Advertisement

ಗ್ರಾಮೀಣರಲ್ಲೂ  ಉತ್ಸಾಹ! ಎಲೆಕ್ಟ್ರಾನಿಕ್ಸ್‌ ವಸ್ತು ಖರೀದಿ

07:02 AM Feb 08, 2019 | |

ಕೇಂದ್ರ ಸರಕಾರದ ಈ ಬಾರಿಯ ಬಜೆಟ್‌ನಲ್ಲಿ ಗ್ರಾಮೀಣ ಜನರಿಗೆ ಮತ್ತು ಮಧ್ಯಮ ವರ್ಗದವರಿಗೆ ತೆರಿಗೆಯಲ್ಲಿ ವಿನಾಯಿತಿ ನೀಡಿದ್ದು, ಇದರ ನೇರ ಪರಿಣಾಮ ಎಲೆಕ್ಟ್ರಾನಿಕ್‌ ಕ್ಷೇತ್ರಗಳ ಮೇಲೆ ಬೀಳುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಈಗಾಗಲೇ ನಗರಗಳಂತೆ ಗ್ರಾಮೀಣರಲ್ಲೂ ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ಬೇಡಿಕೆ ಹೆಚ್ಚಿದ್ದು, ಪರಿಣಾಮ ಪುಟ್ಟ ಪಟ್ಟಣಗಳಲ್ಲೂ ಅಂಗಡಿಗಳು ಹುಟ್ಟಿಕೊಳ್ಳುತ್ತಿವೆ.

Advertisement

ಎಲೆಕ್ಟ್ರಾನಿಕ್‌ ವಸ್ತುಗಳ ಖರೀದಿ ಪ್ರಮಾಣವನ್ನು ಗ್ರಾಮೀಣ ಪ್ರದೇಶದ ಮಂದಿಗೆ ಹೋಲಿಕೆ ಮಾಡಿದರೆ ನಗರ ಪ್ರದೇಶದ ಮಂದಿ ಮುಂದಿದ್ದಾರೆ. 2016-17ರಲ್ಲಿ ನೋಟು ಅಪಮೌಲ್ಯಗೊಂಡ ಕಾರಣದಿಂದಾಗಿ ಎಲೆಕ್ಟ್ರಾನಿಕ್‌ ವಸ್ತುಗಳ ಖರೀದಿಗೆ ಬೇಡಿಕೆ ಕಡಿಮೆಯಾಗಿತ್ತು. ಇವಿಷ್ಟೇ ಅಲ್ಲದೆ, 2017-18ನೇ ಸಾಲಿನಲ್ಲಿ ಕೇಂದ್ರ ಸರಕಾರವು ಎಲೆಕ್ಟ್ರಾನಿಕ್‌ ವಸ್ತುಗಳಿಗೆ ವಿಧಿಸಿದ ಜಿಎಸ್‌ಟಿಯಿಂದಾಗಿ ಎಲೆಕ್ಟ್ರಾನಿಕ್ಸ್‌ ವಸ್ತುಗಳ ಮಾರಾಟ ಪ್ರಮಾಣದಲ್ಲಿ ಶೇ.7ರಷ್ಟು ಇಳಿಕೆ ಕಂಡಿತ್ತು. ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದ ಮಂದಿ ಇನ್ನೂ ಆರ್ಥಿಕವಾಗಿ ಸಬಲರಾದರೆ ಎಲೆಕ್ಟ್ರಾನಿಕ್ಸ್‌ ವಸ್ತುಗಳ ಖರೀದಿಯಲ್ಲಿ ಚೇತರಿಕೆ ಕಾಣಲು ಸಾಧ್ಯವಿದೆ ಎನ್ನುವುದು ತಜ್ಞರ ಲೆಕ್ಕಾಚಾರ.

