Advertisement

ಸಂಭ್ರಮದ ಅಲೆಯಲ್ಲಿ ಕೇಸರಿ ಪಾಳೆಯ

03:21 PM May 25, 2019 | Team Udayavani |

ಕನಕಗಿರಿ: ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಸಮರ್ಥವಾಗಿ ಕೆಲಸ ಮಾಡಿದ್ದರಿಂದ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಗೆಲ್ಲಲು ಸಾಧ್ಯವಾಯಿತು ಎಂದು ಶಾಸಕ ಬಸವರಾಜ ದಢೇಸುಗೂರು ಹೇಳಿದರು.

Advertisement

ಪಟ್ಟಣದ ಬಿಜೆಪಿ ಕಾರ್ಯಾಲಯ ಮುಂದೆ ಶುಕ್ರವಾರ ಕಾರ್ಯಕರ್ತರು ಹಮ್ಮಿಕೊಂಡ ವಿಜಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಬಿಜೆಪಿ 25 ಸ್ಥಾನಗಳನ್ನು ಪಡೆದುಕೊಂಡಿದ್ದು, ಮೈತ್ರಿ ಸರ್ಕಾರ ಆಡಳಿತಕ್ಕೆ ಜನರು ಸರಿಯಾದ ಉತ್ತರವನ್ನು ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಲವಾರು ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದರು. ಕೊಪ್ಪಳದಲ್ಲಿ ಸಂಗಣ್ಣ ಕರಡಿಯವರು ಸೋತು ಗುಡ್ಡವನ್ನು ಸೇರುತ್ತಾರೆ ಎಂದು ಕಾಂಗ್ರೆಸ್‌ ಪಕ್ಷದ ಜಿಲ್ಲಾಧ್ಯಕ್ಷ ಚುನಾವಣೆಯ ಪ್ರಚಾರದ ಸಮಯದಲ್ಲಿ ಹೇಳಿದರು. ಆದರೆ ಸಂಗಣ್ಣನವರ ಮೇರು ವ್ಯಕ್ತಿತ್ವದ ಬಗ್ಗೆ ಅವಹೇಳಿನಕಾರಿ ಮಾತನಾಡಿದಕ್ಕೆ ಮತದಾರ ಪ್ರಭು ತಕ್ಕ ಉತ್ತರ ನೀಡಿದ್ದಾನೆ. ಸಂಗಣ್ಣ ಕರಡಿ ಕುಣಿತಕ್ಕೆ ಕಾಂಗ್ರೆಸ್‌ ಪಕ್ಷದ ಮುಖಂಡರೇ ನಾಪತ್ತೆಯಾಗಿದ್ದಾರೆ. ಕಾಂಗ್ರೆಸ್‌ ಮುಖಂಡರ ಇಲ್ಲಸಲ್ಲದ ಆರೋಪಗಳಿಗೆ ಜನರು ತಲೆಕಡಿಸಿಕೊಳ್ಳದೇ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಬಿಜೆಪಿ ಬೆಂಬಲಿಸಿದ ಮತದಾರರಿಗೆ ಅಂಭಿನಂದನೆಗಳು ಎಂದರು.

ನಂತರ ಮಂಡಲ ಅಧ್ಯಕ್ಷ ಶಿವಶರಣೇಗೌಡ ಮಾತನಾಡಿ, ಈ ಗೆಲುವು ಐತಿಹಾಸಿಕ ಗೆಲ್ಲುವಾಗಿದ್ದು, ಟೀಕೆ ಮಾಡುವವರಿಗೆ ಜನರೇ ಸರಿಯಾದ ಉತ್ತರ ಕೊಟ್ಟಿದ್ದಾರೆ ಎಂದರು. ಡಾ| ದೊಡ್ಡಯ್ಯ ಅರವಟಗಿಮಠ, ವೀರೇಶ ಸಾಲೋಣಿ ಮಾತನಾಡಿದರು.

ಪಪಂ ಸದಸ್ಯರಾದ ಮಂಜುನಾಥರೆಡ್ಡಿ ಮಾದಿನಾಳ, ಸುಭಾಷ, ಎಪಿಎಂಸಿ ನಿರ್ದೇಶಕರಾದ ಶಿವಶಂಕರ ಚನ್ನದಾಸರ, ರಾಮಚಂದ್ರಪ್ಪ ಆಕಳಕುಂಪಿ, ಪ್ರಮುಖರಾದ ಅಮರಗುಂಡಪ್ಪ ತೆಗ್ಗಿನಮನಿ, ವಾಗೇಶ ಹಿರೇಮಠ, ಮಹಾಂತೇಶ ಸಜ್ಜನ್‌, ವಿರೂಪಾಕ್ಷಪ್ಪ ಭತ್ತದ್‌, ಅಮರಪ್ಪ ಗದ್ದಿ, ಅಶ್ವಿ‌ನಿ ದೇಸಾಯಿ, ಸಣ್ಣ ಕನಕಪ್ಪ, ಡಾ| ದೇವರಾಜ, ಸಿದ್ರರಾಮಗೌಡ, ವಿರುಪಣ್ಣ ಕಲ್ಲೂರು, ಹರೀಶ ಪೂಜಾರಿ, ಶರಣಪ್ಪ ಭಾವಿಕಟ್ಟಿ, ಹನುಮೇಶ ಯಲಬುರ್ಗಿ, ಹುಲಿಗೆಮ್ಮ ನಾಯಕ, ಗ್ಯಾನಪ್ಪ ಚಿಕ್ಕಖೇಡಾ, ಮರಿರಾಜ ಭಜಂತ್ರಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next