Advertisement
ಪ್ರಕೃತಿ, ಚಾರಣ ಪ್ರೀಯರ ಸ್ವರ್ಗವೆಂದೆಣಿಸಿದ ಕುಮಾರ ಪರ್ವತಕ್ಕೆ ತೆರಳುವ ಚಾರಣಿಗರ ತಂಡಕ್ಕೆ ಚಾರಣ ವೇಳೆ ಬೆಟ್ಟ ಗುಡ್ಡ ಹತ್ತುವುದಕ್ಕಿಂತ ಹೆಚ್ಚು ಭಾರವಾಗುತ್ತಿರುವುದು ಚಾರಣ ವೇಳೆ ಚೆಕ್‌ಪೋಸ್ಟ್‌ನಲ್ಲಿ ವಿಧಿಸಲಾಗುತ್ತಿರುವ ಅಧಿಕ ಶುಲ್ಕ. ಇಲ್ಲಿ ಚಾರಣಿಗರ ತಂಡದ ಪ್ರತಿ ಸದಸ್ಯನಿಂದ 350 ರೂ. ಹಾಗೂ ವಿದೇಶಿ ಪ್ರಜೆಯಿಂದ 1,000 ರೂ. ನಂತೆ ಸ್ವೀಕರಿಸಲಾಗುತ್ತದೆ.
ಪುಷ್ಪಗಿರಿ ವನ್ಯ ಜೀವಿ ವಿಭಾಗದ ಚೆಕ್ ಪೋಸ್ಟ್ ಇಲ್ಲಿದೆ. ಆದ್ದರಿಂದ ಮುಂದಕ್ಕೆ ಪರ್ವತ ಹತ್ತಲು ವನ್ಯ ಜೀವಿ ವಿಭಾಗದ ಇಲಾಖೆಯ ಅನುಮತಿ ಪಡೆಯಲೇ ಬೇಕಾಗಿದೆ. ಈ ವೇಳೆ ತಪಾಸಣ ಕೇಂದ್ರದ ಸಿಬಂದಿ ಚಾರಣಿಗರಿಂದ ಮೊತ್ತವನ್ನು ಪಡೆದುಕೊಳ್ಳುತ್ತಿದ್ದು, ಪ್ರತಿಯಾಗಿ ರಶೀದಿ ಕೂಡ ನೀಡಲಾಗುತ್ತಿದೆ. ಎರಡು ವರ್ಷದ ಹಿಂದೆ 150 ರೂ. ನಂತೆ ಸ್ವೀಕರಿಸಲಾಗುತ್ತಿತ್ತು. ನಿರ್ವಹಣೆಗೆಂದು ಈ ವಸೂಲಾತಿ ನಡೆಯುತ್ತಿದ್ದು,ಇಲ್ಲಿ ಯಾವುದೇ ರೆ ವ್ಯವಸ್ಥೆಗಳು ಚಾರಣಿಗರಿಗೆ ಒದಗಿಸಲಾಗುತ್ತಿಲ್ಲ. ಮಾರ್ಗದರ್ಶಿ ವ್ಯವಸ್ಥೆಯೂ ಇಲ್ಲಿಲ್ಲ.
Related Articles
ಕೇಂದ್ರ ವನ್ಯ ಜೀವಿ ವಿಭಾಗದ ಶುಲ್ಕ ಕುಮಾರ ಪರ್ವತದಲ್ಲಿ ಜಾರಿಯಲ್ಲಿದೆ. ಈ ವಿಚಾರಕ್ಕೆ ಸಂಬಂಧಿಸಿ ಪರ್ವತಕ್ಕೆ ಚಾರಣಕ್ಕೆ ತೆರಳುವವ ಪ್ರವಾಸಿಗರಿಗೆ ಅನುಕೂಲವಾಗುವಂತೆ ಕುಮಾರ ಪರ್ವತದಲ್ಲಿ ವೀಕ್ಷಣಾ ಗೋಪುರ ತೆರೆಯುವ ಚಿಂತನೆ ಇದೆ. ಚಾರಣಕ್ಕೆ ಪ್ರೋತ್ಸಾಹ ನೀಡುವ ಯೋಜನೆಗಳನ್ನು ಜಾರಿಗೆ ತರಲಾಗುವುದು.
-ಆರ್. ಶಂಕರ್ ,
ಪರಿಸರ ಖಾತೆ ಸಚಿವ
Advertisement
ಹೆಚ್ಚು ಶುಲ್ಕ ಸರಿಯಲ್ಲಕುಮಾರ ಪರ್ವತಕ್ಕೆ ಚಾರಣಕ್ಕೆ ತೆರಳುವ ವೇಳೆ ಪ್ರತಿಯೋರ್ವ ಚಾರಣಿಗ ಸದಸ್ಯನಿಂದ 350 ರೂ. ಪಡೆಯುತ್ತಿರುವುದು ದುಬಾರಿಯಾಗುತ್ತಿದೆ. ಶುಲ್ಕ ಪಡೆದರೂ ಅಲ್ಲಿ ಯಾವುದೇ ವ್ಯವಸ್ಥೆಗಳು ಇಲ್ಲ. ಹೀಗಾಗಿ ಕೇಂದ್ರ ವನ್ಯಜೀವಿ ವಿಭಾಗ ಚಾರಣಿಗರಿಗೆ ಅನುಕೂಲವಾಗುವಂತೆ ಸರಳ ಶುಲ್ಕ ನಿಗದಿಪಡಿಸಬೇಕು.
-ಸುರೇಶ್ ಬಜಗೋಳಿ,
ಚಾರಣಿಗ ಬಾಲಕೃಷ್ಣ ಭೀಮಗುಳಿ