ನವ ದೆಹಲಿ : ಆನ್ ಲೈನ್ ಮೂಲಕ ಆದಾಯ ತೆರಿಗೆ ವಿವರಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸುವ ಹೊಸ ಪೋರ್ಟಲ್ ನಲ್ಲಿನ ಕೆಲವು ಸಮಸ್ಯೆಗಳಿ ಈ ವಾರಾತ್ಯದೊಳಗೆ ಸರಿಪಡಿಸಲಾಗುವುದು ಎಂದು ಐ ಟಿ ಕಂಪೆನಿಗಳಲ್ಲಿ ದೈತ್ಯ ಸಂಸ್ಥೆಯಾದ ಇನ್ಫೊಸಿಸ್ ತಿಳಿಸಿದೆ.
ಹೊಸ ಪೋರ್ಟಲ್ ನಲ್ಲಿನ ಕೆಲವು ಸಮಸ್ಯೆಗಳನ್ನು ಬಳಕೆದಾರರು ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಹೊಸ ವೆಬ್ ಸೈಟ್ ನಲ್ಲಿನ ಸಮಸ್ಯೆಗಳನ್ನು ಸರಿಪಡಿಸುವಂತೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇನ್ಫೊಸಿಸ್ ಗೆ ಸೂಚನೆ ನೀಡಿದ್ದರು.
ಇದನ್ನೂ ಓದಿ : ಗೋವಾ : ಸಿಎಂ ಹಾಗೂ ಎಚ್ ಎಮ್ ನಡುವೆ ಯಾವ ಭಿನ್ನಾಭಿಪ್ರಾಯಗಳಿಲ್ಲ : ರವಿ
ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ನೀಡಿದ ಇನ್ಫೊಸಿಸ್,‘ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಲು ನಮ್ಮ ತಂಡಗಳು ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದೆ.
Related Articles
ಐ.ಟಿ. ವಿವರಗಳನ್ನು ಪರಿಶೀಲಿಸಲು ತೆಗೆದುಕೊಳ್ಳುವ ಸಮಯವನ್ನು ಒಂದು ದಿನಕ್ಕೆ ಇಳಿಸಬೇಕು ಎಂಬ ಉದ್ದೇಶದಿಂದ ಹೊಸ ವ್ಯವಸ್ಥೆಯನ್ನು ರೂಪಿಸುವ ಕೆಲಸವನ್ನು 2019ರಲ್ಲಿ ಇನ್ಫೊಸಿಸ್ ಗೆ ವಹಿಸಲಾಗಿತ್ತು. ಹೊಸ ಪೋರ್ಟಲ್ ನನ್ನು ಸೋಮವಾರ ಬಳಕೆಗೆ ಮುಕ್ತವಾಗಿಸಲಾಗಿತ್ತು.
ಇನ್ನು, ಈ ಬಗ್ಗೆ ಪ್ರತಿಕ್ರಿಯಿಸಿದ ಇನ್ಫೊಸಿಸ್ ಅಧ್ಯಕ್ಷ ನಂದನ್ ನಿಲೇಕಣಿ, ವೆಬ್ ಸೈಟ್ ನಲ್ಲಿ ಮೊದಲ ದಿನ ನಾವು ಕೆಲವು ತಾಂತ್ರಿಕ ಸಮಸ್ಯೆಗಳನ್ನು ಗಮನಿಸಿದ್ದೇವೆ. ಸರಿ ಪಡಿಸುವ ಉದ್ದೇಶದಿಂದ ಸಂಸ್ತೆ ಕಾರ್ಯ ನಿರ್ವಹಿಸುತ್ತಿದೆ. ಈ ಸಮಸ್ಯೆಗಳ ಬಗ್ಗೆ ಇನ್ಫೊಸಿಸ್ ವಿಷಾದ ವ್ಯಕ್ತಪಡಿಸುತ್ತದೆ. ವ್ಯವಸ್ಥೆಯು ವಾರದಲ್ಲಿ ಸರಿಹೋಗಬಹುದು ಎಂಬ ನಿರೀಕ್ಷೆ ಇದೆಎಂದು ಅವರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ : ಅನುಮಾನಾಸ್ಪದ ಚಟುವಟಿಕೆ: ಭಾರತ – ಬಾಂಗ್ಲಾ ಗಡಿ ಸಮೀಪ ಚೀನಾ ಪ್ರಜೆ ಬಂಧನ