ಅಡಿಕೆ ದರದ ಪ್ರಭಾವ
ಕರಾವಳಿ ಪ್ರದೇಶಗಳಲ್ಲಿ ಆರ್ಥಿಕತೆಯ ಮೂಲ ಇಲ್ಲಿನ ಪ್ರಮುಖ ಬೆಳೆಯಾದ ಅಡಿಕೆ. ಮಾರುಕಟ್ಟೆಯಲ್ಲಿ ಅಡಿಕೆಗೆ ಬೆಲೆ ಕಡಿಮೆ ಇದ್ದ ವೇಳೆಯಲ್ಲಿ ಎಲೆಕ್ಟ್ರಾನಿಕ್ಸ್‌ ವಸ್ತುಗಳ ಖರೀದಿ ಪ್ರಮಾಣ ಗಣನೀಯವಾಗಿ ಕುಂಠಿತ ಕಂಡಿತ್ತು. ಸದ್ಯ ಬೆಲೆಯಲ್ಲಿ ಸ್ವಲ್ಪಮಟ್ಟಿನ ಚೇತರಿಕೆ ಕಂಡುಬಂದಿದ್ದು, ನಿಧಾನವಾಗಿ ಪ್ರಗತಿಯತ್ತ ಸಾಗುತ್ತಿದೆ.

ಎಲೆಕ್ಟ್ರಾನಿಕ್‌ ವಸ್ತುಗಳಿಗೆ ನಗರ ಪ್ರದೇಶಗಳಲ್ಲಿ ಬೇಡಿಕೆ ಹೆಚ್ಚಿದ್ದ ಕಾರಣಕ್ಕೆ ನಗರದ ಹೆಚ್ಚಿನ ಕಡೆಗಳಲ್ಲಿ ತನ್ನ ಔಟ್‌ಲೆಟ್‌ಗಳನ್ನು ತೆರೆಯುತ್ತಿದೆ. ಇದೇ ಟ್ರೆಂಡ್‌ ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಕ್ಕೂ ಕಾಲಿಡುವ ಲಕ್ಷಣಗಳು ಕಂಡುಬರುತ್ತಿವೆ. ಈಗಾಗಲೇ ಗ್ರಾಮೀಣ ಭಾಗದಲ್ಲಿ ಎಲೆಕ್ಟ್ರಾನಿಕ್ಸ್‌ ವಸ್ತುಗಳ ಸರ್ವಿಸ್‌ ಸೆಂಟರ್‌ಗಳು ನಿಧಾನವಾಗಿ ತಲೆ ಎತ್ತುತ್ತಿವೆೆ.

ಟಿ.ವಿ., ಫ್ರಿಡ್ಜ್ ಗೆ ಬೇಡಿಕೆ ಹೆಚ್ಚು
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಟಿ.ವಿ. ಮತ್ತು ಫ್ರಿಡ್ಜ್ ಖರೀದಿಗೆ ಮಾತ್ರ ಬೇಡಿಕೆ ಹೆಚ್ಚಿದೆ. ನಗರ ಪ್ರದೇಶದಲ್ಲಿ ವಾಷಿಂಗ್‌ ಮೆಶಿನ್‌, ಮೈಕ್ರೋಓವನ್‌ ಸೇರಿದಂತೆ ಮತ್ತಿತರ ಎಲೆಕ್ಟ್ರಾನಿಕ್ಸ್‌ ವಸ್ತುಗಳನ್ನು ಹೆಚ್ಚಾಗಿ ಖರೀದಿ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಈ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸದ ಗುರಿಯನ್ನು ಎಲೆಕ್ಟ್ರಾನಿಕ್ಸ್‌ ಶೋರೂಂ ಮಾಲಕರು ಹೊಂದಿದ್ದಾರೆ.

