ಚಿಕ್ಕಬಳ್ಳಾಪುರ: ರೇಷ್ಮೆ, ಹೈನುಗಾರಿಕೆ, ದ್ರಾಕ್ಷಿ ಹಾಗೂ ತರಕಾರಿ ಉತ್ಪಾದನೆಯಲ್ಲಿ ಗಮನ ಸೆಳೆದಿರುವ ಯಾವುದೇ ನದಿನಾಲೆ ಗಳಿಲ್ಲದ ನೀರಾ ವರಿ ಸೌಲಭ್ಯದಿಂದ ವಂಚಿತಗೊಂಡಿರುವ ಬರ ಪೀಡಿ ತ ಪ್ರದೇಶ ಎಂದು ಅಪಖ್ಯಾತಿಗೆ ಗುರಿಯಾಗಿ ರುವ ಜಿಲ್ಲೆಯಲ್ಲಿರುವ ಜ್ವಲಂತ ಸಮಸ್ಯೆಗಳಿಗೆ ಬಜೆಟ್‌ನಲ್ಲಿ ಮುಕ್ತಿ ಸಿಗುವುದೇ ಎಂಬ ನಿರೀಕ್ಷೆಗಳು ಹುಟ್ಟಿಕೊಂಡಿವೆ. ಮಾ.8ರಂದು ಮುಖ್ಯಮಂತ್ರಿ ಬಿ.ಎಸ್ .ಯಡಿ ಯೂರಪ್ಪ ಅವರು ಮಂಡಿಸಲಿರುವ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಜಿಲ್ಲೆಯಲ್ಲಿ ನನೆಗುದಿಗೆ ಬಿದ್ದಿ ರುವ ಯೋಜನೆಗಳನ್ನು ಜಾರಿಗೊಳಿಸಲು ಅಗತ್ಯ ಅನುದಾನ ಲಭಿಸುವುದೇ ಎಂಬ ಚರ್ಚೆ ಸಾರ್ವ ತ್ರಿಕ ವಲಯದಲ್ಲಿ ಆರಂಭಗೊಂಡಿದೆ.
ಅಪಾರ ನಿರೀಕ್ಷೆ: ರಾಜ್ಯ ಬಿಜೆಪಿ ಸರ್ಕಾರ ದಲ್ಲಿ ಪ್ರಭಾವಿ ಸಚಿವರು, ಸಿಎಂ ಆಪ್ತರಾಗಿರುವ ಡಾ.ಕೆ.ಸುಧಾ ಕರ್ ಮೇಲೆ ಜಿಲ್ಲೆಯ ಜನರು ಅಪಾರ ನಿರೀಕ್ಷೆ ಇಟ್ಟು ಕೊಂಡಿದ್ದು ಜಿಲ್ಲೆಯ ಸರ್ವಾಂ ಗೀಣ ಅಭಿವೃದ್ಧಿಗೆ ಪೂರಕವಾಗಿರುವ ಯೋಜನೆ ಗಳಿಗೆ ಬಜೆಟ್ ನಲ್ಲಿ ಸ್ಥಾನ ಮಾನ ಸಿಗುವುದೇ ಎಂದು ಕಾದುಕುಳಿತಿದ್ದಾರೆ.
ಇನ್ನೆಷ್ಟು ವರ್ಷ ಬೇಕು: ಜಿಲ್ಲೆಯಲ್ಲಿ ಪ್ರಮುಖವಾಗಿ ನೀರಾವರಿ ಸೌಲಭ್ಯ ಗಳಿಂದ ವಂಚಿತಗೊಂಡಿದ್ದು, ಈ ಭಾಗಕ್ಕೆ ಕುಡಿ ಯುವ ನೀರು ಪೂರೈಕೆ ಮಾಡುವ ಸಲು ವಾಗಿ ಆರಂಭಿಸಿರುವ ಎತ್ತಿನಹೊಳೆ ಯೋಜನೆ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದ್ದು, ಈ ಯೋಜನೆಯ ಮೂಲಕ ಬರಪೀಡಿತ ಜಿಲ್ಲೆಗೆ ನೀರು ಹರಿಯಲು ಎಷ್ಟು ವರ್ಷ ಕಾಯಬೇಕೆಂಬ ಅಸ ಮಾಧಾನ ಜಿಲ್ಲೆಯ ನಾಗರಿಕರಲ್ಲಿ ಉದ್ಭವವಾಗಿದೆ.
ತ್ವರಿತವಾಗಿ ಈಡೇರಲಿ: ರಾಜ್ಯ ಬಿಜೆಪಿ ಸರ್ಕಾರ ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಗೊಳಿ ಸಲು ಆಸಕ್ತಿ ವಹಿಸುತ್ತಿಲ್ಲ ಎಂಬ ಆರೋಪ ವಿರೋ ಧ ಪಕ್ಷಗಳಿಂದ ಕೇಳಿ ಬರುತ್ತಿದೆ. ಮಳೆಯ ನೀರನ್ನು ಆಶ್ರಯಿಸಿಕೊಂಡು ಜೀವನ ನಡೆಸುತ್ತಿರುವ ಈ ಭಾಗದ ರೈತರಿಗೆ ಶಾಶ್ವತ ನೀರಾವರಿ ಯೋಜನೆ ಯನ್ನು ಜಾರಿಗೊಳಿಸಬೇಕೆಂಬ ಬೇಡಿಕೆ ತ್ವರಿತವಾಗಿ ಈಡೇರಲಿ ಎಂಬ ಒತ್ತಾಸೆಯಾಗಿದೆ.
