Advertisement

ನಿಮ್ಮ ಪ್ರಶ್ನೆಗೆಯೋಗ ತಜ್ಞರ ಉತ್ತರ

10:51 PM Jan 27, 2020 | Sriram |

ಯೋಗದ ಕುರಿತಾಗಿರುವ ತಮ್ಮ ಗೊಂದಲಗಳಿಗೆ ತಜ್ಞರ ಉತ್ತರಗಳ ಮೂಲಕ ತೆರೆ ಎಳೆಯುವ ಪ್ರಯತ್ನ ಇದು. ಓದುಗರು ಕೇಳಿದ ಪ್ರಶ್ನೆಗಳಿಗೆ ಈ ಬಾರಿ ಉಡುಪಿಯ ಅಯ್ಯಂಗಾರ್‌ ಯೋಗ ಶಿಕ್ಷಕಿ, ಶೋಭಾ ಶೆಟ್ಟಿ ಅವರು ಉತ್ತರಿಸಿದ್ದಾರೆ.

Advertisement

 ಗರ್ಭಿಣಿಯರು ಯಾವ ರೀತಿಯ
ಆಸನಗಳನ್ನು ಮಾಡಬೇಕು ?
ಗರ್ಭಿಣಿಯರು ಇದೇ ಮೊದಲ ಬಾರಿ ಯೋಗ ಮಾಡುವವರಾದರೆ ಅವರಾಗಿ ಪ್ರಯತ್ನಿಸಬಾರದು. ಪರಿಣತ ಯೋಗ ಶಿಕ್ಷಕರ ಸಹಾಯದಿಂದ ಮಾತ್ರ ಮಾಡಬೇಕು. ದೇಹಕ್ಕೆ ಯಾವುದೇ ಒತ್ತಡಗಳು ಬೀಳದಂತೆ ನೋಡಿಕೊಳ್ಳಬೇಕು. ದೈನಂದಿನ ಜೀವನದಲ್ಲಿ ಇರುವ‌ ಹಾಗೆ, ಸುಲಲಿತವಾಗಿ ಯೋಗವನ್ನು ಅಭ್ಯಾಸ ಮಾಡಬೇಕು. ದೇಹಕ್ಕೆ ಒತ್ತಡ ಬೇಳದಂತೆ ನೋಡಿಕೊಳ್ಳಬೇಕು. ಇದಕ್ಕೆ ತಜ್ಞರ ನಿರ್ದೇಶನದ ಮೂಲಕ ಯೋಗ ಮಾಡುವುದು ಮಾತ್ರ ಸರಿಯಾದ ಆಯ್ಕೆ.

ಬೆನ್ನು ನೋವಿಗೆ ಮಾಡಬಹುದಾದ
ಸುಲಭ ಆಸನಗಳು?
ಬೆನ್ನು ನೋವಿಗೆ ನಿರ್ದಿಷ್ಟವಾಗಿ ಯಾವ ಯೋಗ ಮಾಡಬೇಕು ಎಂದು ಹೇಳುವುದು ಕಷ್ಟ. ಇದು ನೋವಿನ ಮಾತ್ರೆಗಳನ್ನು ನೀಡಿದಂತಲ್ಲ. ಅವರ ದೇಹದ ಸ್ಥಿತಿಯನ್ನು ಅರಿತುಕೊಂಡು ಯೋಗ ಮಾಡಬೇಕು. ಇಲ್ಲೂ ನೀವು ತಜ್ಞರ ಸಲಹೆಯನ್ನು ಪಡೆದುಕೊಳ್ಳುವುದು ಅತ್ಯಗತ್ಯ. ಬೆನ್ನು ನೋವಿನ ಕಾರಣಕ್ಕೆ ಏಕಾಏಕಿ ಯೋಗವನ್ನು ಮಾಡುವುದು ಸರಿಯಾದ ಕ್ರಮವಲ್ಲ. ಇದರಿಂದ ನಿಮ್ಮ ನೋವು ಹೆಚ್ಚಾಗುವ ಸಾಧ್ಯತೆಯೇ ಹೆಚ್ಚು. ಇನ್ನು ಯೋಗವನ್ನು ಪ್ರತಿದಿನ ಅಭ್ಯಾಸ ಮಾಡುವುದರಿಂದ ಉತ್ತಮ ಆರೋಗ್ಯವನ್ನು ಕಂಡುಕೊಳ್ಳಬಹುದಾಗಿದೆ.

