Advertisement

ಸಿಬ್ಬಂದಿಯಿಂದ ಸಭೆ ಬಹಿಷ್ಕರಿಸಿ ಧರಣಿ

01:32 PM Sep 16, 2017 | |

ವಿಜಯಪುರ: ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಸಿಬ್ಬಂದಿಗೆ ಅಸಂಸದೀಯ ಪದ ಬಳಕೆ ಮಾಡಿದ ಕಾರಣಕ್ಕೆ ಪಾಲಿಕೆ ಸಿಬ್ಬಂದಿ ಸಭೆ ಬಹಿಷ್ಕರಿಸಿ ಪ್ರತಿಭಟಿಸಿದ ಘಟನೆ ನಡೆಯಿತು.

Advertisement

ಶುಕ್ರವಾರ ನಗರಸಭೆ ಸಭಾಂಗಣದಲ್ಲಿ ಮೇಯರ್‌ ಸಂಗೀತಾ ಪೋಳ ಅಧ್ಯಕ್ಷತೆಯಲ್ಲಿ ಸಾಮಾನ್ಯಸಭೆ ನಡೆಯಿತು. ಸಭೆ ಆರಂಭಗೊಳ್ಳುತ್ತಲೇ ಸದಸ್ಯರಾದ ಪರಶುರಾಮ ರಜಪೂತ, ಮೈನುದ್ದೀನ ಬೀಳಗಿ, ಅಬ್ದುಲ್‌ ರಜಾಕ್‌ ಹೋರ್ತಿ ಇತರರು ಮೇಯರ್‌
ಮತ್ತು ಉಪ ಮೇಯರ್‌ ಬಳಸುತ್ತಿರುವ ವಾಹನ ನಿಯಮ ಬಾಹಿರವಾಗಿದೆ. ಈ ಬಗ್ಗೆ ಸ್ಪಷ್ಟೀಕರಣ ನೀಡಬೇಕು ಎಂದು ಆಗ್ರಹಿಸಿದರು.

ಈ ಹಂತದಲ್ಲಿ ಸಮಜಾಯಿಸಿ ನೀಡಲು ಸಂಬಂಧಿಸಿದ ಅಧಿಕಾರಿ ಎದ್ದು ನಿಂತಾಗ ಸದಸ್ಯರೊಬ್ಬರು ಅವರ ಕುರಿತು ಹಗುರವಾಗಿ ಮಾತನಾಡಿದರೆಂದು ದೂರಿ, ಸದಸ್ಯರ ವಿರುದ್ಧಧಿಕ್ಕಾರ ಕೂಗುತ್ತ ಸಭೆಯಿಂದ ಹೊರ ಹೋಗಿ ಪಾಲಿಕೆ ಮುಂಭಾಗದಲ್ಲಿ ಧರಣಿ
ನಡೆಸಿದರು.

ಈ ಹಂತದಲ್ಲಿ ಸದಸ್ಯರ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೇ, ತಮ್ಮ ಸಿಬ್ಬಂದಿಯನ್ನ ಸಮರ್ಥಿಸಿದ ಪಾಲಿಕೆ ಆಯುಕ್ತ ಹರ್ಷ ಶೆಟ್ಟಿ,
ಸಭೆಯನ್ನು ರದ್ದುಗೊಳಿಸಿ, ಮೇಯರ್‌ ಹಾಗೂ ಉಪ ಮೇಯರ್‌ ಬಳಸುವ ಸರ್ಕಾರಿ ವಾಹನಗಳು ಮಹಾರಾಷ್ಟ್ರ ನೋಂದಣಿ ಹೊಂದಿವೆ. ಗುತ್ತಿಗೆ ಆಧಾರದಲ್ಲಿ ಪಡೆದಿರುವ ಈ ವಾಹನಗಳು ಅಕ್ರಮವಾಗಿದ್ದು, ಇದು ನಿಯಮ ಬಾಹೀರವಾಗಿವೆ ಎಂದು ಆರೋಪಿಸಿದರು. ಸದ್ಯ ಬಳಸುತ್ತಿರುವ ಕಾರ್‌ನ ಗುತ್ತಿಗೆದಾರ ಮಹಾರಾಷ್ಟ್ರದ ಪಾಸಿಂಗ್‌ ಮಾಡಿಸಿದ್ದಾನೆ. ಇ-ಪ್ರೊಕ್ಯೂರ್‌ವೆುಂಟ್‌ ಮೂಲಕವೇ ಗುತ್ತಿಗೆ ಕರೆಯಲಾಗಿದೆ. ನೋಂದಣಿ ಎಲ್ಲಿ ಮಾಡಿಸಬೇಕು ಎಂಬುದು ವಾಹನ ಮಾಲೀಕನಿಗೆ ಬಿಟ್ಟ ವಿಚಾರವೇ ಹೊರತು ಪಾಲಿಕೆಯ ಕೆಲಸವಲ್ಲ.

ಕರ್ನಾಟಕದ ನೋಂದಣಿ ಮಾಡಿಸಿ ಹಳದಿ ಫಲಕ ಅಳವಡಿಸಲು ಸೂಚಿಸಲಾಗಿದೆ. ಅಲ್ಲದೇ ಕರ್ನಾಟಕದ ನೋಂದಣಿ ಮಾಡಿಸಿ, ಹಳದಿ
ಬಣ್ಣದ ನೋಂದಣಿ ಸಂಖ್ಯಾಫಲಕ ಅಳವಡಿಸಲು ಸೂಚಿಸಲಾಗಿದೆ. ಇದೇ ಕಾರಣಕ್ಕೆ ಗುತ್ತಿಗೆದಾರರಿಗೆ ಬಾಡಿಗೆ ಕೂಡ ಪಾವತಿ ಮಾಡಿಲ್ಲ ಎಂದು ಸಂಬಂಧಿಸಿದ ಅಧಿಕಾರಿಗಳು ಸಮಜಾಯಿಷಿ ನೀಡಿದರು.

