Advertisement

ಸೌರವ್ಯೂಹಕ್ಕೊಬ್ಬ ಬಾಹ್ಯ ಅತಿಥಿ

07:55 AM Oct 29, 2017 | Team Udayavani |

ವಾಷಿಂಗ್ಟನ್‌: ನಮ್ಮ ಸೌರವ್ಯೂಹದಾಚೆಗೂ ಗ್ರಹಗಳು, ಉಪಗ್ರಹಗಳು ಹಾಗೂ ನಕ್ಷತ್ರಗಳಿವೆ. ಅನ್ಯಗ್ರಹ ಜೀವಿಗಳಿವೆ ಎಂಬ ಊಹೆ ಹಾಗೂ ತರ್ಕಕ್ಕೆ ಈ ವರೆಗೂ ಯಾವುದೇ ಪೂರಕ ಸಾಕ್ಷ್ಯ ಸಿಕ್ಕಿರಲಿಲ್ಲ. ಆದರೆ ಇದೀಗ ಅಂಥ ಸಾಕ್ಷ್ಯವೊಂದು ಸಿಕ್ಕಿದೆ. ಸೌರವ್ಯೂಹದಾಚೆಗಿನದ್ದು ಎಂದು ಹೇಳಲಾದ ಒಂದು ವಿಶಿಷ್ಟ ಕಲ್ಲಿನಂತಹ ವಸ್ತು ಖಗೋಳವಿಜ್ಞಾನಿಗಳಿಗೆ ಕಂಡು ಬಂದಿದೆ. ಈ ವಸ್ತು ಸುಮಾರು 400 ಮೀ. ವ್ಯಾಸ ಹೊಂದಿದೆ. ಈ ಹಿಂದೆ ಹಲವು ಬಾರಿ ಈ ರೀತಿಯ ವಸ್ತು ಕಂಡುಬಂದಿರುವುದಾಗಿ ಹೇಳಿದ್ದರೂ ಅದಕ್ಕೆ ಪುರಾವೆ ಸಿಕ್ಕಿರಲಿಲ್ಲ.

Advertisement

ಅಮೆರಿಕ ರಾಯಲ್‌ ಅಬ್ಸರ್ವೇಟರಿ ರಿಸರ್ಚ್‌ನ ಸಂಶೋಧಕರ ಪ್ರಕಾರ “ಇದು ಬೇರೊಂದು ಸೌರವ್ಯೂಹದಿಂದ ಬಂದ ನಮ್ಮ ಅತಿಥಿ’! ಈ ವಸ್ತುವು ಸೂರ್ಯನ ಗುರುತ್ವಾಕರ್ಷಣೆಯನ್ನೂ ತಪ್ಪಿಸಿಕೊಳ್ಳಬಲ್ಲಷ್ಟು ವೇಗವಾಗಿ ಚಲಿಸಿದೆ. ಸಾಮಾನ್ಯವಾಗಿ ಯಾವುದೇ ಗ್ರಹದ ಬಳಿ ಆಗಮಿಸಿದಾಗ ಆ ಗ್ರಹದ ಗುರುತ್ವಾಕರ್ಷಣೆಯಿಂದ ಅದು ಸಮೀಪಕ್ಕೆ ಆಕರ್ಷಿಸಲ್ಪಡುತ್ತದೆ. ಆದರೆ ಈ ವಸ್ತು ಯಾವುದೇ ಗ್ರಹದ ಆಕರ್ಷಣೆಗೂ ಒಳಪಟ್ಟಿಲ್ಲ.

ಸೆ.9ರಂದು ಮೊದಲ ಬಾರಿಗೆ ಸೂರ್ಯನಿಂದ 23.4 ಮೀಟರ್‌ ಮೈಲುಗಳಷ್ಟು ದೂರದಲ್ಲಿ ಹವಾಯಿ ದೂರದರ್ಶಕದಲ್ಲಿ ಇದು ಗೋಚರಿಸಿತ್ತು. ಮೇಲ್ಭಾಗದಿಂದ ನಮ್ಮ ಸೌರವ್ಯೂಹಕ್ಕೆ ಪ್ರವೇಶಿಸಿದ ಈ ವಸ್ತು ಬುಧ ಗ್ರಹದ ಕಕ್ಷೆಯ ಸಮೀಪ ಬಂದು ಸೂರ್ಯನಿ ಗಿಂತಲೂ ಕೆಳಭಾಗದಲ್ಲಿ ಕಂಡಿತ್ತು. ಅನಂತರ ಮೇಲೆ ಸಾಗಿದೆ. ಇನ್ನೊಂದೆಡೆ ಇದೇ ವಸ್ತುವಿಗೆ ಸಂಬಂಧಿಸಿದ ಪ್ರಕಟಿಸಲಾದ ಇನ್ನೊಂದು ಅಧ್ಯಯನ ವರದಿಯಲ್ಲಿ ಇದನ್ನು ಕ್ಷುದ್ರಗ್ರಹ ಎಂದೂ ಕರೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next