Advertisement

ವ್ಯಾಯಾಮ ವಿರಾಮ

03:50 AM Mar 17, 2017 | Team Udayavani |

ಕೆಲವರಿಗೆ ವ್ಯಾಯಾಮದ ಕುರಿತಾಗಿ ಒಂದು ರೀತಿಯ ತಪ್ಪು ಭಾವನೆ ಇರುತ್ತದೆ. ದಿನದಲ್ಲಿ ಒಂದು ಗಂಟೆ ವ್ಯಾಯಾಮ ಮಾಡುವ ಜಾಗದಲ್ಲಿ ಮೂರು ಗಂಟೆ ವ್ಯಾಯಾಮ ಮಾಡಿದರೆ ಬೇಗನೇ ಸಣ್ಣಗಾಗಬಹುದು, ಅದರಿಂದ ಹೆಚ್ಚು ಲಾಭ ಪಡೆಯಬಹುದು ಎಂದೆಲ್ಲಾ. ಪ್ರತಿದಿನ ಆರೋಗ್ಯಕ್ಕಾಗಿ, ಫಿಟ್‌ನೆಸ್‌ಗಾಗಿ ವ್ಯಾಯಾಮ ಮಾಡುವುದು ಒಳ್ಳೆಯದು. ಆದರೆ ಅದು ಹೆಚ್ಚಾದರೆ ಅದರಿಂದ ಆರೋಗ್ಯದ ಮೇಲೆ ಅಷ್ಟೇ ಕೆಡುಕು ಉಂಟಾಗುತ್ತದೆ.

Advertisement

ತುಂಬಾ ಜನ ವ್ಯಾಯಾಮ ಮಾಡುವ ನೆಪದಲ್ಲಿ ಅತಿಯಾದ ವ್ಯಾಯಾಮ ಮಾಡುತ್ತಾರೆ. ಅಂಥವರಿಗೆ ವ್ಯಾಯಾಮ ಎಷ್ಟು ಹೊತ್ತು ಮಾಡಬೇಕು ಎಂಬುದೇ ಒಂದು ದೊಡ್ಡ ಪ್ರಶ್ನೆಯಾಗಿರುತ್ತದೆ. ಅತಿಯಾದ ವ್ಯಾಯಾಮ ದೈಹಿಕವಾಗಿ, ಮಾನಸಿಕವಾಗಿ ತೊಂದರೆ ಉಂಟುಮಾಡುತ್ತದೆ. ಮೂಳೆಗಳ ಸವೆತ, ಸ್ನಾಯುಗಳ ಸೆಡೆತ- ಹೀಗೆ ಪ್ರಾರಂಭದಲ್ಲಿ ಚಿಕ್ಕದಾಗಿ ಕಾಣುವ ಈ ಸಮಸ್ಯೆಗಳು ವಯಸ್ಸಾದ ಹಾಗೇ ದೊಡ್ಡದಾಗಿ ಕಾಡುತ್ತ ಹೋಗುತ್ತವೆ. ಅತಿಯಾದ ವ್ಯಾಯಾಮ ಮಾಡುವುದು ನಮ್ಮ ದೇಹವನ್ನು ನಾವು ಒತ್ತಾಯಪೂರ್ವಕವಾಗಿ ದಂಡಿಸಿದಂತಾಗುತ್ತದೆ. ಇಷ್ಟಪಟ್ಟು ನಿಯಮಿತವಾಗಿ ಮಾಡುವ ವ್ಯಾಯಾಮ ದೇಹಕ್ಕೆ ಆರೋಗ್ಯ ಮತ್ತು ಚೈತನ್ಯವನ್ನು ಕೊಡುತ್ತದೆ. ನಮಗೆ ಹುಷಾರು ತಪ್ಪಿದಾಗ, ನಿಶ್ಶಕ್ತಿ ಎನಿಸಿದಾಗ ವ್ಯಾಯಾಮ ಮಾಡದೆ ದೇಹಕ್ಕೆ ವಿಶ್ರಾಂತಿ ಕೊಡುವುದು ತುಂಬಾ ಮುಖ್ಯವಾಗುತ್ತದೆ. ವ್ಯಾಯಾಮ ಮಾಡುತ್ತಲೇ ನೀವು ತೆಗೆದುಕೊಳ್ಳುವ ಆಹಾರದಲ್ಲಿ ಪ್ರೊಟೀನ್‌, ವಿಟಮಿನ್‌, ಮಿನರಲ್‌ಗ‌ಳು ಇರುವಂತೆ ನೋಡಿ ಕೊಳ್ಳಬೇಕು.

Advertisement

Udayavani is now on Telegram. Click here to join our channel and stay updated with the latest news.

Next