Advertisement

ಸಾಮಾಜಿಕ ಜಾಗೃತಿಯಿಂದ ಶೋಷಣೆ ಅಸಮಾನತೆ ನಿವಾರಣೆ: ಪುರಂದರ ಹೆಗ್ಡೆ

02:56 PM Apr 10, 2017 | Team Udayavani |

ಬಂಟ್ವಾಳ: ಜನರಲ್ಲಿ ಸಾಮಾಜಿಕ ಜಾಗೃತಿ ಆದಾಗ ಶೋಷಣೆ,  ಅಸಮಾನತೆ , ಅಸ್ಪ್ರಶ್ಯತೆ ನಿವಾರಣೆ ಆಗುತ್ತದೆ.  ಇದು  ಮಹಾವೀರ ಜಯಂತಿ ಆಚರಣೆಯ ಉದ್ದೇಶ. ಈ  ಮೂಲಕ ಅಂತಹ ಪುನರುಜ್ಜೀವನದ ಕೆಲಸಗಳು ನಡೆದು  ಶಾಂತಿ, ಸಹಬಾಳ್ವೆ  ನೆಲೆಸಲಿ  ಎಂದು ಬಂಟ್ವಾಳ ತಹಶೀಲ್ದಾರ್‌ ಪುರಂದರ ಹೆಗ್ಡೆ ಹೇಳಿದರು.

Advertisement

ಅವರು ಎ. 9ರಂದು ಬಂಟ್ವಾಳ ತಾ|  ಕಚೇರಿಯಲ್ಲಿ ನಡೆದ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ  ಮಾತನಾಡಿದರು.ಮಹಾವೀರರು ತ್ಯಾಗದ ಸಂಕೇತ, ಸಮಷ್ಠಿಯ ಪ್ರತೀಕ, ನಿರ್ಲಿಪ್ತತೆಯ ಮೂರ್ತಿಯಾಗಿ ನಮಗೆ ಸಾಮಾಜಿಕ ಬದುಕಿನಲ್ಲಿ ಯಾವ ರೀತಿಯಲ್ಲಿ ಇರಬೇಕು ಎಂಬ ಮಾರ್ಗದರ್ಶನ ನೀಡಿದವರು ಎಂದರು.

ಭೂ ಬ್ಯಾಂಕ್‌ ಅಧ್ಯಕ್ಷ ಸುದರ್ಶನ ಜೈನ್‌, ವಿಷಯ ನಿರೂಪಕ ವಿಷು ಕುಮಾರ್‌, ಭರತ್‌ರಾಜ್‌ ಜೈನ್‌, ಜಯಕೀರ್ತಿ ಇಂದ್ರ, ವಿಜಯ ಕುಮಾರಿ ಇಂದ್ರ, ತಾಲೂಕು ಕಚೇರಿಯ ಮಹೇಂದ್ರ,  ಗ್ರಾಮ ಕರಣಿಕರಾದ  ಪ್ರವೀಣ್‌, ಅಶ್ವಿ‌ನಿ, ಸ್ವಾತಿ, ಸಿಬಂದಿಗಳಾದ ಸದಾಶಿವ ಕೈಕಂಬ, ಶೀತಲ್‌, ಮಾಧವ, ಗಿಲ್ಬರ್ಟ್‌ ಪಿಂಟೊ  ಮತ್ತಿತರರು ಉಪಸ್ಥಿತರಿದ್ದರು.ಕಂದಾಯ ನಿರೀಕ್ಷಕ ನವೀನ್‌ ಸ್ವಾಗತಿಸಿ, ಉಪತಹಶೀಲ್ದಾರ್‌  ಪರಮೇಶ್ವರ ನಾಯಕ್‌  ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next