Advertisement

64 ಜನಪ್ರತಿನಿಧಿಗಳ ಮೇಲೆ ಅಪಹರಣ ಕೇಸ್‌

06:00 AM Jul 31, 2018 | |

ಹೊಸದಿಲ್ಲಿ: ಮಕ್ಕಳ ಕಳ್ಳರು ಮತ್ತು ಮಾನವ ಕಳ್ಳ ಸಾಗಾಣಿಕೆ ಕುರಿತಂತೆ ಇಡೀ ದೇಶ ಭಾರೀ ಸುದ್ದಿಯಲ್ಲಿರುವಾಗಲೇ, ಜನರನ್ನಾಳುವ ಜನಪ್ರತಿನಿಧಿಗಳೂ ಅಪಹರಣ ಕೇಸು ಹೊತ್ತು ತಿರುಗುತ್ತಿದ್ದಾರೆ ಎಂಬ ಆಘಾತಕಾರಿ ಅಂಶ ಬಯಲಾಗಿದೆ. 

Advertisement

ಅಸೋಸಿಯೇಶನ್‌ ಫಾರ್‌ ಡೆಮಾಕ್ರೆಟಿಕ್‌ ರಿಫಾರ್ಮ್ಸ್ ನಡೆಸಿರುವ ಸರ್ವೆಯಲ್ಲಿ ಈ ಅಂಶ ಬಹಿರಂಗಗೊಂಡಿದೆ. ಸದ್ಯ ದೇಶದಲ್ಲಿ ಒಟ್ಟು 4856 ಶಾಸಕರು ಮತ್ತು ರಾಜ್ಯಸಭೆಯೂ ಸೇರಿ 770 ಸಂಸತ್‌ ಸದಸ್ಯರಿದ್ದಾರೆ. ಇವರಲ್ಲಿ 1024 ಮಂದಿ ಶಾಸಕರು/ಸಂಸದರು ನಾನಾ ರೀತಿಯ ಅಪರಾಧ ಪ್ರಕರಣಗಳನ್ನು ಹೊತ್ತಿ ದ್ದಾರೆ. ಈ ಅಪರಾಧ ಪ್ರಕರಣ ಹೊಂದಿರು ವವರಲ್ಲಿ 64 ಮಂದಿ ಅಪಹರಣ ಕೇಸು ಎದುರಿಸುತ್ತಿದ್ದಾರೆ ಎಂದು ಎಡಿಆರ್‌ ತಿಳಿಸಿದೆ. 

ಉಮಾನಾಥ್‌ ಎ ಕೋಟ್ಯಾನ್‌ ಮೇಲೆ ಪ್ರಕರಣ
ಕರ್ನಾಟಕದಲ್ಲಿ ಒಬ್ಬ ಶಾಸಕ ಮಾತ್ರ ಅಪಹರಣ ಕೇಸು ಎದುರಿಸುತ್ತಿದ್ದಾರೆ. ಮೂಡಬಿದಿರೆಯ ಬಿಜೆಪಿ ಶಾಸಕ ಉಮಾನಾಥ್‌ ಎ.ಕೋಟ್ಯಾನ್‌ ಅವರು ಐಪಿಸಿ ಸೆಕ್ಷನ್‌ 363ರಂತೆ ಅಪಹರಣ ಪ್ರಕರಣ ಎದುರಿಸುತ್ತಿದ್ದಾರೆ. ಇವರನ್ನು ಬಿಟ್ಟರೆ ರಾಜ್ಯದ ಇತರೆ ಯಾವುದೇ ರಾಜಕಾರಣಿ ವಿರುದ್ಧ ಅಪಹರಣದ ಕೇಸಿಲ್ಲ. 

ದೇಶದ ಹಲವಾರು ಸಂಸದ, ಶಾಸಕರ ಮೇಲೂ ಅಪಹರಣ ಪ್ರಕರಣ
ಕರ್ನಾಟಕದ ಒಬ್ಬ ಶಾಸಕರ ಮೇಲೆ ಕೇಸು
ಅಸೋಸಿಯೇಶನ್‌ ಫಾರ್‌ ಡೆಮಾಕ್ರೆಟಿಕ್‌ ರಿಫಾರ್ಮ್ಸ್ ನಡೆಸಿರುವ ಸರ್ವೆಯಿಂದ ಬಹಿರಂಗ

Advertisement

Advertisement

Udayavani is now on Telegram. Click here to join our channel and stay updated with the latest news.

Next