ಕೃಷ್ಣ ನದಿ ಹರಿಸಲಿ: ಜಿಲ್ಲೆಗೆ ನೀರಾವರಿ ಯೋಜನೆ ಕಲ್ಪಿಸುವ ಮೊದಲು ಬೆಂಗಳೂರಿನ ತ್ಯಾಜ್ಯ ನೀರನ್ನು ಶುದ್ಧೀಕರಿಸಿ ಹೆಚ್.ಎನ್.ವ್ಯಾಲಿಯ ಯೋಜನೆ ಮೂಲಕ ಜಿಲ್ಲೆಯ ಕೆರೆಗಳಿಗೆ ನೀರು ಹರಿದು ಬಂದಿದ್ದು, ಅದು ಹೊರತುಪಡಿಸಿ ಬೇರೆ ಯಾವುದೇ ನೀರಾವರಿ ಯೋಜನೆಗಳನ್ನು ಜಾರಿ ಗೊ ಳಿ ಸಿಲ್ಲ. ಈ ಮಧ್ಯೆ ಜಿಲ್ಲೆಯ ಗಡಿಗೆ ಹೊಂದಿ ಕೊಂಡಿರುವ ಹಿಂದೂಪುರಕ್ಕೆ ಕೃಷ್ಣ ನದಿ ನೀರು ಹರಿದು ಬಂದಿದ್ದು, ಅದನ್ನು ಜಿಲ್ಲೆಗೆ ಹರಿಸಲು ಜನಪ್ರತಿನಿಧಿಗಳು ಮತ್ತು ಸರ್ಕಾರ ವಿಶೇಷ ಗಮನ ಹರಿಸಬೇಕಾಗಿದೆ.
ಕೃಷಿ ಆಧಾರಿತ ಇನ್ನಿತರೆ ಕೈಗಾರಿಕೆ ಸ್ಥಾಪಿಸಲಿ: ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡಲು ಹಿಂದಿನ ಸಮ್ಮಿಶ್ರ ಸರ್ಕಾರ ಜಿಲ್ಲೆಯ ಆಟೋ ಮೊಬೈಲ್ ಬಿಡಿಭಾಗಗಳ ಕಾರ್ಖಾನೆ ಮತ್ತು ಜಿಲ್ಲೆಯ ಜಲಮೂಲಗಳಾದ ಕೆರೆಗಳನ್ನು ಅಭಿವೃದ್ಧಿಳಿಸುವ ಯೋಜನೆ ಪ್ರಕಟಿಸಲಾಗಿತ್ತಾ ದರೂ ಇದುವರೆಗೆ ಎರಡು ಯೋಜನೆಗಳಿಗೆ ಮೋಕ್ಷ ಕೂಡಿ ಬಂದಿಲ್ಲ. ಜಿಲ್ಲೆಯಲ್ಲಿ ಬಹುತೇಕ ನಿರುದ್ಯೋಗಿಗಳು ಉದ್ಯೋಗಕ್ಕಾಗಿ ಬೆಂಗಳೂರು ಮತ್ತಿತರರ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದು, ಜಿಲ್ಲೆಯಲ್ಲಿ ಕೃಷಿ ಆಧಾರಿತ ಇನ್ನಿತರೆ ಕೈಗಾರಿಕೆಗಳನ್ನು ಸ್ಥಾಪಿಸಬೇಕಾಗಿದೆ.
ಶೈಕ್ಷಣಿಕೆ ಕೇಂದ್ರ: ಶಿಡ್ಲಘಟ್ಟ ತಾಲೂಕಿನಲ್ಲಿ ಬೆಂಗ ಳೂರು ಉತ್ತರ ವಿಶ್ವವಿದ್ಯಾಲಯಕ್ಕೆ ಜಾಗವನ್ನು ಕಾಯ್ದಿರಿಸುವ ಮತ್ತು ಅಲ್ಲಿ ನಾಲೇಜ್ ಸಿಟಿ ಸ್ಥಾಪಿಸಬೇಕೆಂಬ ಬೇಡಿಕೆ ಅನುಷ್ಠಾನಗೊಳಿಸಲು ಅಗತ್ಯ ಹಣಕಾಸು ಮತ್ತು ಇನ್ನಿತರೆ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಬಜೆಟ್‌ನಲ್ಲಿ ಆದ್ಯತೆ ನೀಡಿ ಜಿಲ್ಲೆಯನ್ನು ಶೈಕ್ಷಣಿಕೆ ಕೇಂದ್ರ ಮಾಡಲು ಕ್ರಮ ಕೈಗೊಳ್ಳಬೇಕಾಗಿದೆ.
ಎಂ.ಎ.ತಮೀಮ್‌ಪಾಷ