Advertisement

Explained: ಕೇಂದ್ರದ ಭದ್ರತೆ ಯಾರಿಗೆ ಲಭ್ಯ; ಯಾವ ಮಾನದಂಡದ ಮೇಲೆ ಭದ್ರತೆ ನೀಡುತ್ತೆ?

06:46 PM Sep 09, 2020 | Nagendra Trasi |

ನವದೆಹಲಿ:ಮಹಾರಾಷ್ಟ್ರದ ಶಿವಸೇನಾ ಸಂಸದ ಸಂಜಯ್ ರಾವತ್ ಜತೆಗಿನ ವಾಗ್ವಾದ, ವಾಕ್ಸಮರದ ನಂತರ ಬಾಲಿವುಡ್ ನಟಿ ಕಂಗನಾ ರನೌತ್ ಗೆ ಕೇಂದ್ರ ಗೃಹ ಸಚಿವಾಲಯ “ವೈ ಪ್ಲಸ್” ಸಿಆರ್ ಪಿಎಫ್ ಭದ್ರತೆಯನ್ನು ಒದಗಿಸಿತ್ತು. ಇದೀಗ ಮುಂಬೈ ವಿಮಾನ ನಿಲ್ದಾಣಕ್ಕೆ ಕಂಗನಾ ಆಗಮಿಸಿದ್ದ ವೇಳೆ ಶಿವಸೇನಾ ಬೆಂಬಲಿಗರು ಮತ್ತು ಕಂಗನಾ ಅಭಿಮಾನಿಗಳ ಕರಣಿ ಸೇನಾ ನಡುವೆ ಜಟಾಪಟಿ ನಡೆದಿರುವುದಾಗಿ ವರದಿ ತಿಳಿಸಿದೆ.

Advertisement

ಕಂಗನಾಗೆ ಬೆದರಿಕೆ ಹಿನ್ನೆಲೆಯಲ್ಲಿ 11 ಮಂದಿ ಸಿಆರ್ ಪಿಎಫ್ ಕಮಾಂಡೋಗಳು ಭದ್ರತೆ ನೀಡಿದ್ದಾರೆ. ಒಬ್ಬರು ಅವರ ನಿವಾಸಕ್ಕೆ ನಿರಂತರವಾಗಿ ಭದ್ರತೆ ನೀಡಲಿದ್ದಾರೆ ಎಂದು ವರದಿ ತಿಳಿಸಿದೆ. ಕಂಗನಾಗೆ ವೈ ಪ್ಲಸ್ ಭದ್ರತೆಯನ್ನು ಒದಗಿಸಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ, ವಿರೋಧ ಚರ್ಚೆ ನಡೆಯತೊಡಗಿದೆ. ಈ ಹಿನ್ನೆಲೆಯಲ್ಲಿ ಯಾರ ಜೀವಕ್ಕೆ ಬೆದರಿಕೆ ಇದೆ ಎಂದು ಹೇಳಿಕೊಂಡರೆ ಕೇಂದ್ರ ಸರ್ಕಾರ ರಕ್ಷಣೆ ನೀಡುತ್ತದೆಯೇ ಎಂಬ ಕುರಿತ ವಿಶ್ಲೇಷಣೆ ಇಲ್ಲಿದೆ…

ಇಲ್ಲ…ಎಲ್ಲರಿಗೂ ಅಂತಹ ಭದ್ರತೆ ಸಿಗಲಾರದು.ಈ ರಕ್ಷಣೆಯನ್ನು “ವಿಐಪಿ ಭದ್ರತೆ” ಎಂದು ಕರೆಯುತ್ತಾರೆ. ಯಾರು ಸರ್ಕಾರ ಅಥವಾ ಸಮಾಜದಲ್ಲಿ ಪ್ರಭಾವಶಾಲಿ ಹುದ್ದೆಯನ್ನು ಹೊಂದಿರುತ್ತಾರೋ ಅಂತಹ ವ್ಯಕ್ತಿಗಳಿಗೆ ಸಾಮಾನ್ಯವಾಗಿ ಬೆದರಿಕೆ ಇದ್ದಲ್ಲಿ ಭದ್ರತೆ ನೀಡಲಾಗುತ್ತದೆ.

ಕೇಂದ್ರ ಸರ್ಕಾರ ಸಾಮಾನ್ಯವಾಗಿ ಮುಖ್ಯವಾದ ವ್ಯಕ್ತಿಗಳ ಜೀವಕ್ಕೆ ಬೆದರಿಕೆ ಇದೆ ಎಂದು ಕಂಡು ಬಂದಲ್ಲಿ ವೈಯಕ್ತಿಕ ನೆಲೆಯಲ್ಲಿ ಭದ್ರತೆ ನೀಡುತ್ತದೆ. ಅವರ ಜೀವಕ್ಕೆ ಇರುವ ಅಪಾಯದ ತೀವ್ರತೆಯ ಬಗ್ಗೆ ರಾಜ್ಯ ಸರ್ಕಾರ ನೀಡಿರುವ ಮಾಹಿತಿ ಆಧಾರದ ಮೇಲೆ ಭದ್ರತೆಯನ್ನು ಒದಗಿಸುತ್ತದೆ ಎಂದು ವರದಿ ವಿವರಿಸಿದೆ.

