Advertisement

ಚೀನೀಯರಿಗೆ ಎರಡೇ ದಿನ, ಭಾರತೀಯರಿಗೆ 2 ತಿಂಗಳೇಕೆ?: ವಿದೇಶಾಂಗ ಸಚಿವ ಎಸ್‌.ಜೈಶಂಕರ್‌

07:13 PM Sep 29, 2022 | Team Udayavani |

ನವದೆಹಲಿ: ಅಮೆರಿಕದ ವೀಸಾ ಬಯಸುವ ಭಾರತೀಯರು ಕೇವಲ ಒಂದು ಅಪಾಯಿಂಟ್‌ಮೆಂಟ್‌ ಪಡೆಯಲು 2 ವರ್ಷಕ್ಕೂ ಅಧಿಕ ಸಮಯ ಕಾಯಬೇಕು. ಅದೇ ಚೀನೀಯರಿಗೆ ಎರಡೇ ಎರಡು ದಿನಗಳಲ್ಲಿ ಅಪಾಯಿಂಟ್‌ಮೆಂಟ್‌ ಸಿಗುತ್ತದೆ! ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌, ಅಮೆರಿಕದ ಗೃಹ ಸಚಿವ ಆ್ಯಂಟೋನಿ ಬ್ಲಿಂಕೆನ್‌ ಜೊತೆಗೆ ಈ ವಿಷಯವನ್ನು ಚರ್ಚಿಸಿದ್ದಾರೆ.

Advertisement

ಕೊರೊನಾ ಕಾರಣಕ್ಕೆ ವೀಸಾ ಪರಿಷ್ಕರಣೆ ಮಾಡುವ ಸಿಬ್ಬಂದಿಯಲ್ಲಿ ತೀವ್ರ ಕಡಿತವಾಗಿದೆ. ಹಾಗಾಗಿ ಇಂತಹ ಸ್ಥಿತಿ ಬಂದಿದೆ. ಆದರೆ ಸ್ಥಳೀಯವಾಗಿ ಕೊರೊನಾ, ಇನ್ನಿತರ ಸಂಗತಿಗಳನ್ನು ನೋಡಿಯೇ ಎಷ್ಟು ವೀಸಾಗಳನ್ನು ನೀಡಬೇಕು ಎನ್ನುವುದನ್ನು ನಿರ್ಧರಿಸಲಾಗುತ್ತದೆ ಎಂದೂ ಸ್ಪಷ್ಟಪಡಿಸಲಾಗಿದೆ.

ಪ್ರಸ್ತುತ ದೆಹಲಿ ಮತ್ತು ಮುಂಬೈನಿಂದ ವೀಸಾಕ್ಕೆ ಅರ್ಜಿ ಸಲ್ಲಿಸಿದರೆ 833 ದಿನಗಳ ಕಾಲ ಕಾಯಬೇಕಾಗುತ್ತದೆ. ಚೀನಾ ರಾಜಧಾನಿ ಬೀಜಿಂಗ್‌ನಿಂದಾದರೆ ಬರೀ 2 ದಿನ ಸಾಕು. ಪಾಕಿಸ್ತಾನದಿಂದ ಅರ್ಜಿ ಸಲ್ಲಿಸಿದರೆ 450 ದಿನ ಕಾಯಬೇಕಾಗುತ್ತದೆ. ವಿಚಿತ್ರವೆಂದರೆ ವಿದ್ಯಾರ್ಥಿ ವೀಸಾದ ವಿಚಾರದಲ್ಲೂ ಭಾರತೀಯರು ವರ್ಷಕ್ಕೂ ಅಧಿಕ ಸಮಯ ಕಾಯಬೇಕು. ಅದೇ ಇಸ್ಲಾಮಾಬಾದ್‌ಗಾದರೆ ಒಂದು ದಿನ, ಬೀಜಿಂಗ್‌ಗಾದರೆ 2 ದಿನ ಸಾಕು.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next