Advertisement

ಪರೀಕ್ಷೆ: ಕುರ್ತಾ ಪೈಜಾಮಕ್ಕೆ ಅವಕಾಶವಿಲ್ಲ

08:06 PM Aug 04, 2022 | Team Udayavani |

ಬೆಂಗಳೂರು: ಕೆಪಿಟಿಸಿಎಲ್‌ ಕಿರಿಯ ಎಂಜಿನಿಯರ್‌ ಹಾಗೂ ಸಹಾಯಕ ಎಂಜಿನಿಯರ್‌ ಹುದ್ದೆಗೆ ನೇರ ನೇಮಕಾತಿ ಪರೀಕ್ಷೆ ಆ. 7ರಂದು ನಡೆಯಲಿದ್ದು, ಇದಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ವಸ್ತ್ರ ಸಂಹಿತೆ ನಿಗದಿ ಮಾಡಿದೆ.

Advertisement

ಎನ್‌95 ಮಾಸ್ಕ್ ಧರಿಸುವಂತೆ ಸೂಚಿಸಿದೆ. ಪೂರ್ಣ ತೋಳಿನ ಶರ್ಟ್‌ ಧರಿಸಲು ಅವಕಾಶವಿಲ್ಲ. ಬಟ್ಟೆಗಳು ಕೂಡ ಹಗುರವಾಗಿರಬೇಕು. ಕುರ್ತಾ, ಪೈಜಾಮಕ್ಕೆ ಅವಕಾಶವಿಲ್ಲ. ಮಹಿಳಾ ಅಭ್ಯರ್ಥಿಗಳು ವಿಸ್ತಾರವಾದ ಕಸೂತಿ, ಹೂಗಳು, ಬಟನ್‌ ಹೊಂದಿರುವ ಡ್ರೆಸ್‌ಗಳನ್ನು ಧರಿಸುವಂತಿಲ್ಲ. ಶೂಗಳನ್ನು ನಿಷೇಧಿಸಿದ್ದು, ಸರಳ ಸ್ಯಾಂಡಲ್‌ ಅಥವಾ ಚಪ್ಪಲಿಯನ್ನು ಧರಿಸುವಂತೆ ಸೂಚಿಸಿದೆ.

ಪ್ರವೇಶ ಪತ್ರ ಇಲ್ಲದೆ ಯಾವುದೇ ಅಭ್ಯರ್ಥಿಯನ್ನು ಪರೀಕ್ಷಾ ಕೇಂದ್ರದ ಪ್ರವೇಶಕ್ಕೆ ಅನುಮತಿ ನೀಡುವುದಿಲ್ಲ. ಸರಕಾರ‌ದಿಂದ ಮಾನ್ಯವಾದ ಫೋಟೋ ಸಹಿತ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತರುವಂತೆ ಕೆಇಎ ಸೂಚಿಸಿದೆ. ಹೆಚ್ಚಿನ ಮಾಹಿತಿಗೆ /kea.kar.nic.in.  ವೆಬ್‌ಸೈಟ್‌ ಅನ್ನು ಸಂಪರ್ಕಿಸಬಹುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next