Advertisement

ಒಂದು ವೇಳೆ ವೈಯಕ್ತಿಕ ಭದ್ರತೆಯನ್ನು ಮುಂದುವರಿಸುವ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆಯೇ? ಅವರಿಗೆ ನೀಡಬೇಕಾದ ಭದ್ರತೆಯ ಶ್ರೇಣಿಯನ್ನು ಯಾರು ನಿರ್ಧರಿಸುತ್ತಾರೆ?

ಯಾವುದೇ ಒಬ್ಬ ವ್ಯಕ್ತಿಗೆ ವೈಯಕ್ತಿಕ ನೆಲೆಯಲ್ಲಿ ಭದ್ರತೆ ಅಗತ್ಯವಿದೆ ಎಂದಾದರೆ ಅದರ ಶ್ರೇಣಿಯನ್ನು ಎಂಎಚ್ ಎ(ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ) ನಿರ್ಧರಿಸುತ್ತದೆ. ಇಂಟೆಲಿಜೆನ್ಸ್ ಬ್ಯುರೋ (ಐಬಿ) ಮತ್ತು ರಿಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್ (ರಾ) ನೀಡುವ ಮಾಹಿತಿ ಆಧಾರದ ಮೇಲೆ ಭದ್ರತೆಯ ಕೆಟಗರಿ ನಿರ್ಧರಿಸಲಾಗುತ್ತದೆ ಎಂದು ವಿವರಿಸಿದೆ.

ವ್ಯಕ್ತಿಗೆ ಯಾವುದಾದರು ಭಯೋತ್ಪಾದಕ ಸಂಘಟನೆ ಅಥವಾ ಇನ್ನಾವುದೇ ಸಂಘಟನೆಗಳಿಂದ ಜೀವ ಬೆದರಿಕೆ ಇದೆಯೇ ಎಂಬ ಗುಪ್ತಚರ ಇಲಾಖೆಯ ಆಂತರಿಕ ಮಾಹಿತಿ ಮೇರೆಗೆ ಭದ್ರತೆ ನೀಡಲಾಗುತ್ತದೆ. ಈ ಮಾಹಿತಿಯಲ್ಲಿ ದೂರವಾಣಿ ಸಂಭಾಷಣೆ, ಗುಪ್ತಚರ ಮಾಹಿತಿ ಅಥವಾ ಬಹಿರಂಗ ಬೆದರಿಕೆ ಕೂಡಾ ಸೇರಿರುತ್ತದೆ ಎಂದು ವರದಿ ತಿಳಿಸಿದೆ.

ಸರ್ಕಾರದಲ್ಲಿ ಉನ್ನತ ಹುದ್ದೆ ಹೊಂದಿದ್ದರೆ ಸ್ವಯಂ ಆಗಿ ಭದ್ರತೆ ಲಭ್ಯವಾಗಲಿದೆ. ಪ್ರಧಾನಿ ಹಾಗೂ ನಿಕಟ ಕುಟುಂಬ ಸದಸ್ಯರಿಗೆ, ಗೃಹ ಸಚಿವರು ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರರು, ಅಧಿಕಾರಿಗಳಿಗೆ ಸಹಜವಾಗಿ ಭದ್ರತೆ ನೀಡಲಾಗಿರುತ್ತದೆ.

ಹಾಗಾದರೆ 2017ರಲ್ಲಿ ಕರಣಿ ಸೇನಾದಿಂದ ತಲೆ ತೆಗೆಯುತ್ತೇವೆ ಎಂಬ ಬೆದರಿಕೆಯನ್ನು ನಟಿ ದೀಪಿಕಾ ಪಡುಕೋಣೆ ಎದುರಿಸಿದ್ದಾಗ ಯಾಕೆ ರಕ್ಷಣೆ ಕೊಟ್ಟಿಲ್ಲ?

ಭಾರತೀಯ ಗುಪ್ತಚರ ಇಲಾಖೆಗಳು ಯಾವುದೇ ಶಾಸನಬದ್ಧ ಹೊಣೆಗಾರಿಕೆ ಹೊಂದಿಲ್ಲ. ಇದು ಕೇವಲ ಗೃಹ ಸಚಿವಾಲಯ ನೀಡುವ ಆಂತರಿಕ ಮಾಹಿತಿಯನ್ನಷ್ಟೇ ಆಧರಿಸಿ ರಕ್ಷಣೆ ನೀಡುತ್ತದೆ. ಗುಪ್ತಚರ ಇಲಾಖೆ ನೀಡುವ ಮಾಹಿತಿಯನ್ನು ಆಧರಿಸಿ ವಿಐಪಿಗಳಿಗೆ ಭದ್ರತೆ ಒದಗಿಸಲಾಗುತ್ತದೆ. ಇದು ಪಬ್ಲಿಕ್ ಡೊಮೈನ್ (ಸಾರ್ವಜನಿಕ) ಅಥವಾ ಬೇರೆ ಯಾವುದೇ ಏಜೆನ್ಸಿಯಿಂದಲೂ ಭದ್ರತೆಯನ್ನು ನೀಡುತ್ತದೆ ಎಂದು ವರದಿ ತಿಳಿಸಿದೆ.

