Advertisement

ಮಾಜಿ ಉಪ ರಾಷ್ಟ್ರಪತಿ ಪಾಕ್ ಐಎಸ್‍ಐ ಸಂಪರ್ಕ ಆತಂಕಕಾರಿ: ಯತ್ನಾಳ್

06:19 PM Jul 16, 2022 | Team Udayavani |

ವಿಜಯಪುರ: ಭಾರತವ ವಿರುದ್ಧದ ಐಎಸ್‍ಐ ಏಜೆಂಟ್ ನೊಂದಿಗೆ ದೇಶದ ಮಾಜಿ ಉಪ ರಾಷ್ಟ್ರಪತಿ ನಂಟು ಹೊಂದಿರುವ ವಿಷಯ ಸಾಕ್ಷಿ ಸಮೇತ ಬಹಿರಂಗವಾಗಿದೆ. ದೇಶದ ಆತಂರಿಕ ಭದ್ರತೆ ವಿಷಯದಲ್ಲಿ ಇದು ಅತ್ಯಂತ ಆತಂಕಕಾರಿ ಸಂಗತಿ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯಿಸಿದ್ದಾರೆ.

Advertisement

ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಉಪ ರಾಷ್ಟ್ರಪತಿ ವಿರುದ್ಧ ಸಾಕ್ಷಾಧಾರ ಬಹಿರಂಗ ಮಾತ್ರವಲ್ಲ, ಇದಲ್ಲದೇ ಇದರ ಹಿಂದಿರುವ ರಾಜಕಾರಣಗಳು, ರಾಜಕೀಯ ಪಕ್ಷಗಳು ಯಾವ್ಯಾವು ಎಂಬುದರ ಬಣ್ಣವೂ ಬಯಲಾಗುತ್ತದೆ ಎಂದರು.

ಮತ್ತೊಂದೆಡೆ 2047ಕ್ಕೆ ಭಾರತವನ್ನು ಸಂಪೂರ್ಣ ಇಸ್ಲಾಮೀಕರಣ ರಾಷ್ಟ್ರ ಮಾಡುವ ಷಡ್ಯಂತ್ರ ನಡೆಸಿರುವ ಸಂಘಟನೆಗಳ ಕುತಂತ್ರಗಳೂ ಬಹಿರಂಗವಾಗಿವೆ. ಈ ಕುರಿತು ಇನ್ನಷ್ಟು ನಿಖರ ಸಾಕ್ಷಾಧಾರ ಸಿಕ್ಕ ಮೇಲೆ ಸರ್ಕಾರ ಎಸ್‍ಡಿಪಿಐ, ಪಿಎಫ್‍ಐ, ಪಿಡಿಎಫ್ ಸೇರಿದಂತೆ ದೇಶದ್ರೋಹಿ ಸಂಘಟನೆಗಳನ್ನು ನಿಷೇಧ ಹೇರಲಿದೆ ಎಂದರು.

ಇಂಥ ಎಲ್ಲ ದೇಶ ವಿರೋಧ ಕೃತ್ಯಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ರೂಪಿಸಿರುವ ಆಗ್ನಿಪಥ ಯೋಜನೆ ದೇಶಪ್ರೇಮಿ ಯುಕ ಪಡೆ ಕಟ್ಟುವಲ್ಲಿ ನೆರವಾಗಲಿದೆ. ದೇಶದ ಸಂರಕ್ಷಣೆಗೆ ಆಂತರಿಕ ಭದ್ರತೆ ರೂಪಿಸಲು ಇದು ಪರಿಪಕ್ವ ಕಾಲ. ಭವಿಷ್ಯದ ಭಾರತ ಉಳಿವಿಗಾಗಿ ಪ್ರಧಾನಿ ಮೋದಿ ಅಗ್ನಿಪಥ ಯೋಜನೆ ಅತ್ಯಂತ ಸಹಕಾರಿ ಆಗಲಿದೆ ಎಂದರು.

ವಿಜಯಪುರ ಜಿಲ್ಲೆಯಲ್ಲಿ ನಮ್ಮ ಸಂಸ್ಥೆಯೂ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಅಗ್ನಿಪಥದಿಂದ ನಿರ್ಗಮಿಸುವ ಸೇನಾನಿಗಳಿಗೆ ಕನಿಷ್ಟ 25 ಸಾವಿರ ರೂ. ಸಂಬಳ ನೀಡಿ ಅವರ ಸೇವೆ ಪಡೆಯುವ ಯೋಜನೆ ರೂಪಿಸಿದ್ದೇವೆ ಎಂದರು.

Advertisement

ಶಾಸಕ ಶಿವಾನಂದ ಪಾಟೀಲ್ ಬ್ಲಾಕ್‍ಮೇಲರ್

ಚುನಾವಣೆ ಬರುತ್ತಲೇ ಜಿಲ್ಲೆಯಲ್ಲಿ ಬ್ಲಾಕ್‍ಮೇಲ್ ಲೀಡರ್ ರಾಜಕಾರಣ ಹೆಚ್ಚುತ್ತದೆ. ಬಸವನಬಾಗೇವಾಡಿ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ ಅವರು ನನ್ನ ವಿರುದ್ಧ ಪಕ್ಷೇತರರಾಗಿ ಸ್ಪರ್ಧೆಗೆ ನೀಡಿರುವ ಸವಾಲು ಕೂಡ ಬ್ಲಾಕ್‍ಮೇಲ್ ತಂತ್ರವೇ. ಹೀಗಾಗಿ ಇಂಥವರ ಹೇಳಿಕೆಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ಯತ್ನಾಳ್ ಕಿಡಿ ಕಾರಿದರು.

ಕೆಲವರಿಗೆ ಇಂಥ ಹೇಳಿಕೆಗಳ ಹುಚ್ಚು ಇರುತ್ತದೆ. ಬಬಲೇಶ್ವರಕ್ಕೆ ಬರುತ್ತೇನೆ, ವಿಜಯಪುರ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ ಎಂದೆಲ್ಲ ರಾಜಕೀಯ ಬ್ಲಾಕ್‍ಮೇಲ್ ಮಾಡುವ ಅಂಥವರ ಹೇಳಿಕೆಗೆಲ್ಲ ನಾನು ಪ್ರತಿಯಕ್ರಿಯಿಸುವ ಅಗತ್ಯವೂ ಇಲ್ಲ ಎಂದು ಸಿಡುಕಿದರು.

ಪಿಎಸ್‍ಐ ನೇಮಕಾತಿ ಹಗರಣದಲ್ಲಿ ಮಾಜಿ ಸಿ.ಎಂ. ಮಕ್ಕಳಿದ್ದಾರೆ ಎಂದು ಶಾಸಕ ಯತ್ನಾಳ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಆದರೂ ಅವರ ವಿರುದ್ಧ ಕ್ರಮ ಕೈಗೊಳ್ಳುವ ಶಕ್ತಿ ಬಿಜೆಪಿ ಪಕ್ಷಕ್ಕಿಲ್ಲ, ಅವರನ್ನು ರಕ್ಷಿಸುತ್ತಿರುವ ಶಕ್ತಿ ಯಾವುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಟ್ವೀಟ್ ಮಾಡಿದ್ದಕ್ಕೆ ಪ್ರತಿಕ್ರಿಯಿಸಿದ ಯತ್ನಾಳ್ , ”ದೇವರೇ ನನ್ನ ರಕ್ಷಕ ಹಾಗೂ ದೇವರೇ ನನಗೆ ದೊಡ್ಡ ಶಕ್ತಿ” ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next