Advertisement

ಮಾಸಿಕ 30 ಸಾವಿರ ರೂ. ಬಾಡಿಗೆ ಆಧಾರದ ಮೇಲೆ ಆದರ್ಶ ಟೂರ್ ಆಂಡ್‌ ಟ್ರ್ಯಾವೆಲ್ಸ್‌ನಿಂದ ಗುತ್ತಿಗೆ ಪಡೆಯಲಾಗಿದೆ. ಕರ್ನಾಟಕದಲ್ಲಿ ಕಡಿಮೆ ದರಕ್ಕೆ ಬಾಡಿಗೆ ವಾಹನ ದೊರೆಯದ ಕಾರಣ ಸದರಿ ಟ್ರಾವೆಲ್ಸ್‌ನವರಿಗೆ ಗುತ್ತಿಗೆ ವಹಿಸಲಾಗಿದೆ. ಹಳೆ
ವಾಹನದ ತಾಂತ್ರಿಕ ವರದಿ ನೀಡಲು ಸಮಯ ನೀಡಿ, ವರದಿ ಬಂದ ಮಾಹಿತಿ ಸಂಗ್ರಹಿಸಿ ವರದಿ ನೀಡುವುದಾಗಿ ಉತ್ತರಿಸಿದರು.

ಅಧಿಕಾರಿಗಳ ಉತ್ತರದಿಂದ ತೃಪ್ತರಾಗದ ಪರಶುರಾಮ ರಜಪೂತ, ಅಧಿಕಾರಿಗಳನ್ನು ಇಂಗ್ಲಿಷ್‌ ಪದ ಬಳಸಿ ನಿಂದಿಸಿದರು. ಇದರಿಂದ ಕುಪಿತರಾದ ಆಯುಕ್ತ ಹರ್ಷ ಶೆಟ್ಟಿ ಸಭೆಯನ್ನು ರದ್ದುಗೊಳಿಸಿ ಹೊರ ನಡೆದರು. ಆದರೆ ಸದಸ್ಯರು ಮೇಯರ್‌ ಅಧ್ಯಕ್ಷತೆಯಲ್ಲಿ ಸಭೆ ಮಂದುವರಿಸಿ ಮಹಾರಾಷ್ಟ್ರದ ವಾಹನ ಬಳಸುವ ತುರ್ತು ಅಗತ್ಯವೇನಿತ್ತು, ಬಾಡಿಗೆಗೆ ವಾಹನ ಪೂರೈಸುವ ಗುತ್ತಿಗೆದಾರರು
ನಮ್ಮ ರಾಜ್ಯದಲ್ಲಿ ಇಲ್ಲವೇ? ಅಲ್ಲದೇ ಬಾಡಿಗೆ ವಾಹನ ಪೂರೈಕೆದಾರ ಸಂಸ್ಥೆ ಹೆಸರೇನು, ಖಾಸಗಿ ಗುತ್ತಿಗೆದಾರರು ಪೂರೈಸಿರುವ ವಾಹನ ಬಳಕೆಯ ಕುರಿತು ಆರ್‌ಟಿಒ ವರದಿ ಕೊಡಿ ಎಂದು ಸದಸ್ಯರು ಪ್ರಶ್ನೆಗಳ ಸುರಿಮಳೆ ಗರೆದಾಗ ಸಭೆಯಲ್ಲಿ ಗೊಂದಲ
ಮೂಡಿತು.

ಮೇಯರ್‌ ಅನುಮತಿ ಪಡೆಯದೇ ಸಭೆ ರದ್ದುಗೊಳಿಸಿ, ಒಪ್ಪಿಗೆ ಇಲ್ಲದೇ ಸಾಮಾನ್ಯ ಸಭೆಯಂಥ ಮಹತ್ವದ ಸಭೆಯಿಂದ ಆಯುಕ್ತರು ಹೊರ ನಡೆದ ವರ್ತನೆಗೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ, ಪಾಲಿಕೆಗೆ ವಾಹನ ಬಾಡಿಗೆ ಪಡೆಯುವಲ್ಲಿ ಭಾರಿ ಅಕ್ರಮ ನಡೆದಿದ್ದು, ಈ ಅವ್ಯವಹಾರ ಪ್ರಶ್ನಿಸಿದ್ದಕ್ಕೆ ಆಯುಕ್ತರು ಅಧಿಕಾರಗಳನ್ನು ಸಮರ್ಥಿಸಿಕೊಂಡು ಸಭೆಯಿಂದ ನಿಯಮ ಬಾಹೀರವಾಗಿ ಹೊರ ನಡೆದ ಕ್ರಮ
ಅಸಭ್ಯ ವರ್ತನೆಗೆ ಸಮವಾಗಿದೆ ಎಂದು ಸದಸ್ಯರು ದೂರಿದರು. ಆದರೆ ಸದಸ್ಯರು ಹಾಗೂ ಆಯುಕ್ತರು, ಅಧಿಕಾರಿಗಳ ಮಧ್ಯೆ ಇಷ್ಟೊಂದು ಗೊಂದಲದ ಬೆಳವಣಿಗೆ ನಡೆದರೂ ವಾಹನ ಬಳಸುವ ಮೇಯರ್‌ ಮಾತ್ರ ಮೌನ ಮುರಿಯದಿರುವುದು ಅಚ್ಚರಿ
ಮೂಡಿಸಿತು.

Advertisement

Udayavani is now on Telegram. Click here to join our channel and stay updated with the latest news.

Next