ಬಹುತೇಕ ಭದ್ರತೆಗಳು ರಾಜಕೀಯ ಅಥವಾ ಪ್ರತಿಷ್ಠೆಯ ಸಂಕೇತವಾಗಿದೆ ಎಂಬ ಆರೋಪಗಳು ಹೆಚ್ಚಾಗಿ ಕೇಳಿಬರುತ್ತದೆ. ನಿಜಕ್ಕೂ ಸೂಕ್ತವಾದ ಬೆದರಿಕೆ ಇಲ್ಲದಿದ್ದರೂ ಕೂಡಾ ಬಿಗಿ ಭದ್ರತೆಯನ್ನು ಕೆಲವರು ಪಡೆದಿರುತ್ತಾರೆ ಎಂದು ವರದಿ ತಿಳಿಸಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರ ಯಾವ ರೀತಿಯ ಭದ್ರತೆಯನ್ನು ನೀಡುತ್ತದೆ…

ಒಟ್ಟು ಆರು ಶ್ರೇಣಿಯ ಭದ್ರತೆಗಳು ಇದೆ..ಅವುಗಳಲ್ಲಿ ಎಕ್ಸ್, ವೈ, ವೈ ಪ್ಲಸ್, ಝಡ್, ಝಡ್ ಪ್ಲಸ್ ಮತ್ತು ಎಸ್ ಪಿಜಿ (ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್)

ಎಸ್ ಪಿಜಿ ಕೇವಲ ಪ್ರಧಾನಿ ಹಾಗೂ ಕುಟುಂಬ ಸದಸ್ಯರಿಗೆ ಮಾತ್ರ ಸೀಮಿತವಾಗಿರುತ್ತದೆ. ಇನ್ನುಳಿದಂತೆ ವ್ಯಕ್ತಿಗಳಿಗೆ ಇರುವ ಬೆದರಿಕೆ ಆಧಾರದ ಮೇಲೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭದ್ರತೆಯನ್ನು ನೀಡುತ್ತದೆ. ಎಕ್ಸ್ ಕೆಟಗರಿ ತುಂಬಾ ಪ್ರಾಥಮಿಕ ಹಂತದ ರಕ್ಷಣೆಯನ್ನು ನೀಡುವುದಾಗಿದೆ.

*ಎಕ್ಸ್ ಕೆಟಗರಿಯಲ್ಲಿ ವ್ಯಕ್ತಿಯೊಬ್ಬರಿಗೆ ವೈಯಕ್ತಿಕವಾಗಿ ಒಬ್ಬ ಗನ್ ಮ್ಯಾನ್ ರಕ್ಷಣೆಯನ್ನು ನೀಡಲಾಗುತ್ತದೆ.

*ವೈ ಕೆಟಗರಿಯಲ್ಲಿ ಒಂದು ಗನ್ ಮ್ಯಾನ್ (ಮೊಬೈಲ್ ಸೆಕ್ಯುರಿಟಿ), ನಾಲ್ವರು ಪಾಳಿಯಲ್ಲಿ ಭದ್ರತೆ ನೀಡುತ್ತಾರೆ.

*ವೈ ಪ್ಲಸ್ ಭದ್ರತೆಯಲ್ಲಿ ಇಬ್ಬರು ಗನ್ ಮ್ಯಾನ್ (ನಾಲ್ವರು ಪಾಳಿ), ಒಬ್ಬರು ನಿವಾಸಕ್ಕೆ ಭದ್ರತೆ ಹಾಗೂ ಮತ್ತೆ ನಾಲ್ವರು ಪಾಳಿಯಲ್ಲಿ ಹೀಗೆ ಒಟ್ಟು ಹನ್ನೊಂದು ಮಂದಿ ಕಮಾಂಡೋಗಳಿರುತ್ತಾರೆ.

*ಝಡ್ ಭದ್ರತೆಯಲ್ಲಿ ಆರು ಮಂದಿ ಗನ್ ಮ್ಯಾನ್ ಗಳು, ಇಬ್ಬರು (ಪ್ಲಸ್ 8ಮಂದಿ) ಮನೆಗೆ ಭದ್ರತೆ

*ಝಡ್ ಪ್ಲಸ್ ಭದ್ರತೆಯಲ್ಲಿ ಹತ್ತು ಮಂದಿ ಗನ್ ಮ್ಯಾನ್ ಗಳು, ಇಬ್ಬರು ಮನೆಗೆ ಭದ್ರತೆ ನೀಡಲು ನಿಯೋಜಿಸಲಾಗಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next