ಭಾರತೀನಗರ: ಜಲ ಜೀವನ್ ಮಿಷನ್’ ಯೋಜನೆಯನ್ನು 690 ಕೋಟಿ ರೂ.ಗಳಲ್ಲಿ ಕೇವಲ ಮೂರು ತಾಲೂಕುಗಳಿಗೆ ನೀಡಿದ್ದು, ಇದನ್ನು ಇಡೀ ಜಿಲ್ಲೆಗೆ ವಿಸ್ತರಿಸುವ ಮೂಲಕ ಶಿವಮೊಗ್ಗ ಜಿಲ್ಲೆಯ ಮೇಲಿನ ಪ್ರೀತಿ ಜನ್ಮ ಕೊಟ್ಟ ಮಂಡ್ಯ ಜಿಲ್ಲೆ ತಾಯಿಯ ಬಗ್ಗೆಯೂ ಇಡಬೇಕೆಂದು ಶಾಸಕ ಡಿ.ಸಿ.ತಮ್ಮಣ್ಣ ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ ಅವರಿಗೆ ಪತ್ರ ಬರೆಯುವ ಮೂಲಕ ಮನವಿ ಮಾಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿಯವರು 2019-2020ನೇ ಸಾಲಿನ ಆಯವ್ಯಯದಲ್ಲಿ ರಾಜ್ಯದ ಎಲ್ಲ ಜನವಸತಿಗಳಿಗೆ ಶುದ್ಧ ಕುಡಿಯುವ ನೀರನ್ನು ನದಿ ಮೂಲಗಳಿಂದ ಒದಗಿಸುವ ಕಾರ್ಯಕ್ರಮಕ್ಕೆ 53,000 ಕೋಟಿ ರೂ. ಘೋಷಿಸಿದ್ದರು ಎಂದು ತಿಳಿಸಿದ್ದಾರೆ.
ಮೈಸೂರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವೃತ್ತದವರು ಆರು ಯೋಜನೆಗಳ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗಿ, ಆರು ಯೋಜನೆಗಳಲ್ಲಿ ಕೆ.ಆರ್.ಪೇಟೆ, ಪಾಂಡವಪುರ, ನಾಗಮಂಗಲತಾಲೂಕುಗಳ ನೀರು ಸರಬರಾಜು ಯೋಜನೆಯನ್ನು 700 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಹಾಗೂ ಮಂಡ್ಯ, ಶ್ರೀರಂಗಪಟ್ಟಣ, ಮದ್ದೂರು ಮತ್ತು ಮಳವಳ್ಳಿ ನಾಲ್ಕು ತಾಲೂಕುಗಳ ನೀರು ಸರಬರಾಜು ಯೋಜನೆಯನ್ನು 800 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಯೋಜನೆ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಎಂದಿದ್ದಾರೆ.
ಕಳೆದ ಮೇ26ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಅಂದಾಜು ವೆಚ್ಚ 6,768.85 ಕೋಟಿರೂ. ವೆಚ್ಚದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನೀರು ಸರಬರಾಜುಯೋಜನೆಗೆಅನುಮೋದನೆ ನೀಡಿರುತ್ತೀರಿ.
ಮಂಜೂರಾಗಿರುವ ಯೋಜನೆಗಳಲ್ಲಿ ವಿಜಯಪುರ ಒಂದನೇ ಹಂತದ 1,431.8 ಕೋಟಿ ರೂ. ಜೊತೆಗೆ ಎರಡನೇ ಹಂತದ ಯೋಜನೆಯಡಿಯಲ್ಲಿ 954.51 ಕೋಟಿ ರೂ. ವೆಚ್ಚದ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಇದರ ಜೊತೆಗೆ ಅನುಮೋದನೆಯಾಗಿದ್ದ 4,000 ಕೋಟಿ ರೂ. ಯೋಜನೆಯಲ್ಲಿ ಮಂಡ್ಯ ಜಿಲ್ಲೆಯ ನಾಲ್ಕು ತಾಲೂಕುಗಳಿಗೆ 800 ಕೋಟಿ ರೂ.ಗಳ ಯೋಜನೆಯನ್ನು ಕೈಬಿಟ್ಟಿದ್ದೀರಿ ಮತ್ತು ಪೂರ್ಣವಾಗಿ ಕೋಲಾರ ಜಿಲ್ಲೆಯ ಯೋಜನೆಗಳನ್ನು ಪರಿಗಣಿಸಿಯೇ ಇಲ್ಲ. ಇದಕ್ಕೆ ಕಾರಣವೇನು ತಿಳಿದು ಬಂದಿಲ್ಲ ಎಂದಿದ್ದಾರೆ.