ಪಟ್ನಾ : ಬಿಹಾರದ ಲಾಖೀಸರಾಯ್ – ಮೌರ್ಯ ಎಕ್ಸ್ ಪ್ರಸ್ ರೈಲು ಕಿಯೂಲ್ ರೈಲು ನಿಲಾ¡ದಲ್ಲಿದ್ದಾಗ ರೈಲೊಳಗೆ ಭಾರೀ ಸ್ಫೋಟ ಉಂಟಾಗಿ ಸಂಭವಿಸಿದ ಅವಘಡದಲ್ಲಿ ಓರ್ವ ವ್ಯಕ್ತಿ ಮೃತಪಟ್ಟು ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಗಾಯಾಳುಗಳನ್ನು ರೈಲ್ವೇ ಆಸ್ಪತ್ರೆಗೆ ಸೇರಿಸಲಾಗಿದೆ. ಸ್ಫೋಟ ಸಂಭವಿಸಿದೊಡನೆಯೇ ರೈಲಿನಲ್ಲಿದ್ದ ಪ್ರಯಾಣಿಕರು ಭಯ ಭೀತರಾಗಿ ಕ್ಷೋಭೆಗೆ ಕಾರಣವಾಯಿತು. ರೈಲ್ವೆ ಪೊಲೀಸರು ವಿಶೇಷ ಕಾರ್ಯಪಡೆ ತಂಡದೊಂದಿಗೆ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡರು.
ನಿನ್ನೆ ಶುಕ್ರವಾರ ಸಂಭವಿಸಿರುವ ಈ ಸ್ಫೋಟದ ಪರಿಣಾಮವಾಗಿ ರೈಲು ಹಳಿ ಒಡೆದು ಹೋಗಿದ್ದು ಸುಮಾರು 10 ಅಡಿ ಉದ್ದದ ರೈಲು ಹಳಿ ರೈಲಿನ ಜನರಲ್ ಬೋಗಿಯೊಳಗೆ ನೂರಿಕೊಂಡು ಬಂದಿರುವುದಾಗಿ ವರದಿಯಾಗಿದೆ.
ಹಾನಿಗೀಡಾದ ಬೋಗಿಯನ್ನು ಬದಲಾಯಿಸಲಾಗಿದ್ದು ಅನಂತರದಲ್ಲಿ ರೈಲು ಸೇವೆಯನ್ನು ಪುನಃ ಚಾಲನೆಗೊಳಿಸಲಾಗಿದೆ. ಕಿಯೂಲ್ ರೈಲು ನಿಲ್ದಾಣದಿಂದ ಕೇವಲ ಒಂದು ಕಿಮೀ. ದೂರದ ಮಹೇಶ್ ಲೇತಾ ಹಾಲ್ಟ್ನಲ್ಲಿ ಈ ಆವಘಡ ಸಂಭವಿಸಿದೆ.
ನಕ್ಸಲರು ಈ ಅವಘಡಕ್ಕೆ ಕಾರಣರೆಂದು ಶಂಕಿಸಲಾಗಿದೆ. ಸ್ಫೋಟ ಸಂಭವಿಸಿದ ಪ್ರದೇಶದಲ್ಲಿ ನಿನ್ನೆ ನಕ್ಸಲರು ಬಂದ್ ಕರೆ ನೀಡಿದ್ದರು ಎನ್ನಲಾಗಿದೆ.