Advertisement

ಮೆಟ್ಟಿಲಿನಿಂದಲೂ ವ್ಯಾಯಾಮ

11:35 PM Feb 10, 2020 | mahesh |

ವ್ಯಾಯಾಮ ಎಂದರೆ ಜಿಮ್‌ನಲ್ಲಿ ಬೆವರು ಹರಿಸುವುದು, ಡಂಬಲ್ಸ್‌ ಎತ್ತುವುದು, ಟ್ರೆಡ್‌ಮಿಲ್‌ನಲ್ಲಿ ಓಡುವುದಷ್ಟೇ ಅಲ್ಲ. ಮೆಟ್ಟಿಲು ಹತ್ತುವುದರಿಂದಲೂ ನೀವು ಆರೋಗ್ಯವಂತರಾಗಿರ ಬಹುದು. ಇದು ಕೂಡಾ ಒಂದು ರೀತಿಯ ವ್ಯಾಯಾಮವೇ. ಕೊಬ್ಬು ಕರಗಿಸಲು, ದೃಢ ಶರೀರ ಹೊಂದಲು, ದೇಹದ ಸಮ ತೋಲನ ಕಾಪಾಡಿಕೊಳ್ಳಲು, ಮಾಂಸ ಖಂಡ, ಸ್ನಾಯು ಗಟ್ಟಿಗೊಳಿ ಸಲು ಮೆಟ್ಟಿಲು ಹತ್ತುವುದು ಅತ್ಯುತ್ತಮ ವಿಧಾನಗಳಲ್ಲಿ ಒಂದು.

Advertisement

ವಿವಿಧ ಸ್ನಾಯುಗಳ ಮೇಲೆ ಪ್ರಭಾವ
ವಾಕಿಂಗ್‌, ಜಾಗಿಂಗ್‌, ಓಟಗಳಿಗೆ ಹೋಲಿಸಿದರೆ ಮೆಟ್ಟಿಲು ಹತ್ತುವುದರಿಂದ ಸ್ನಾಯುಗಳಿಗೆ ಹೆಚ್ಚಿನ ವ್ಯಾಯಾಮ ದೊರೆಯುತ್ತದೆ. ಸಮತಟ್ಟಾದ ನೆಲದಲ್ಲಿ ನಡೆಯುವುದಕ್ಕಿಂದ ಮೆಟ್ಟಿಲಿನ ಮೇಲೆ ಸಂಚರಿಸುವುದರಿಂದ ವೇಗವಾಗಿ ಕೊಬ್ಬು ಕರಗುತ್ತದೆ.

ದೈಹಿಕ ಸಾಮರ್ಥ್ಯ ವೃದ್ಧಿ
ಮೆಟ್ಟಿಲು ಹತ್ತಿ ಇಳಿಯುವುದರಿಂದ ಪಾದದ ಸ್ನಾಯುಗಳು ದೃಢವಾಗುತ್ತವೆ. ಜತೆಗೆ ಪಾದಕ್ಕೂ ಸೂಕ್ತವಾದ ವ್ಯಾಯಾಮ ದೊರೆತು ನಿಯಂತ್ರಣ ಸಾಧಿಸಲು ನೆರವಾಗುತ್ತದೆ. ಈ ರೀತಿಯ ವ್ಯಾಯಾಮದಿಂದ ಶಕ್ತಿ ವೃದ್ಧಿಯಾಗುತ್ತದಲ್ಲದೆ ಇಡೀ ದಿನ ಚಟುವಟಿಕೆಯಿಂದ ಇರಲು ಸಾಧ್ಯವಾಗುತ್ತದೆ.

