Advertisement

ಸ್ಫೋಟ ನಿರೋಧಕ ಗೋ ಗ್ಯಾಸ್‌ ಸಿಲಿಂಡರ್‌

01:24 PM Dec 27, 2017 | Team Udayavani |

ಬೆಂಗಳೂರು: ಸಿಲಿಂಡರ್‌ ಸ್ಫೋಟವನ್ನು ತಪ್ಪಿಸುವ ನಿಟ್ಟಿನಲ್ಲಿ ಇದೀಗ ಕಾನ್ಫಿಡೆನ್ಸ್‌ ಗ್ರೂಪ್‌ ಉನ್ನತ ಶ್ರೇಣಿಯ ಗೋ ಗ್ಯಾಸ್‌ ಸಿಲಿಂಡರ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನ್ಫಿಡೆನ್ಸ್‌ ಗ್ರೂಪ್‌ನ ಕಾರ್ಯ ನಿರ್ವಹಣಾಧಿಕಾರಿ ಶಂಕರ್‌ ನಾಯರ್‌, ಸಿಲಿಂಡರ್‌ ಸ್ಫೋಟದ ಅಪಾಯವನ್ನು ಅರಿತು ಸಂಸ್ಥೆ ಗೋ ಗ್ಯಾಸ್‌ ಸಿಲಿಂಡರ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.

Advertisement

ಅತ್ಯಂತ ಹಗುರವಾಗಿರುವ ಈ ಸಿಲಿಂಡರ್‌ಗಳನ್ನು ಗೃಹಣಿಯರು ಯಾವುದೇ ಅಪಾಯವಿಲ್ಲದೆ ಬಳಕೆ ಮಾಡಬಹುದಾಗಿದೆ ಎಂದರು. ಇವು ಸಿಲಿಂಡರ್‌ಗಳು ಸಿಡಿಯುವುದರಿಂದ ರಕ್ಷಣೆ ಹೊಂದಿವೆ. ಈ ಹಿನ್ನೆಲೆಯಲ್ಲಿ ಜೀವಹಾನಿ ಸಂಭವಿಸುವುದಿಲ್ಲ.

ಸುರಕ್ಷತೆಯ ದೃಷ್ಟಿಯಿಂದಲೂ ಬಳಕೆಗೆ ಯೋಗ್ಯವಾಗಿದೆ. 2,5 ಮತ್ತು 10 ಕೆಜಿಗಳಲ್ಲಿ ಸಿಲಿಂಡರ್‌ ದೊರೆಯಲಿವೆ. ದೇಶದಲ್ಲಿ 70 ಕೋಟಿ ಜನರು ಎಲ್‌ಪಿಜಿ ಸಿಲಿಂಡರ್‌ಗಳನ್ನು ಬಳಸುತ್ತಿದ್ದಾರೆ. ಈ ಎಲ್ಲಾ ಜನರು ಮುಂದಿನ ದಿನಗಳಲ್ಲಿ ಗೋ ಗ್ಯಾಸ್‌ ಸಿಲಿಂಡರ್‌ಗಳನ್ನು ಬಳಸುತ್ತಾರೆ ಎಂಬ ನಿರೀಕ್ಷೆ ಇದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next