Advertisement

ಹೇಮಂತ್‌ ಕೊಲೆ ಪ್ರಕರಣಕ್ಕೆ ಸ್ಫೋಟಕ ತಿರುವು: ಅಧಿಪತ್ಯ ಸಾಧಿಸಲು ನಡೆಯಿತೇ ಹತ್ಯೆ?

10:17 AM Jul 24, 2022 | Team Udayavani |

ಬೆಂಗಳೂರು: ಇತ್ತೀಚೆಗೆ ಹುಟ್ಟಹಬ್ಬದ ದಿನವೇ ಕೆಂಗೇರಿ ಕೊನಸಂದ್ರ ಕರೆ ಸಮೀಪ ಬರ್ಬರವಾಗಿ ಹತ್ಯೆಗೀಡಾದ ಎಚ್‌.ಗೊಲ್ಲಹಳ್ಳಿ ನಿವಾಸಿ ಹೇಮಂತ್‌ನ ಕೊಲೆ ಪ್ರಕರಣ ಹೊಸ ತಿರುವು ಸಿಕ್ಕಿದ್ದು, ರೌಡಿಶೀಟರ್‌ ಕುಳ್ಳ ರಿಜ್ವಾನ್‌ನ ಸಹಚರರೇ ಹತ್ಯೆಗೈದಿದ್ದಾರೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

Advertisement

ಕೆಂಪೇಗೌಡ ಪೊಲೀಸರ ವಿಶೇಷ ಕಾರ್ಯಾಚರಣೆಯಲ್ಲಿ ಬಂಧನಕ್ಕೀಡಾದ ರಿಜ್ವಾನ್‌ನ ಮೊಬೈಲ್‌ ಪರಿಶೀಲಿಸಿದಾಗ ಈ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಅಲ್ಲದೆ, ಈತನ ಸಹಚರರು “ತಮ್ಮ ಬಾಸ್‌ ಯಾರೆಂದು ಗೊತ್ತಿಲ್ಲ’ ಎಂದು ಹೇಳಿದಕ್ಕೆ ಹೇಮಂತ್‌ನನ್ನು ಕೊಲೆಗೈದಿದ್ದಾರೆ ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ.

ಜು. 16ರಂದು ಜನ್ಮದಿನ ಆಚರಿಸಿಕೊಳ್ಳುವುದಕ್ಕಾಗಿ ಮೂವರು ಸ್ನೇಹಿತರ ಜತೆ ಹೇಮಂತ್‌, ಕೆಂಗೇರಿಯ ನೈಸ್‌ ರಸ್ತೆ ಬಳಿಯ ಕೋನಸಂದ್ರದ ಅಂಡರ್‌ ಪಾಸ್‌ ಬಳಿ ಹೋಗಿದ್ದ. ಅದೇ ವೇಳೆ ಕುಳ್ಳ ರಿಜ್ವಾನ್‌ ಸಹಚರರು ಕೂಗಳತೆ ದೂರದಲ್ಲಿ ಪಾರ್ಟಿ ಮಾಡುತ್ತಿದ್ದರು. ಇತ್ತ ಹೇಮಂತ್‌ ಹಾಗೂ ಸ್ನೇಹಿತರು ಮದ್ಯದ ಅಮಲಿನಲ್ಲಿ ರೌಡಿಯಿಸಂ ಬಗ್ಗೆ ಮಾತುಕತೆ ಆರಂಭಿಸಿದ್ದಾರೆ. ರಿಜ್ವಾನ್‌ ಸಹಚರರು, “ನಮ್ಮ ಬಾಸ್‌ ಕುಳ್ಳ ರಿಜ್ವಾನ್‌ ಗೊತ್ತಿಲ್ವಾ’ ಎಂದಿದ್ದಾರೆ ಗೊತ್ತಿಲ್ಲ ಎಂದಾಗ ಕಿಪಿತರಾಗಿ ಮಾರಕಾಸ್ತ್ರದಿಂದ ಕೊಲೆಗೈದು ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದರು.

ಇದನ್ನೂ ಓದಿ: ಕ್ರಿಕೆಟ್ ಆಡುವಾಗ ಕುಸಿದು ಬಿದ್ದು ಖ್ಯಾತ ಕಿರುತೆರೆ ನಟ ದೀಪೇಶ್ ಭಾನ್ ನಿಧನ

ವಿಚಾರಣೆಯಲ್ಲಿ ಕೃತ್ಯ ಬೆಳಕಿಗೆ

Advertisement

ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹೇಮಂತ್‌ನ ಮುಖ ಮತ್ತು ಹೊಟ್ಟೆ ಇರಿಯುವ ದೃಶ್ಯಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಕುಳ್ಳ ರಿಜ್ವಾನ್‌ಗೆ ಕಳುಹಿಸಿ, ಗೆಲುವಿನ ಚಿಹ್ನೆ ಹಾಕಿದ್ದಾರೆ. ವಿಚಾರಣೆ ವೇಳೆ ರಿಜ್ವಾನ್‌ ಮೊಬೈಲ್‌ನಲ್ಲಿ ಹೇಮಂತ್‌ ಕೊಲೆ ವಿಡಿಯೋ ಸಿಕ್ಕಿತ್ತು. ಮತ್ತೊಂದೆಡೆ ಸೈಕಲ್‌ ರವಿ, ಆತನ ಸಹಚರ ಬೇಕರಿ ರಘು ಕೊಲೆಗೈದು ದಕ್ಷಿಣ ಭಾಗದಲ್ಲಿ ತಾನೂ ಅಧಿಪತ್ಯ ಸಾಧಿಸಲು ರಿಜ್ವಾನ್‌ ಸಿದ್ಧತೆ ನಡೆಸುತ್ತಿದ್ದ ತನಿಖೆಯಲ್ಲಿ ಗೊತ್ತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next