Advertisement

Honda: ಹೋಂಡಾದಿಂದ ವಿಸ್ತರಿತ ವಾರಂಟಿ, ವಿಸ್ತರಿತ ವಾರಂಟಿ ಪ್ಲಸ್‌ ಯೋಜನೆ

11:26 PM Aug 23, 2023 | Team Udayavani |

ಬೆಂಗಳೂರು: ಹೋಂಡಾ ಮೋಟಾರ್‌ ಸೈಕಲ… ಮತ್ತು ಸ್ಕೂಟರ್‌ ಇಂಡಿಯಾ (ಎಚ್‌ಎಂಎಸ್‌ಐ) ಗ್ರಾಹಕರಿಗೆ ವಾರಂಟಿ ಮತ್ತು ವಿಸ್ತರಿತ ವಾರಂಟಿ ಪ್ಲಸ್‌ ಯೋಜನೆಯನ್ನು ಪರಿಚಯಿಸುತ್ತಿದೆ. ಮೊದಲ 10,000 ಹೊಸ ವಾಹನ ಖರೀದಿ ಗ್ರಾಹಕರು ವಿಸ್ತರಿತ ವಾರಂಟಿ ನೋಂದಣಿಯನ್ನು ಉಚಿತವಾಗಿ ಪಡೆದುಕೊಳ್ಳಲಿದ್ದಾರೆ.

Advertisement

ಹೋಂಡಾ ಮೋಟಾರ್‌ ಸೈಕಲ… ಮತ್ತು ಸ್ಕೂಟರ್‌ ಇಂಡಿಯಾ ವಿಶೇಷ 10 ವರ್ಷದ “ವಿಸ್ತರಿತ ವಾರಂಟಿ’ ಮತ್ತು ವಿಸ್ತರಿತ ವಾರಂಟಿ ಪ್ಲಸ್‌ ಅನ್ನು ಪರಿಚಯಿಸಿದೆ. ಸಿಬಿ 350 ಎಚ್‌’ನೆಸ್‌, ಸಿಬಿ 350 ಆರ್‌ಎಸ್‌ಗಾಗಿ ವಾರಂಟಿ ಪ್ಲಸ್‌ ಯೋಜನೆಗಳು ಮೊದಲ 10,000 ಹೊಸ ಮೋಟಾರ್‌ ಸೈಕಲ… ಗ್ರಾಹಕರಿಗೆ ವಿಶೇಷ ಶೂನ್ಯ ವೆಚ್ಚದ ನೋಂದಣಿಯಲ್ಲಿ ಲಭಿಸಲಿದೆ.

ವಾಹನವನ್ನು ಖರೀದಿಸಿದ ದಿನಾಂಕದಿಂದ 91 ದಿನಗಳಿಂದ 9ನೇ ವರ್ಷದವರೆಗೆ ಈ ಯೋಜನೆಯು ಗ್ರಾಹಕರಿಗೆ ಸಮಗ್ರ ಕವರೇಜ್‌ ಮತ್ತು ನವೀಕರಣ ಆಯ್ಕೆಗಳನ್ನು ಒಳಗೊಂಡಿವೆ. ಈ ಅವಧಿಯಲ್ಲಿ ಮಾಲಕತ್ವದಲ್ಲಿ ಬದಲಾವಣೆಯ ಸಂದರ್ಭ ಸಹ ಇದನ್ನು ವರ್ಗಾಯಿಸಬಹುದಾಗಿದೆ. ಎಂಜಿನ್‌ ಬಿಡಿಭಾಗ ಸಹಿತ ಅಗತ್ಯ ಯಾಂತ್ರಿಕ ಮತ್ತು ವಿದ್ಯುತ್‌ ಭಾಗಗಳಿಗೆ ವಿಸ್ತರಿತ ವಾರಂಟಿ ಪ್ಲಸ್‌ ಅನ್ವಯಿಸುತ್ತದೆ.

ಗ್ರಾಹಕರಿಗೆ ಮೂರು ಸೂಕ್ತವಾದ ಆಯ್ಕೆಗಳನ್ನು ಒದಗಿಸುತ್ತದೆ. 7ನೇ ವರ್ಷದವರೆಗೆ, ಮೂರು ವರ್ಷದ ವರೆಗೆ ಮತ್ತು ಒಂದು ವರ್ಷಗಳವರೆಗಿನ ಯೋಜನೆಯಾಗಿರುತ್ತದೆ. ಈ ಆಯ್ಕೆಗಳು ಎಚ್‌’ನೆಸ್‌ ಸಿಬಿ 350 ಸಿಬಿ 350 ಆರ್‌ಎಸ್‌ಗಾಗಿ 1,30,000 ಕಿಲೋಮೀಟರ್‌ಗಳವರೆಗೆ ವಾರಂಟಿಯನ್ನು ನೀಡುತ್ತದೆ.

ವಿಶೇಷ ವಿಸ್ತೃತ ವಾರಂಟಿ ಕಾರ್ಯಕ್ರಮಗಳನ್ನು ಪರಿಚಯಿಸಿ ಮಾತನಾಡಿದ ಹೋಂಡಾ ಮೋಟಾರ್‌ ಸೈಕಲ… ಮತ್ತು ಸ್ಕೂಟರ್‌ ಇಂಡಿಯಾದ ಮಾರಾಟ ಮತ್ತು ಮಾರ್ಕೆಟಿಂಗ್‌ ವಿಬಾಗದ ನಿರ್ದೇಶಕ ಯೋಗೇಶ್‌ ಮಾಥುರ್‌, ಎಚ್‌ಎಂಎಸ್‌ಐನಲ್ಲಿ ಸಿಬಿ350 ಮೋಟಾರ್‌ ಸೈಕಲ್‌ಗ‌ಳು 1,00,000 ಗ್ರಾಹಕರ ಮೈಲಿಗಲ್ಲನ್ನು ಆಚರಿಸುತ್ತಿದೆ. ಗ್ರಾಹಕರು ಹತ್ತಿರದ ಅಧಿಕೃತ ಹೋಂಡಾ ಮಳಿಗೆಗಳಲ್ಲಿ ಈ ಸೇವೆಯನ್ನು ಪಡೆಯಬಹುದು ಎಂದವರು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next