Advertisement

1,242 ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಮಾರ್ಚ್ 12ರಿಂದ ಪರೀಕ್ಷೆ ; ಇಲ್ಲಿದೆ ಹೆಚ್ಚಿನ ಮಾಹಿತಿ

08:54 PM Feb 15, 2022 | Team Udayavani |

ಬೆಂಗಳೂರು: ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ 1,242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಗೆ ಮಾರ್ಚ್ 12ರಿಂದ 16ರವರೆಗೆ ಪರೀಕ್ಷೆ ನಡೆಯಲಿದೆ. ಅರ್ಹ ಅಭ್ಯರ್ಥಿಗಳು ಪ್ರವೇಶಪತ್ರವನ್ನು ಫೆ.28ರಿಂದ //kea.kar.nic.on ಜಾಲತಾಣದಲ್ಲಿ ಡೌನ್-ಲೋಡ್ ಮಾಡಿಕೊಳ್ಳಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

Advertisement

ಈ ಬಗ್ಗೆ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯ ಅವರು ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಅದು ಕೆಳಕಂಡಂತಿದೆ:

ಇದರಂತೆ ಮಾರ್ಚ್ 12ರಂದು ಮಧ್ಯಾಹ್ನ 2.30ರಿಂದ 4.30ರವರೆಗೆ ಸಾಮಾನ್ಯ ಜ್ಞಾನ ಕಡ್ಡಾಯ ಪತ್ರಿಕೆ (50 ಅಂಕ), 13ರಂದು ಬೆಳಿಗ್ಗೆ 10.30ರಿಂದ 12.30ರವರೆಗೆ ಕಡ್ಡಾಯ ಕನ್ನಡ (100 ಅಂಕ), ಮಧ್ಯಾಹ್ನ 2.30ರಿಂದ 4.30ರವರೆಗೆ ಕಡ್ಡಾಯ ಇಂಗ್ಲಿಷ್ (100 ಅಂಕ) ಪರೀಕ್ಷೆ ನಡೆಯಲಿದೆ.

ಉಳಿದಂತೆ, ತಲಾ 250 ಅಂಕಗಳುಳ್ಳ ಐಚ್ಛಿಕ ವಿಷಯಗಳ ಪರೀಕ್ಷೆ ನಡೆಯಲಿವೆ. ಇದರಂತೆ, ಮಾರ್ಚ್ 14ರಂದು ಬೆಳಿಗ್ಗೆ 10ರಿಂದ 1ರವರೆಗೆ ಕನ್ನಡ, ಉರ್ದು, ಸಸ್ಯಶಾಸ್ತ್ರ, ಭೂಗೋಳ ಮತ್ತು ಫ್ಯಾಷನ್ ಟೆಕ್ನಾಲಜಿ, 14ರ ಮಧ್ಯಾಹ್ನ 2ರಿಂದ 5ರವರೆಗೆ ರಾಜ್ಯಶಾಸ್ತ್ರ, ಮೈಕ್ರೋಬಯಾಲಜಿ ಮತ್ತು ಭೂಗರ್ಭಶಾಸ್ತ್ರ, 15ರಂದು ಬೆಳಿಗ್ಗೆ ಇತಿಹಾಸ, ಕಾಮರ್ಸ್, ಗಣಿತ ಮತ್ತು ಪ್ರಾಣಿಶಾಸ್ತ್ರ, 15ರ ಮಧ್ಯಾಹ್ನ ಅರ್ಥಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ, ಇಂಗ್ಲಿಷ್ ಮತ್ತು ಸಮಾಜಕಾರ್ಯ, 16ರಂದು ಬೆಳಿಗ್ಗೆ ಶಿಕ್ಷಣ ಶಾಸ್ತ್ರ, ಹಿಂದಿ, ಕಂಪ್ಯೂಟರ್ ಸೈನ್ಸ್, ಕಾನೂನು ಮತ್ತು ಸ್ಟ್ಯಾಟಿಸ್ಟಿಕ್ಸ್, ಅಂದು ಮಧ್ಯಾಹ್ನ ಮ್ಯಾನೇಜ್ಮೆಂಟ್, ಬಯೋಕೆಮಿಸ್ಟ್ರಿ, ಎಲೆಕ್ಟ್ರಾನಿಕ್ಸ್ ಮತ್ತು ಸಮಾಜಶಾಸ್ತ್ರ ಪರೀಕ್ಷೆಗಳು ನಡೆಯಲಿವೆ.

ಇದನ್ನೂ ಓದಿ :  ಹಿಜಾಬ್ -ಕೇಸರಿ ವಿವಾದ : ಕೊಪ್ಪಳ ನಗರ ಪ್ರದೇಶದಲ್ಲಿ ಐದು ದಿನ 144 ನಿಷೇಧಾಜ್ಞೆ

Advertisement
Advertisement

Udayavani is now on Telegram. Click here to join our channel and stay updated with the latest news.

Next