ಕೊರಟಗೆರೆ: ಪಟ್ಟಣದಲ್ಲಿ ಬೆಳಿಗ್ಗೆ 6.00 ಗಂಟೆ ಸಮಯದಲ್ಲಿ ಅಬಕಾರಿ ಇಲಾಖೆಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕೊರಟಗೆರೆ ಟೌನ್ 3ನೇ ವಾರ್ಡ್ ಕುಂಬಾರ ಬೀದಿಯಲ್ಲಿರುವ ಚಾಮರಾಜ ಬಿನ್ ಲೇಟ್ ನಾಗಪ್ಪ (58) ಎಂಬುವರ ವಾಸದ ಮನೆ ಮೇಲೆ ದಾಳಿ ಮಾಡಿ 8.280 ಲೀ ಮದ್ಯವನ್ನು ಅಬಕಾರಿ ನಿರೀಕ್ಷಕಿಯಾದ ಶ್ರೀ ಲತಾ ಅವರ ತಂಡ ವಶ ಪಡಿಸಿಕೊಂಡಿದ್ದಾರೆ.
ಆರೋಪಿ ಚಾಮರಾಜ (58)ವರ್ಷ 8.280 ಲೀ ಮದ್ಯವನ್ನು ಮಾರಾಟದ ಉದ್ದೇಶಕ್ಕಾಗಿ ಅಕ್ರಮವಾಗಿ ಸಂಗ್ರಹಿಸುವುದು ಕಂಡು ಬಂದಿದ್ದರಿಂದ, ಅಧಿಕಾರಿಗಳು ಇವರನ್ನು ಸ್ಥಳದಲ್ಲಿಯೇ ದಸ್ತಗಿರಿ ಮಾಡಿ ಮುದ್ದೆ ಮಾಲನ್ನು ಇಲಾಖೆ ವಶಕ್ಕೆ ಪಡೆದು ಆರೋಪಿತನ ವಿರುದ್ದ ಘೋರ ಪ್ರಕರಣ ದಾಖಲಿಸಿ, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಹಾಜರುಪಡಿಸಿದ್ದಾರೆ.
ಈ ದಾಳಿ ಸಂದರ್ಭದಲ್ಲಿ ಅಬಕಾರಿ ನಿರೀಕ್ಷಕರ ಮಾರ್ಗದರ್ಶನದಲ್ಲಿ ಅಬಕಾರಿ ಉಪ ನಿರೀಕ್ಷಕರಾದ ವೈಷ್ಣವಿ ಕುಲಕರ್ಣಿ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಅಬಕಾರಿ ಪೇದೆಗಳಾದ ಮಲ್ಲಿಕಾರ್ಜುನ್ ಮೊರಖಂಡಿ, ಮಂಜುಳ, ಮತ್ತು ವಾಹನ ಚಾಲಕ ಮಧು ಹಾಜರಿದ್ದರು.
ಇದನ್ನೂ ಓದಿ : ಸೆಲ್ಫಿ ತೆಗೆದುಕೊಳ್ಳಲು ಹೋದ ಬೆಂಬಲಿಗರ ವಿರುದ್ಧ ಡಿಕೆ ಶಿವಕುಮಾರ್ ಗರಂ