Advertisement

ಕಿತ್ತೂರು ಚೆನ್ನಮ್ಮನ ಕೋಟೆ ಸುತ್ತಿದ ಸಣ್ಣ ನೆನಪು..!

11:08 AM Mar 03, 2021 | Team Udayavani |

ಕರ್ನಾಟಕದ ಉತ್ತರದ ತುತ್ತ ತುದಿ ಬೆಳಗಾವಿಯ ಸಿಟಿಯಿಂದ ಬಸ್ ನಲ್ಲಿ ಹೊರಟರೇ ಸರಿ ಸುಮಾರು 50 ಕೀ ಮೀ ಅಂತರದಲ್ಲಿ ಒಂದು, ಒಂದು ವರೆ ಗಂಟೆಯೊಳಗೆ ತಲುಪಬಹುದಾದ ಊರು, ಕಿತ್ತೂರು ರಾಣಿ ಚೆನ್ನಮ್ಮನ ಬೀಡು. ಕರ್ನಾಟಕದ ಇತಿಹಾಸವನ್ನು ಸಾರುವ ಐತಿಹಾಸಿಕ ಸ್ಮಾರಕಗಳ ಪೈಕಿಯಲ್ಲಿ ಮೇಲ್ಪಂಕ್ತಿಗೆ ಸೇರುತ್ತದೆ ಕಿತ್ತೂರು ರಾಣಿ ಚೆನ್ನಮ್ಮನ ಕೋಟೆ.

Advertisement

ಕನ್ನಡನಾಡಿನ ವೀರ ಮಹಿಳೆಯರಲ್ಲಿ ಅಗ್ರಪಂಕ್ತಿಯ ಸಾಲಿನಲ್ಲಿ ಸೇರುವ, ಸ್ವಾತಂತ್ರ ಸ್ವಾಭಿಮಾನಗಳ ಸಾಕಾರಮೂರ್ತಿ ಕಿತ್ತೂರಿನ ರಾಣಿ ಚೆನ್ನಮ್ಮ. ಕಿತ್ತೂರಿನ ದೇಸಾಯಿಗಳಲ್ಲಿ ಪ್ರಸಿದ್ಧನಾದ ಮಲ್ಲ ಸರ್ಜನ ಕಿರಿಯ ಹೆಂಡತಿ ಕಿತ್ತೂರಿನ ಒಡತಿ.  ತಾನಾಳುತ್ತಿದ್ದ ಪುಟ್ಟ ರಾಜ್ಯದ ಸ್ವಾತಂತ್ರ್ಯ ರಕ್ಷಣೆಗಾಗಿ ಬ್ರಿಟಿಷರ ದೊಡ್ಡ ಸೈನ್ಯದ ವಿರುದ್ಧ ಸೆಟೆದು ನಿಂತು ನಡೆಸಿದ ಕೆಚ್ಚೆದೆಯ ಹೋರಾಟ, ಅಲ್ಲಿ ತೋರಿಸಿದ ಧೈರ್ಯ, ಸಾಹಸ, ಚೆನ್ನಮ್ಮ ನ ಕೀರ್ತಿಯನ್ನು ಶಿಖರಕ್ಕೇರಿಸಿವೆ. ಚೆನ್ನಮ್ಮ ನಿಂದ ಕಿತ್ತೂರು ಪ್ರಸಿದ್ಧವಾಗಿದೆ.

ಕಿತ್ತೂರು ಕೋಟೆ ಕರ್ನಾಟಕದ ಪ್ರಮುಖ ಐತಿಹಾಸಿಕ ಸ್ಮಾರಕಗಳು ಮತ್ತು ಅದರ ಪ್ರಸಿದ್ಧ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಕಿತ್ತೂರಿನ ರಾಣಿ ಚೆನ್ನಮ್ಮನ ಆಳ್ವಿಕೆಯಲ್ಲಿದ್ದ ಕೋಟೆಗೆ ಈಗ ಭೇಟಿ ನೀಡಿದರೇ, ಕೋಟೆಯನ್ನು ಪೂರ್ಣಾವಸ್ಥೆಯಲ್ಲಿ ನಮಗೆ ಕಾಣುವುದಕ್ಕಾಗುವುದಿಲ್ಲ. ಆದರೇ, ಕಿತ್ತೂರಿನ ಒಡತಿಯ ಆಳ್ವಿಕೆಗೆ, ಕಿತ್ತೂರಿನ ಇತಿಹಾಸದ ಸಂಸ್ಕೃತಿಗೆ  ಹಿಡಿದ ಕನ್ನಡಿಯಾಗಿದೆ ಎನ್ನುವುದಕ್ಕೆ ಸಂಶಯವಿಲ್ಲ.

