Advertisement

ಬಿಲ್ಡ್‌ ಟೆಕ್‌ ವಸ್ತು ಪ್ರದರ್ಶನಕ್ಕೆ ಚಾಲನೆ

11:09 AM Jan 11, 2020 | Suhan S |

ಹುಬ್ಬಳ್ಳಿ: ಇಂದಿರಾ ಗಾಜಿನಮನೆಯಲ್ಲಿ ಮೆ| ಯು.ಎಸ್‌. ಕಮ್ಯುನಿಕೇಶನ್ಸ್‌ ವತಿಯಿಂದ ಆಯೋಜಿಸಿದ ಬಿಲ್ಡ್‌ ಟೆಕ್‌-2020 ಕಟ್ಟಡ ಸಾಮಗ್ರಿಗಳ ವಸ್ತು ಪ್ರದರ್ಶನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಶುಕ್ರವಾರ ಚಾಲನೆ ನೀಡಿದರು. ಬಳಿಕ ಅವರು ಮಾತನಾಡಿ, ಒಂದೇ ಸೂರಿನಡಿ ಗೃಹ ನಿರ್ಮಾಣಕ್ಕೆ ಬೇಕಾದ ವಸ್ತುಗಳು ಲಭ್ಯವಿದ್ದು, ಇದು ಜನರಿಗೆ ಸಾಕಷ್ಟು ಅನುಕೂಲವಾಗಲಿದೆ. ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

Advertisement

ಮೂರು ದಿನಗಳ ಕಾಲ ನಡೆಯುವ ಪ್ರದರ್ಶನದಲ್ಲಿ ಸುಮಾರು 120 ವಿವಿಧ ಕಂಪನಿಯ ಮಳಿಗೆಗಳನ್ನು ಹಾಕಲಾಗಿದೆ. ಗೃಹ ನಿರ್ಮಾಣಕ್ಕೆ ಅಗತ್ಯವಾದ ಮಾಹಿತಿಯಿಂದ ಹಿಡಿದುಅಗತ್ಯ ವಸ್ತುಗಳಾದ ಗೃಹಲಂಕಾರ ಸಾಮಗ್ರಿ, ಸಿಮೆಂಟ್‌, ಗ್ರಾನೈಟ್‌, ಎಲೆಕ್ಟ್ರಿಕಲ್‌ ಫಿಟ್ಟಿಂಗ್ಸ್‌, ಕಿಟಕಿ, ಗ್ಲಾಸ್‌, ಸೋಲಾರ್‌, ಪೀಠೊಪಕರಣಗಳು, ಮಾಡ್ನೂಲರ್‌ ಕಿಚನ್‌, ಗೃಹ ನಿರ್ಮಾಣ, ನಿವೇಶನ, ಅಪಾರ್ಟ್‌ಮೆಂಟ್‌ಗಳು, ಗೃಹ ಸಾಲ ಸೇರಿದಂತೆ ಪ್ರತಿಯೊಂದು ಮಾಹಿತಿ ಇಲ್ಲಿ ದೊರೆಯಲಿವೆ. ಪ್ರದರ್ಶನಕ್ಕೆ ಉಚಿತ ಪ್ರವೇಶದ ವ್ಯವಸ್ಥೆ ಮಾಡಲಾಗಿದೆ. ಕೆಸಿಸಿಐ ಅಧ್ಯಕ್ಷ ಮಹೇಂದ್ರ ಲದ್ದಡ, ಎಸಿಸಿಇ  ಚೇರ್ಮೇನ್  ಸುರೇಶ ಕಿರೆಸೂರು ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next