ಹೊಸದಿಲ್ಲಿ: ಮಹಾರಾಷ್ಟ್ರದ ಪುಣೆಯಲ್ಲಿ, ತಮಿಳುನಾಡಿನ ವೆಲ್ಲೂರಿನಲ್ಲಿ ಇತ್ತೀಚೆಗೆ ಎರಡು ವಿದ್ಯುತ್ ಚಾಲಿತ ಸ್ಕೂಟರ್‌ಗಳಿಗೆ ಬೆಂಕಿ ಹತ್ತಿಕೊಂಡಿತ್ತು.
ಈ ಪ್ರಕರಣಗಳಿಗೆ ಕಾರಣವೇನೆಂದು ತನಿಖೆ ಮಾಡಲು ಕೇಂದ್ರ ಸರಕಾರ ತಜ್ಞರ ಸಮಿತಿ ಯೊಂದನ್ನು ನೇಮಕ ಮಾಡಿದೆ ಎನ್ನಲಾಗಿದೆ.
ಕಳೆದ ವಾರ ಓಲಾ ಎಸ್1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್‌ಗೆ ಪುಣೆಯಲ್ಲಿ ಬೆಂಕಿ ಹತ್ತಿಕೊಂಡಿತ್ತು. ಆದರೆ ಪ್ರಾಣಹಾನಿಯಾಗಿರಲಿಲ್ಲ. ಇದಾದ ಅನಂತರ ವೆಲ್ಲೂರಿನಲ್ಲಿ ಒಕಿನಾವ ಕಂಪೆನಿಯ ಸ್ಕೂಟರ್‌ಗೂ ತನ್ನಿಂತಾನೇ ಬೆಂಕಿ ಹತ್ತಿಕೊಂಡಿತ್ತು.
ಅದರಿಂದ ತಂದೆ-ಮಗಳು ತೀರಿಕೊಂಡಿದ್ದರು. ಈ ಘಟನೆಗೆ ಕಾರಣ ವೇನೆಂದು ಓಲಾ ಇನ್ನೂ ತನಿಖೆ ನಡೆಸುತ್ತಿದೆ. ಒಕಿನಾವ ಮಾತ್ರ ಬ್ಯಾಟರಿ ಚಾರ್ಜ್ ಮಾಡುವಾಗ ಮಾಡಿದ ನಿರ್ಲಕ್ಷ್ಯವೇ ಸ್ಫೋಟಕ್ಕೆ ಕಾರಣವೆಂದು ಹೇಳಿಕೊಂಡಿದೆ. ಆದರೂ ಸಂಪೂರ್ಣವಾಗಿ ತನಿಖೆ ಮುಗಿದ ಮೇಲೆಯೇ ಮಾತಾಡುತ್ತೇವೆಂದು ಹೇಳಿಕೊಂಡಿದೆ.