Advertisement

SLBC; ಬರ ಪೀಡಿತ ಪ್ರದೇಶದಲ್ಲಿ ಸಾಲ ಪಾವತಿ ಅವಧಿ ವಿಸ್ತರಣೆ

11:25 AM Oct 12, 2023 | Team Udayavani |

ಬೆಂಗಳೂರು: ಬರ ಘೋಷಿತ ತಾಲೂಕುಗಳಲ್ಲಿ ನಷ್ಟವಾಗಿರುವ ಬೆಳೆ ಪ್ರಮಾಣ ಆಧರಿಸಿ ಸಾಲ ಮರುಪಾವತಿಯ ಅವಧಿಯನ್ನು ವಿಸ್ತರಿಸುವಂತೆ ಎಲ್ಲ ಬ್ಯಾಂಕು ಗಳಿಗೆ ರಾಜ್ಯ ಮಟ್ಟದ ಬ್ಯಾಂಕರುಗಳ ಸಮಿತಿ (ಎಸ್‌ಎಲ್‌ಬಿಸಿ) ಸಲಹೆ ನೀಡಿದೆ.

Advertisement

ಶೇ.33ರಿಂದ 49ರ ವರೆಗೆ ಬೆಳೆ ನಷ್ಟವಾಗಿ ರುವ ರೈತರು ಹಾಗೂ ಶೇ.50ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ನಷ್ಟವಾಗಿರುವ ರೈತರಿಗೂ ಪರಿಹಾರ ವಿಸ್ತರಣೆಯನ್ನು ಮಾಡಬೇಕಿದೆ. ಪ್ರಕೃತಿ ವಿಕೋಪದಂತಹ ಸಂದರ್ಭಗಳಲ್ಲಿ ಆರ್‌ಬಿಐ ನೀಡಿರುವ ಪ್ರಮುಖ ನಿರ್ದೇಶನ ಗಳನ್ನು ಅನುಸರಿಸಿ ಪರಿಹಾರ ಕ್ರಮಗಳನ್ನು ಪುನರ್‌ ರಚಿಸುವಂತೆಯೂ ಎಸ್‌ಎಲ್‌ಬಿಸಿ ಸಲಹೆ ನೀಡಿದೆ.

ಆರ್‌ಬಿಐ ನಿರ್ದೇಶನದ ಪ್ರಕಾರ ಸಾಲ ಮರುಪಾವತಿಯ ಅವಧಿಯನ್ನು ತಾತ್ಕಾಲಿಕವಾಗಿ ಮುಂದೂಡುವ ಸಾಧ್ಯತೆಗಳ ಕುರಿತು ಚರ್ಚೆ ನಡೆದಿದೆ. ಶೇ.33ರಿಂದ 50ರಷ್ಟು ಪ್ರಮಾಣದಲ್ಲಿ ಬೆಳೆ ನಷ್ಟವಾಗಿರುವ ರೈತರಿಗೆ ಗರಿಷ್ಠ 2 ವರ್ಷಗಳವರೆಗೆ ಮರುಪಾವತಿ ಅವಧಿ ವಿಸ್ತರಿಸಲು ಅವಕಾಶವಿದೆ. ಅದೇ ರೀತಿ ಶೇ.50ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಬೆಳೆ ನಷ್ಟವಾಗಿದ್ದರೆ, ಅಂತಹ ರೈತರಿಗೆ ಗರಿಷ್ಠ 5 ವರ್ಷಗಳವರೆಗೆ ಸಾಲದ ಮರುಪಾವತಿಗೆ ಅವಕಾಶ ನೀಡಬಹುದು. ಈ ಬಗ್ಗೆ ಎಲ್ಲ ಬ್ಯಾಂಕುಗಳು ಸೂಕ್ತ ನಿರ್ಣಯಗಳನ್ನು ತೆಗೆದು ಕೊಳ್ಳಬೇಕು ಎಂದು ಅಭಿವೃದ್ಧಿ ಆಯುಕ್ತೆ ಡಾ| ಶಾಲಿನಿ ರಜನೀಶ್‌ ಸೂಚಿಸಿದರು.

ರಾಜ್ಯದಲ್ಲಿ ಸದ್ಯ 195 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಅಲ್ಲಿ ಬರ ಪರಿಹಾರ ಕ್ರಮವನ್ನು ವಿಸ್ತರಿಸಲು ಅನುಕೂಲವಾಗುವಂತೆ ಬ್ಯಾಂಕುಗಳು ಪರಿಹಾರ ಕ್ರಮಗಳನ್ನು ವಿಸ್ತರಿಸಬೇಕು ಎಂಬ ಚರ್ಚೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next