Advertisement
ಪಟ್ಟಣದ ಸಾಯಿ ಸಮುದಾಯ ಭವನದಲ್ಲಿ ತಾಲೂಕು ಎನ್‌ಪಿಎಸ್ ನೌಕರರ ಸಂಘದ ವತಿಯಿಂದ ನಡೆದ ಎನ್‌ಪಿಎಸ್ ವಿಚಾರ ಸಂಕೀರ್ಣ ಮತ್ತು ಜಾಗೃತಿ ಸಮಾವೇಶದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು, ನೂತನ ಪಿಂಚಣಿ ಯೋಜನೆ ಒಂದು ಅವೈಜಾnನಿಕ ಯೋಜನೆಯಾಗಿದ್ದು, ಯಾವುದೇ ಚರ್ಚೆಗೆ ಅವಕಾಶ ನೀಡದೆ ಇದನ್ನು ಜಾರಿಗೆ ತರಲಾಗಿದೆ. ಇದುವರೆಗೂ 1.75 ಲಕ್ಷ ಕೋಟಿ ರೂ.ಗಳ ಸರ್ಕಾರಿ ನೌಕರರ ಹಣ ಕಡಿತಗೊಳಿಸಿದೆ.
Related Articles
Advertisement
ಅಧಿಕಾರಿಗಳ ಮೋಸ: ಎನ್‌ಪಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಎಚ್.ಆರ್.ರೂಪ ಮಾತನಾಡಿ, ಎನ್‌ಪಿಎಸ್ ಜಾರಿಯಾದ ಸಂದರ್ಭದಲ್ಲಿ ನಿವೃತ್ತಿಯ ವೇಳೆಗೆ ಕೋಟ್ಯಾದಿಪತಿಗಳಾಗುತ್ತೀರಾ ಎಂಬ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ ಅಧಿಕಾರಿಗಳು ಮೋಸ ಮಾಡಿದ್ದಾರೆ. ಅಲ್ಲದೆ 11 ವರ್ಷಗಳ ನಂತರ ಎನ್‌ಪಿಎಸ್‌ನ ಕರಾಳ ಮುಖದ ದರ್ಶನವಾಗುತ್ತಿದೆ. ಸರಕಾರಿ ನೌಕರಿ ಪಡೆದ ತಮ್ಮ ಮಕ್ಕಳು ತಮ್ಮನ್ನು ಇಳಿವಯಸ್ಸಿನಲ್ಲಿ ಸಾಕುತ್ತಾರೆಂಬ ತಂದೆತಾಯಿಯವರ ಭರವಸೆಗೆ ತಣ್ಣೀರೆರಚಿದಂತಾಗಿದೆ.
ಸರ್ಕಾರದ ನಿರ್ಧಾರ ಖಂಡನೀಯ: ಪುರಸಭೆ ಅಧ್ಯಕ್ಷ ವೇಣುಗೋಪಾಲ್ ಮಾತನಾಡಿ, ಸರ್ಕಾರಿ ನೌಕರರ ಹಣವನ್ನು ಖಾಸಗಿ ಕಂಪನಿಗಳ ಶೇರು ಮಾರುಕಟ್ಟೆಯಲ್ಲಿ ವಿನಿಯೋಗಿಸುವ ಸರ್ಕಾರದ ನಿರ್ಧಾರ ಖಂಡನೀಯ, ಹಳೆಯ ಪಿಂಚಿಣಿ ಪದ್ಧತಿಯೇ ಜಾರಿಯಾಗಬೇಕು.
ಅನ್ಯಾಯದ ವಿರುದ್ಧ ಒಗ್ಗಟಿನಿಂದ ಹೋರಾಟ ನಡೆಸಿದರೆ ಉತ್ತಮ ಫಲದೊರಕಲಿದೆ ಎಂದು ತಿಳಿಸಿದರು. ಪಟ್ಟಣದ ಅಗ್ನಿಶಾಮಕ ದಳದ ಎದುರಿಂದ ಸಾಯಿ ಸಮುದಾಯಭವನದ ವರೆಗೆ ಎನ್‌ಪಿಎಸ್ ನೌಕರರು ಮೆರವಣಿಗೆ ಮಾಡಿ ಜಾಗೃತಿ ಜಾಥಾ ನಡೆಸಿದರು.
ಸರಕಾರಿ ನೌಕರರ ಸಂಘದ ತಾ.ಅಧ್ಯಕ್ಷ ಎಂ.ಕೆ.ಪ್ರಕಾಶ್, ಎನ್‌ಪಿಎಸ್ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಚಿಕ್ಕಮಾದಪ್ಪ ಮಾತನಾಡಿದರು. ಸಮಾರಂಭದಲ್ಲಿ ಎನ್‌ಪಿಎಸ್ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ನಿರೂಪ ರಾಜೇಶ್, ಸರಕಾರಿ ನೌಕರರ ಸಹಕಾರ ಸಂಘದ ಅಧ್ಯಕ್ಷ ಬಿ.ವಿ.ಕಿರಣ್, ಎನ್‌ಪಿಎಸ್ ತಾ.ಸಂಘದ ಗೌರವಾಧ್ಯಕ್ಷ ಆರ್.ಟಿ.ಚಂದ್ರು, ಉಪಾಧ್ಯಕ್ಷರಾದ ಡಾ.ಆರ್.ಬಿ.ಶೋಭ, ಎಚ್.ಕೆ.ವಿಜಯ್, ಕಿರಣ್, ಗಾಯಿತ್ರಿ, ಸುರೇಂದ್ರ, ಸೇರಿದಂತೆ ಮತ್ತಿತರರು ಹಾಜರಿದ್ದರು.