Advertisement
ಸಾಮಾನ್ಯವಾಗಿ ಎಪ್ರಿಲ್ ಕೊನೆಯ ವಾರ ಹಾಗೂ ಮೇ ತಿಂಗಳಿನಲ್ಲಿ ನೀರಿಗಾಗಿ ಪರಿತಪಿಸುವ ಪರಿಸ್ಥಿತಿ ಇರುತ್ತಿತ್ತು. ಆದರೆ ಈ ಬಾರಿ ಮಾರ್ಚ್ ತಿಂಗಳ ಕೊನೆಯ ವಾರದಿಂದಲೇ ನೀರಿನ ûಾಮ ಕಂಡು ಬಂದಿರುವುದು ಗ್ರಾ.ಪಂ.ಗೆ ನುಂಗಲಾರದ ತುತ್ತಾಗಿದೆ.
ಸನಿಹದಲ್ಲೇ ಹೊಳೆಯಿದ್ದರೂ ಉಪ್ಪು ನೀರಾಗಿರುವ ಕಾರಣ ಬಳಕೆಗೆ ನಿರುಪಯೋಗಿಯಾಗಿದೆ. ಆಸುಪಾಸಿನ ಆತ್ರಾಡಿ, ಅಡಿಕೆ ಕೊಡ್ಲು, ಕಲ್ಮಾಡಿ, ಬಳಗೇರಿ, ಹರವರಿ, ಅಬ್ಬಿ, ಮೂಕಾಂಬಿಕಾ ಜನತಾ ಕಾಲನಿ ಹಾಗೂ ವಂಡ್ಸೆ ಪೇಟೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ನೀರು ಪೂರೈಕೆ
ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ ವಂಡ್ಸೆ ಪರಿಸರದ ಜನತೆಗೆ ಎ. 2ನೇ ವಾರದಿಂದ ಮಾಡಲಾಗುವುದು.
-ರೂಪಾ ಗೋಪಿ, ಪಿಡಿಒ ವಂಡ್ಸೆ