Advertisement

ಲೆಹೆಂಗದಲ್ಲಿ ವಿದೇಶಕ್ಕೆ ಮಾದಕ ವಸ್ತುಗಳ ರಫ್ತು

09:58 AM Oct 24, 2021 | Dinesh M |

ಬೆಂಗಳೂರು: ಲೆಹೆಂಗದಲ್ಲಿ ಮಾದಕ ವಸ್ತು ಗಳನ್ನು ಇಟ್ಟು ಕೊರಿಯರ್‌ ಮೂಲದ ಆಸ್ಟ್ರೇಲಿಯಾಗೆ ಸಾಗಾಟ ಮಾಡುತ್ತಿದ್ದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಬೆಂಗಳೂರು ಮತ್ತು ಚೆನ್ನೈನ ಮಾದಕ ವಸ್ತು ನಿಯಂತ್ರಣ ಘಟಕ(ಎನ್‌ಸಿಬಿ) ಅಧಿಕಾರಿಗಳು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

Advertisement

ದೇವನಹಳ್ಳಿ ಟೋಲ್‌ ಬಳಿ ಆಂಧ್ರಪ್ರದೇಶ ನೋಂದಣಿ ಸಂಖ್ಯೆಯ ಶಿಫ್ಟ್‌ ಕಾರಿನಲ್ಲಿ ಲೆಹೆಂಗದಲ್ಲಿ ಮಾದಕ ವಸ್ತು ಸಾಗಣೆ ಮಾಡುತ್ತಿರುವುದನ್ನು ಪತ್ತೆಹಚ್ಚಿದ ಬೆಂಗಳೂರು ವಲಯದ ಎನ್‌ಸಿಬಿ ಅಧಿಕಾರಿಗಳು, ಆಂಧ್ರಪ್ರದೇಶದ ವಿಶಾಖಪಟ್ಟಣಂ, ಬಿಹಾರ ಮತ್ತು ಹೈದರಾಬಾದ್‌ ಮೂಲದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಅವರಿಂದ 10 ಗ್ರಾಂ ಎಂಡಿಎಂಎ ಮಾತ್ರೆಗಳನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ:- ಕ್ರೀಡಾ-ಸಾಂಸ್ಕೃತಿಕ ಸಂಕೀರ್ಣಕ್ಕೆ ಯೋಜನೆ

ಆರೋಪಿಗಳು ಬೆಂಗಳೂರಿನಿಂದ ಹೈದರಾ ಬಾದ್‌ಗೆ ಕಾರಿನಲ್ಲಿ ಮಾದಕ ವಸ್ತು ಎಂಡಿಎಂಎಯನ್ನು ಇಟ್ಟುಕೊಂಡು ಹೋಗುತ್ತಿ ದ್ದರು. ಈ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣ ಸಂಬಂಧ ವಿಶಾಖಪಟ್ಟಣ ಮೂಲದ ಡ್ರಗ್ಸ್‌ ಪೆಡ್ಲರ್‌ ಮನೆ ಶೋಧ ನಡೆಸಿದಾಗ ಗಾಂಜಾ ಪತ್ತೆಯಾಗಿದೆ.

ಈತ ಬೆಂಗಳೂರು ಮೂಲದ ವ್ಯಕ್ತಿಯಿಂದ ಗಾಂಜಾ ಹಾಗೂ ಇತರೆ ಮಾದಕ ವಸ್ತುಗಳನ್ನು ಖರೀದಿಸಿ ಹೈದರಾಬಾದ್‌ನ ಪಬ್‌ ಹಾಗೂ ಪಾರ್ಟಿಗಳಲ್ಲಿ ಮಾರಾಟ ಮಾಡುತ್ತಿದ್ದ ಎಂದು ಎನ್‌ಸಿಬಿ ತಿಳಿಸಿದೆ. ಮತ್ತೂಂದು ಪ್ರಕರಣದಲ್ಲಿ ಮಹಿ ಳೆಯರ ಲೆಹಂಗಾದ ಫಾಲ್ಸ್‌ಲೈನ್‌ ಭಾಗದಲ್ಲಿ ಮಾದಕ ವಸ್ತು ಇಟ್ಟಿ ಸ್ಟಿಚ್‌ ಮಾಡಿ ನಕಲಿ ವಿಳಾಸ, ದಾಖಲಾತಿ ಹಾಕಿ ಹೈದರಾಬಾದ್‌ ನಿಂದ ಆಸ್ಟ್ರೇಲಿಯಾಕ್ಕೆ ಕೋರಿಯರ್‌ ಮೂಲಕ ಕಳುಹಿಸಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಅವರಿಂದ 3 ಕೆ.ಜಿ ಸಿಡೊμಡ್ರೆ„ನ್‌ ಡ್ರಗ್ಸ್‌ ಜಪ್ತಿ ಮಾಡಲಾಗಿದೆ ಎಂದು ಮಾದಕ ವಸ್ತು ನಿಯಂತ್ರಣ ದಳ ಬೆಂಗಳೂರು ವಲಯದ ಅಧಿಕಾರಿ ಅಮಿತ್‌ ಗಹವಾಟೆ ತಿಳಿಸಿದ್ದಾರೆ.­­

Advertisement
Advertisement

Udayavani is now on Telegram. Click here to join our channel and stay updated with the latest news.

Next