Advertisement

ಗ್ರಾಮೀಣ ಪ್ರದೇಶದ ಕೆಲವರಿಗೆ ಎಲೆಕ್ಟ್ರಾನಿಕ್ಸ್‌ ವಸ್ತುಗಳನ್ನು ಯಾವ ರೀತಿ ಉಪಯೋಗ ಮಾಡಬೇಕು ಎಂಬುದರ ಬಗ್ಗೆ ಅರಿವಿರುವುದಿಲ್ಲ. ಇದೇ ಕಾರಣಕ್ಕೆ ನಗರದ ಕೆಲವೊಂದು ಎಲೆಕ್ಟ್ರಾನಿಕ್‌ ಅಂಗಡಿಗಳ ನೌಕರರು ಗ್ರಾಮೀಣ ಪ್ರದೇಶಗಳಲ್ಲಿ ವಿಶೇಷ ಡೆಮೋ ಶೋ ನಡೆಸುತ್ತಿದ್ದಾರೆ. ಅದರಲ್ಲಿಯೂ, ಸಿಟಿ ಜನರು ಹೆಚ್ಚಾಗಿ ಬಳಕೆ ಮಾಡುತ್ತಿರುವ ಮೆಕ್ರೋಓವನ್‌, ವಾಟರ್‌ ಹೀಟರ್‌ ಸೇರಿದಂತೆ ಇನ್ನಿತರ ವಸ್ತುಗಳ ಡೆಮೋ ನಡೆಸುತ್ತಿದ್ದಾರೆ.

ವಿಶೇಷ ಆಫರ್‌
ಗ್ರಾಮೀಣ ಪ್ರದೇಶದ ಮಂದಿಯನ್ನು ಸೆಳೆಯುವ ಉದ್ದೇಶದಿಂದ ಎಲೆಕ್ಟ್ರಾನಿಕ್ಸ್‌ ಶಾಪ್‌ಗ್ಳಲ್ಲಿ ವಿಶೇಷ ಆಫರ್‌ಗಳನ್ನು ನೀಡಲಾಗುತ್ತಿದೆ. ಹಬ್ಬಗಳ ಸಂದರ್ಭದಲ್ಲಿ ದರ ಕಡಿತ ಮಾಡಿ ಗ್ರಾಹಕರನ್ನು ಸೆಳೆಯಲಾಗುತ್ತದೆ. ಸಾð್ಯಚ್ ಕೂಪನ್‌, ಲಕ್ಕಿ ಕೊಡುಗೆ, ಬಡ್ಡಿ ರಹಿತ ಕಂತು ಹಣಪಾವತಿ ಸೌಲಭ್ಯವಿದ್ದು, ಕೆಲವೊಂದು ಶೋ ರೂಂಗಳಲ್ಲಿ ಗ್ರಾಮೀಣ ಪ್ರದೇಶಕ್ಕೆ ಉಚಿತ ಸರಕು ಸಾಗಾಟ ವ್ಯವಸ್ಥೆ ಕೂಡ ಇದೆ.

ನಗರ ಪ್ರದೇಶಕ್ಕೆ ಹೋಲಿಕೆ ಮಾಡಿದರೆ ಗ್ರಾಮೀಣ ಪ್ರದೇಶದಲ್ಲಿ ಎಲೆಕ್ಟ್ರಾನಿಕ್ಸ್‌ ವಸ್ತುಗಳ ಬೇಡಿಕೆ ಕಡಿಮೆ ಇದ್ದು, ಸದ್ಯ ಚೇತರಿಕೆ ಕಂಡು ಬರುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಸದ್ಯ ಟಿ.ವಿ. ಮತ್ತು ಫ್ರಿ ಡ್ಜ್ ಗಳಿಗೆ ಮಾತ್ರ ಬೇಡಿಕೆ ಹೆಚ್ಚಿದೆ.
– ರಮೇಶ್‌
ಎಲೆಕ್ಟ್ರಾನಿಕ್ಸ್‌ ಉದ್ಯಮಿ

ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ತೆರಿಗೆ ವಿನಾಯಿತಿ ನೀಡಲಾಗಿದೆ. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿರುವ ಮಧ್ಯಮ ವರ್ಗದ ಕುಟುಂಬಗಳಿಗೆ ಅನುಕೂಲವಾಗಲಿವೆ. ಉಳಿತಾಯದ ಹಣವನ್ನು ದಿನನಿತ್ಯದ ಬಳಕೆಗೆ ಬೇಕಾದ ಎಲೆಕ್ಟ್ರಾನಿಕ್ಸ್‌ ವಸ್ತುಗಳ ಖರೀದಗೆ ಉಪಯೋಗಿಸಲು ಸಹಕಾರಿ.
– ಪೂರ್ವಿಕ್‌ , ಗ್ರಾಹಕ

ನವೀನ್‌ಭಟ್ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next