಂಬಯಿ ಪೊಲೀಸರು ಶನಿವಾರ ಎನ್‌ಐಎ ವಶದಲ್ಲಿರುವ ಸಲೀಂ ಇಕ್ಬಾಲ್ ಖುರೇಷಿ ಅಲಿಯಾಸ್ ಸಲೀಂ ಫ್ರೂಟ್‌ನನ್ನು( ಗ್ಯಾಂಗ್‌ಸ್ಟರ್ ಛೋಟಾ ಶಕೀಲ್‌ನ ಸಂಬಂಧಿ) ಕಸ್ಟಡಿಗೆ ತೆಗೆದುಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

ಪರಾರಿಯಾಗಿರುವ ಗ್ಯಾಂಗ್‌ಸ್ಟರ್ ದಾವೂದ್ ಇಬ್ರಾಹಿಂ ಮತ್ತು ಆತನ ಸಹಾಯಕರ ವಿರುದ್ಧ ಎನ್‌ಐಎ ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಖುರೇಷಿ ನ್ಯಾಯಾಂಗ ಬಂಧನದಲ್ಲಿದ್ದ.

ಇದನ್ನೂ ಓದಿ : ಗುಂಡ್ಲುಪೇಟೆ: ಭಾರತ್ ಜೋಡೋ ಯಾತ್ರೆಯಲ್ಲಿ ಪೇಸಿಎಂ ಟೀ ಶರ್ಟ್ ಧರಿಸಿದ್ದ ಯುವಕನ ಬಂಧನ

ಸುಲಿಗೆ ಪ್ರಕರಣದಲ್ಲಿ ಮುಂಬಯಿ ಕ್ರೈಂ ಬ್ರಾಂಚ್‌ನ ಸುಲಿಗೆ ವಿರೋಧಿ ಸೆಲ್ (ಎಇಸಿ) ಆತನನ್ನು ವಶಕ್ಕೆ ತೆಗೆದುಕೊಂಡಿದೆ. ಈ ಹಿಂದೆ ದಾವೂದ್ ಇಬ್ರಾಹಿಂ ಸಹಾಯಕ ರಿಯಾಜ್ ಭಾಟಿಯನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಭಾಟಿ ಮತ್ತು ಖುರೇಷಿ ಅಲಿಯಾಸ್ ಫ್ರೂಟ್ ರಿಂದ ನಗದು ಮತ್ತು ಅತ್ಯಾಧುನಿಕ ಕಾರನ್ನು ಸುಲಿಗೆ ಮಾಡಿದ್ದಾರೆ ಎಂದು ಉದ್ಯಮಿಯೊಬ್ಬರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next