ಈ ಕೋಟೆಯು ಕಿತ್ತೂರು ಪಟ್ಟಣದಲ್ಲಿದೆ, ಕಿತ್ತೂರಿನ ಸಣ್ಣ ಪಟ್ಟಣವು ಕಿತ್ತೂರ್ ಕೋಟೆ ಮತ್ತು ಅದರ ಐತಿಹಾಸಿಕ ಮಹತ್ವವನ್ನು ಹೊಂದಿರುವ ಕಾರಣದಿಂದ ಖ್ಯಾತಿ ಪಡೆದಿದೆ.

Advertisement

ಕಿತ್ತೂರು ಕೋಟೆ ಕಿತ್ತೂರು  ಚೆನ್ನಮ್ಮ ಕೋಟೆ ಎಂದೂ ಕರೆಯಲ್ಪಡುತ್ತದೆ. ರಾಣಿ ಚೆನ್ನ,ಮ್ಮನ  ಹಳೆಯ ಅರಮನೆ, ಸ್ಮಾರಕಗಳು ಮತ್ತು ಪ್ರತಿಮೆಗಳೊಂದಿಗೆ ಕಿತ್ತೂರು ದೇಶಾದ್ಯಂತದ ಮತ್ತು ಅಂತರಾಷ್ಟ್ರೀಯ ಪ್ರವಾಸಿಗರಿಗೆ ಐತಿಹಾಸಿಕ ಆಕರ್ಷಣೆಯಾಗಿದೆ.

ಕಿತ್ತೂರು ಕೋಟೆ ಕೂಡ ಒಂದು ಅರಮನೆಯನ್ನು ಹೊಂದಿದೆ, ಇದನ್ನು ರಾಣಿ ಚೆನ್ನಮ್ಮನ ಅರಮನೆ ಎಂದು ಕರೆಯಲಾಗುತ್ತದೆ. ಕಿತ್ತೂರು ರಾಣಿ ಚೆನ್ನಮ್ಮ ಮಲಗುತ್ತಿದ್ದ ಕೋಣೆ, ದರ್ಬಾರ್ ನೆಡೆಸುತ್ತಿದ್ದ ಹಾಲ್, ಸ್ನಾನ ಗೃಹ, ಈಜು ಕೊಳ, ರಾಣಿ ಚೆನ್ನಮ್ಮನ ವೈಯಕ್ತಿಕ ಕೊಠಡಿ ಸೇರಿ ರಾನಿ ಚೆನ್ನಮ್ಮನ ಆಳ್ವಿಕೆಯ ಕಾಲಘಟ್ಟವನ್ನು ಪ್ರತಿಬಿಂಬಿಸುವ ಕುರುಹುಗಳನ್ನಷ್ಟೇ ನಾವು ಈಗ ಕಣ್ತುಂಬಿಕೊಳ್ಳಬಹುದು.