ರಕ್ತದೊತ್ತಡ ನಿಯಂತ್ರಣ
ಮೆಟ್ಟಿಲು ಹತ್ತಿ ಇಳಿಯುವುದು ಹೃದಯದ ಆರೋಗ್ಯದ ದೃಷ್ಟಿಯಿಂದ ಉತ್ತಮ ವ್ಯಾಯಾಮ. ಇದಷ್ಟೇ ಅಲ್ಲದೆ ರಕ್ತದೊತ್ತಡವನ್ನು ಇದು ನಿಯಂತ್ರಿಸುತ್ತದೆ.
ಮೆಟ್ಟಿಲಿನಲ್ಲಿ ಮಾಡುವ ವ್ಯಾಯಾಮ

ಮುನ್ನೆಚ್ಚರಿಕೆ
ಮೆಟ್ಟಿಲು ಹತ್ತಿ ಇಳಿಯುವುದು ಉತ್ತಮ ವ್ಯಾಯಾಮವೇನೋ ಹೌದು. ಆದರೆ ಅದನ್ನು ಮಾಡುವ ಮುನ್ನ ಕೆಲವೊಂದಿಷ್ಟು ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ.
ವ್ಯಾಯಾಮ ಆರಂಭಿಸುವ ಮುನ್ನ ಭಂಗಿ ಸೂಕ್ತವಾಗಿದೆಯೇ ಎನ್ನುವುದನ್ನು ಪರೀಕ್ಷಿಸಿಕೊಳ್ಳಿ. ಬೆನ್ನು ಬಾಗದೆ ನೆಟ್ಟಗಿರಲಿ.
ನಿಧಾನವಾಗಿ ಆರಂಭಿಸಿ ಕ್ರಮೇಣ ವೇಗ ಹೆಚ್ಚಿಸಿ
ಇನ್ನೊಂದು ಮುಖ್ಯ ಅಂಶವೆಂದರೆ ಸೂಕ್ತವಾದ ಶೂ ಧರಿಸಬೇಕು. ಎಚ್ಚರ. ಅಸಮರ್ಪಕ ಶೂವಿನಿಂದ ನಿಯಂತ್ರಣ ತಪ್ಪಿ ಗಾಯಗಳಾಗುವ ಸಾಧ್ಯತೆ ಇದೆ.

Advertisement

ಗಮನಿಸಬೇಕಾದ ಅಂಶ
ಸಮತೋಲನದ ತೊಂದರೆ ಇರುವವರು, ನಿಶ್ಶಕ್ತಿಯಿಂದ ಬಳಲಿರುವವರು ಮೆಟ್ಟಿಲಿನಲ್ಲಿ ಮಾಡುವ ವ್ಯಾಯಾಮವನ್ನು ಬಿಟ್ಟು ಬಿಡಬೇಕು. ಅಲ್ಲದೆ ಸಂಧಿವಾತ, ಕೀಲು ಸಮಸ್ಯೆ, ಉರಿಯೂತ ಹೊಂದಿರುವವರೂ ಈ ವ್ಯಾಯಾಮ ಮಾಡಬಾರದು. ಈ ವ್ಯಾಯಾಮ ಆರಂಭಿಸುವ ಮುನ್ನ ವೈದ್ಯರ ಸಲಹೆ ಪಡೆಯುವುದು ಅತ್ಯಗತ್ಯ.

ಮಾನಸಿಕ ಆರೋಗ್ಯ ವೃದ್ಧಿಗೂ ಕಾರಣವಾಗುತ್ತದೆ. ರಕ್ತ ಸಂಚಾರ ಸುಗಮವಾಗಿ ಮೆದುಳಿಗೆ ಸೂಕ್ತ ಪ್ರಮಾಣದಲ್ಲಿ ಸರಬರಾಜಾಗುವುದರಿಂದ ಮಾನಸಿಕ ಸ್ಥಿತಿ ಉತ್ತಮಗೊಳ್ಳುತ್ತದೆ. ಇದರಿಂದ ಒತ್ತಡ, ಆತಂಕ, ಕಿರಿಕಿರಿ ಕಡಿಮೆಯಾಗುತ್ತದೆ ಎನ್ನುತ್ತದೆ ಅಧ್ಯಯನ.

Advertisement

Udayavani is now on Telegram. Click here to join our channel and stay updated with the latest news.

Next