ಚಿತ್ರದುರ್ಗ: ಹೊಸ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿಯನ್ನು ಜಿಲ್ಲೆಯಲ್ಲಿ ಸಂಭ್ರಮ-ಸಡಗರದಿಂದ ಆಚರಿಸಲಾಯಿತು. ಹಬ್ಬದ ಅಂಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಕಬ್ಬು ರಾರಾಜಿಸುತ್ತಿತ್ತು. ಕಟ್ಟುಮಸ್ತಾಗಿ ಬೆಳೆದಿರುವ ಮಾರುದ್ದದ ಕಬ್ಬಿನ ದಂಟುಗಳನ್ನು ಖರೀದಿ ಮಾಡುವುದರಲ್ಲಿ ಜನ ಮುಗಿ ಬಿದ್ದಿದ್ದರು. ಸಂಕ್ರಾಂತಿಯ ಮತ್ತೂಂದು ವಿಶೇಷ ಎಳ್ಳು. ಎಳ್ಳು ಬೆಲ್ಲ ಹಂಚಲು ಮನೆ ಮನೆಗಳಲ್ಲೂ ಹಬ್ಬದ ಸಡಗರ ಮನೆ ಮಾಡಿತ್ತು. ಮಕರ ಸಂಕ್ರಾಂತಿ ಅಂಗವಾಗಿ ಸಂಕ್ರಾಂತಿ ಅಂಗವಾಗಿ ನಗರದ ನವದುರ್ಗೆಯರು ಸೇರಿ ಎಲ್ಲಾ ದೇವಸ್ಥಾನಗಳಲ್ಲಿ ದೇವರ ಮೂರ್ತಿಗಳಿಗೆ ವಿಶೇಷ ಅಲಂಕಾರ ಮಾಡಲಾಗಿತು
ಇದನ್ನೂ ಓದಿ:ಕಬ್ಜ ಚಿತ್ರದಲ್ಲಿ ಸುದೀಪ್ ಗೆಟಪ್‌ಗೆ ಫ್ಯಾನ್ಸ್ ಫಿದಾ
ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ
ದೀಪೋತ್ಸವ: ನಗರದ ಮೆದೇಹಳ್ಳಿ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್‌ನಿಂದ 21ನೇ ವರ್ಷದ ದೀಪೋತ್ಸವ ಕಾರ್ಯಕ್ರಮ ನಡೆಯಿತು. ಅಯ್ಯಪ್ಪ ಮಾಲಾ ವ್ರತಧಾರಿಗಳು ಸೇರಿದಂತೆ ನಗರದಜನತೆ ಅಯ್ಯಪ್ಪನ ದರ್ಶನ ಪಡೆದು ಪೂಜೆ ಸಲ್ಲಿಸಿದರು.