ಬೆಳಗಾವಿಯ ಹೊರವಲಯದಲ್ಲಿರುವ ಕೋಟೆಯ ಒಳಗೆ ಅರಮನೆಯ ಅವಶೇಷಗಳಿಂದ ನೆಲೆಗೊಂಡಿದೆ. ಈ ಅರಮನೆಯು ರಾಣಿ ಚೆನ್ನಮ್ಮನ ನಿವಾಸವಾಗಿತ್ತು. ಸ್ಥಳದಲ್ಲಿರುವ ಪುರಾತತ್ವ ವಸ್ತುಸಂಗ್ರಹಾಲಯವು ಪುರಾತತ್ತ್ವ ಶಾಸ್ತ್ರ ಮತ್ತು ವಸ್ತು ಸಂಗ್ರಹಾಲಯಗಳಿಂದ ನಿರ್ವಹಿಸಲ್ಪಡುತ್ತದೆ. ಇದು ಕಿತ್ತೂರು ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಕಂಡುಬರುವ ಪುರಾತನ ವಸ್ತುಗಳ ಸಮೃದ್ಧ ಸಂಗ್ರಹವನ್ನು ಹೊಂದಿದೆ, ಅದರಲ್ಲಿ ಕೆಲವು ಶಸ್ತ್ರಾಸ್ತ್ರಗಳು, ಕತ್ತಿಗಳು, ಗುರಾಣಿಗಳು, ಕಿತ್ತೂರ್ ಅರಮನೆಯ ಕೆತ್ತಿದ ಮರದ ಬಾಗಿಲುಗಳು ಮತ್ತು ಕಿಟರುಗಳ ಕೆತ್ತನೆಗಳು, ಶಾಸನಗಳು, ನಾಯಕತ್ವಗಳು, ಸೂರ್ಯ, ವಿಷ್ಣು, ದೇವರಾಶಿಗೆ ಹಳ್ಳಿಯಿಂದ ವಿಷ್ಣು ಮತ್ತು ಸೂರ್ಯ, ಮನೋಲಿಯಿಂದ ಸುಬ್ರಹ್ಮಣ್ಯ, ಹಿರೆ ಭಾಗವಾಡಿಯಿಂದ ದುರ್ಗಾ ಸೇರಿ ಹಲವು ಮೂರ್ತಿಗಳು, ಶಾಸನಗಳ ಜೊತೆಗೆ ಕೆಲವು ಆಧುನಿಕ ವರ್ಣಚಿತ್ರಗಳನ್ನು ಒಳಗೊಂಡಿದೆ.

ಬೆಳಗಾವಿ ಮತ್ತು ಧಾರಾವಾಡಗಳ ಮಧ್ಯೆ ಇರುವ ದೀರ್ಘ ಬಯಲು ಪ್ರದೇಶದ ಕೇಂದ್ರ ಬಿಂದುವಿನಲ್ಲಿ ರಾಣಿ ಚೆನ್ನಮ್ಮನ ಆಳ್ವಿಕೆಯ ಇತಿಹಾಸದ ದರ್ಶನ ನಮಗಾಗುತ್ತದೆ.  ಎಂದಿಗೂ ಬಿಸಿಲಿನ ಝಳದಿಂದಲೇ ಕೂಡಿರುವ ಬಯಲ ನಾಡು ಬೆಳಗಾವಿ ಹಾಗೂ ಧಾರಾವಾಡದ ನಡುವೆ ಇರುವ ಈ ಐತಿಹಾಸಿಕ ಸ್ಮಾರಕ ಕಿತ್ತೂರಿನ ವಾತಾವರಣ ಕರ್ನಾಟಕದ ದಕ್ಷಿಣ ಭಾಗದಿಂದ ಪ್ರವಾಸ ಹೋದವರಿಗೆ ತುಸು ಶುಷ್ಕ ಅನುಭವವನ್ನು ನೀಡಬಹುದು. ಆದರೇ, ಇದು ನೋಡಲೇ ಬೇಕಾದ ಸ್ಥಳ ಮತ್ತು ತಿಳಿದುಕೊಳ್ಳಬೇಕಾದ ವಿಷಯ. ನಮ್ಮ ಭೇಟಿ ರಾಣಿ ಚೆನ್ನಮ್ಮನ ಆಳ್ವಿಕೆಯ ದರ್ಶನ ನಿಮ್ಮ ಪಾಲಿಗಾಗಲಿ.

–ಶ್ರೀರಾಜ್ ವಕ್ವಾಡಿ

Advertisement

Udayavani is now on Telegram. Click here to join our channel and stay updated with the latest news.

Next