ಮಾಗಡಿ: ಪಟ್ಟಣದ ಬಹುತೇಕ ಬಡಾವಣೆಗಳಲ್ಲಿ ನಾಯಿಗಳ ಹಾವಳಿ ಮಿತಿ ಮೀರಿದೆ. ಬೆಳಗ್ಗೆ, ಸಂಜೆ ವಾಯುವಿಹಾರಕ್ಕೆ ಬರುವ ಸಾರ್ವಜನಿಕರು ಕೈಯಲ್ಲಿ ಕೋಲು ಹಿಡಿದು ವಾಯು ವಿಹಾರ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಪಟ್ಟಣದ ಮುಖ್ಯ ರಸ್ತೆ ಸೇರಿದಂತೆ ಎಲ್ಲೆಂದರಲ್ಲಿ ಗುಂಪಿನಲ್ಲಿ ತಿರುಗಾಡುವ ನಾಯಿಗಳು ಸಿಕ್ಕ ಸಿಕ್ಕವರ ಮೇಲೆರಗಿ ಗಾಯಗೊಳಿಸುತ್ತಿವೆ. ಅದರಲ್ಲೂ ಶಾಲಾ ಮಕ್ಕಳು ರಸ್ತೆಯಲ್ಲಿ ಸಂಚಾರ ಮಾಡಲು ತುಂಬ ತೊಂದರೆಯಾಗಿದೆ. ಮಕ್ಕಳು ಹೊರಗಡೆ ಬಂದರೆ ಸಾಕು, ನಾಯಿಗಳ ಕಾಟಕ್ಕೆ ಹೆದರುತ್ತಿದ್ದಾರೆ. ಕನಿಷ್ಠ ಪೋಷಕರ ಜೊತೆ ತಿರುಗಾಡಲು ಮಕ್ಕಳು ಮನೆಯಿಂದ ಹೊರಬರದೆ ಭಯ ಭೀತಿಗೊಂಡಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯ: ಪಟ್ಟಣದಲ್ಲಿನ ವಿವಿಧ ಬಡಾವಣೆಗಳಲ್ಲಿ ನಾಯಿಗಳ ಹಾವಳಿಯನ್ನು ನಿಯಂತ್ರಿಸುವಲ್ಲಿ ಪುರಾಡಳಿತದ ಅಧಿಕಾರಿ ವರ್ಗ ಸಂಪೂರ್ಣ ವಿಫಲವಾಗಿದ್ದಾರೆ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಪ್ರಮುಖ ಕಾರಣವಾಗಿದೆ ಎಂಬ ದೂರುಗಳು ಕೇಳಿ ಬರುತ್ತಿದೆ. ನಾಯಿಗಳ ಹಾವಳಿಯಿಂದ ರಾತ್ರಿವೇಳೆಯೂ ನಿದ್ದೆ ಮಾಡಲಾಗದ ಪರಿಸ್ಥಿತಿ ಇದೆ ಎಂದು ಅಧಿಕಾರಿಗಳ ವಿರುದ್ಧ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪುರಸಭೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಿ: ಮನೆ ಮುಂದೆ ಇರುವ ಪಾತ್ರ, ಚಪ್ಪಲಿಗಳನ್ನು ನಾಯಿಗಳು ಹೊತ್ತೂಯುತ್ತಿವೆ. ಭಯದಲ್ಲೇ ಬದುಕು ನಡೆಸಬೇಕಾದ ಪರಿಸ್ಥಿತಿಯಿದೆ. ಮಳೆಗಾಲ ನಾಯಿಗಳು ಸಂತಾನೋತ್ಪತಿಗೂ ಸಕಾಲವಾಗಿದೆ. ಇದರಿಂದ ಮತ್ತೂಷ್ಟು ನಾಯಿಗಳ ಸಂಖ್ಯೆ ಹೆಚ್ಚಾಗುವ ಆತಂಕವಿದೆ. ಇನ್ನಾದರೂ ಪುರಸಭೆ ಅಧಿಕಾರಿಗಳು ಎಚ್ಚೆತ್ತು ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ನೀಡಬೇಕಾಗಿದೆ.
● ತಿರುಮಲೆ ಶ್ರೀನಿವಾಸ್