 ಮನಸ್ಸಿನ ಹತೋಟಿಗೆ ಯಾವ
ಯೋಗ ಪೂರಕ?
ಎಲ್ಲಾ ಆಸನಗಳು ಮನಸ್ಸಿನ ಏಕಾಗ್ರತೆ ಮತ್ತು ಮನಸ್ಸನ್ನು ಹತೋಟಿಯಲ್ಲಿಡಲು ಸಹಕಾರಿಯಾಗಿದೆ. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣಾ, ಧ್ಯಾನ, ಸಮಾ ಎಂಬ ಪತಂಜಲಿ ಹೇಳಿದ ಹಂತಗಳಂತೆ ಇವುಗಳನ್ನು ಪಾಲಿಸಿದರೆ ಮನಸ್ಸನ್ನು ಹತೋಟಿಯಲ್ಲಿಡಲು ಸಾಧ್ಯ. ನೀವು ಯೋಗ ಮಾಡುವ ವೇಳೆ ಪ್ರತಿಯೊಂದು ಯೋಗದಲ್ಲೂ ಲಕ್ಷ್ಯವನ್ನು ಇಟ್ಟುಕೊಳ್ಳಬೇಕು. ಯಾವ ಅಂಗದ ಮೂಲಕ ಯೋಗಾಭ್ಯಾಸ ಮಾಡುತ್ತೀರಿ ಎಂಬುದನ್ನು ನೀವು ಏಕಾಗ್ರತೆಯಿಂದ ಗಮನಿಸುತ್ತಿದ್ದರೆ ಸಹಜವಾಗಿ ನಿಮ್ಮಲ್ಲಿ ಮನಸ್ಸಿನ ಹತೋಟಿ ಬರುತ್ತದೆ.

ನಿದ್ರೆ ಸಮಸ್ಯೆಗೆ ಯಾವ ಯೋಗ
ಹೆಚ್ಚು ಉಪಕಾರಿ?
ಯೋಗ ಅಭ್ಯಾಸ ಮಾಡುತ್ತಾ ಇದ್ದರೆ ಅದು ಅಭ್ಯಾಸವಾಗುತ್ತದೆ. ನಿದ್ರೆಯ ಸಮಸ್ಯೆ ಎಂಬುವಂತದ್ದು ಅವರವರ ದೇಹದ ಮೇಲೆ ಅವಲಂಬಿತವಾಗಿದೆ. ನೀವು ಸಂಜೆ ಯೋಗ ಮಾಡಿದರೆ ದೇಹಕ್ಕೆ ಹೆಚ್ಚು ಒತ್ತಡ ಉಂಟಾಗುತ್ತದೆ. ಇದು ನಿದ್ರೆಯ ಸಮಸ್ಯೆಗೆ ಕಾರಣವಾಗಬಹುದು. ಈ ಕಾರಣಕ್ಕಾಗಿ ನೀವು ಬೆಳಗ್ಗೆ ಯೋಗ ಮಾಡಿ, ಸಂಜೆ ವಿಶ್ರಾಂತಿ ಪಡೆದುಕೊಳ್ಳುವುದು ಉತ್ತಮ. ಇದರಿಂದ ನಿದ್ರೆ ಚೆನ್ನಾಗಿ ಬರಬಹುದು. ರಾತ್ರಿ 10 ಗಂಟೆಗೆ ಮಲಗಿದರೆ ನೀವು ನಿದ್ರೆಯ ಸಮಸ್ಯೆಯನ್ನು ತಕ್ಕಮಟ್ಟಿಗೆ ಬಗೆಹರಿಸಿಕೊಳ್ಳಬಹುದು. ಆರೋಗ್ಯ ಚೆನ್ನಾಗಿದ್ದರೆ ಬೇಗನೇ ನಿದ್ದೆ ಬರುತ್ತದೆ. ಆರೋಗ್ಯ ಚೆನ್ನಾಗಿ ಇರಬೇಕಾದರೆ ಯೋಗವನ್ನು ಅಭ್ಯಾಸ ಮಾಡಲೇಬೇಕು.

Advertisement

 ಮಕ್ಕಳಲ್ಲಿ ಪರೀಕ್ಷಾ ಸಮಯದಲ್ಲಿ
ಆತ್ಮವಿಶ್ವಾಸ ವೃದ್ಧಿಗೆ ಯಾವ ಯೋಗ ಅಗತ್ಯ?
ಯೋಗ ಆತ್ಮ ವಿಶ್ವಾಸ ವೃದ್ಧಿಗೆ ಬಹುದೊಡ್ಡ ಕೊಡುಗೆ ನೀಡುತ್ತದೆ. ಈ ಸಮಯದಲ್ಲಿ ಮಕ್ಕಳು ಯೋಗ ಮಾಡಲೇಬೇಕು. ಶೀಶಾìಸನ, ಸರ್ವಾಗಾಂಸನ, ಹಲಾಸನ ಮೊದಲಾದ ಆಸನವನ್ನು ಮಾಡುತ್ತಾ ಇದ್ದರೆ ಬ್ರೈನ್‌ ಚುರುಕಾಗುವುದರ ಜತೆಗೆ ಚುರುಕಾಗಿರುತ್ತದೆ. ಮಾತ್ರವಲ್ಲದೇ ಆತ್ಮವಿಶ್ವಾಸವೂ ಹೆಚ್ಚಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next